ಫೆಂಗ್ ಷುಯ್ 10 ವಾಸ್ತು ಟಿಪ್ಸ್..! ಇವುಗಳನ್ನು ಅನುಸರಿಸಿದರೆ ದಂಪತಿಗಳು ಯಾವಾಗಲೂ ಸಂತಸದಿಂದಿರುತ್ತಾರೆ..!!

ಜೀವನದ ಕೊನೆಯವರೆಗೂ ಇಬ್ಬರೂ ಒಟ್ಟಿಗೆ ಇರಬೇಕೆಂದು, ಯಾವುದೇ ತಂಟೆ ತಕರಾರುಗಳು ಇಲ್ಲದೆ, ಅಪಾರ್ಥಗಳು ಬರದಂತೆ ಸುಖ ಸಂತೋಷದಿಂದ ಇರಬೇಕೆಂದು ದಂಪತಿಗಳ ಇಚ್ಛೆಯಾಗಿರುತ್ತದೆ. ಆದರೆ, ಕೆಲವರಿಗೆ ಮಾತ್ರ ಇಂತಹ ಭಾಗ್ಯ ಪ್ರಾಪ್ತಿಯಾಗುತ್ತದೆ. ಕೆಲವರಂತೂ ಯಾವಾಗಲೂ ಯಾವುದೋ ಇಂದು ವಿಷಯಕ್ಕೆ ಕಿತ್ತಾಡುತ್ತಾ ಅತೀ ಕಷ್ಟದಿಂದ ಜೀವನ ಸಾಗಿಸುತ್ತಿರುತ್ತಾರೆ. ವಿಚ್ಛೇದನ ದೊಂದಿಗೆ ಅವರ ದಾಂಪತ್ಯ ಕೊನೆಗೊಳ್ಳುತ್ತದೆ. ಆದರೆ, ಇಂತಹ ಯಾವುದೇ ತೊಂದರೆಗಳು ಬರದಿರಲು ಫೆಂಗ್ ಷುಯ್ ವಾಸ್ತು ಪರಿಹಾರ ನೀಡುತ್ತದೆ. ಅದಕ್ಕಾಗಿ ನಾವು ಏನು ಮಾಡಬೇಕೆಂದು ತಿಳಿಯೋಣ.

1. ಕೆಂಪು ಇಂಕಿನ ಪೆನ್.
ಕೆಂಪು ಬಣ್ಣದ ಇಂಕ್ ಇರುವ ಪೆನ್ನನ್ನು ನಿಮ್ಮ ಮಲಗುವ ಕೋಣೆಯಲ್ಲಿಡಿ. ಆ ಪೆನ್ನಿನಿಂದ, ನಿಮ್ಮ ಅರ್ದಾಂಗಿಯ ಮೇಲೆ ನಿಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತ ಬರೆಯಿರಿ. ನಿಮ್ಮ ಪ್ರೀತಿಗೆ ಸಂಬಂಧಿಸಿದ ಘಟನೆಗಳ ಕುರಿತು ಒಂದು ಪುಸ್ತಕದಲ್ಲಿ ಬರೆಯಿರಿ. ಕೆಂಪು ಬಣ್ಣ, ಪ್ರೀತಿ, ರೋಮ್ಯಾನ್ ಗಳ ಪ್ರತೀಕ. ಆದುದರಿಂದ ಗಂಡ ಹೆಂಡಿರ ನಡುವೆ ಪ್ರೇಮಾಂಕುರಿಸುತ್ತದೆ.

2. ಆನೆಗಳ ಬೊಂಬೆಗಳು.
ಮರದಿಂದ ತಯಾರಿಸಲಾದ ಎರಡು ಆನೆಯ ಬೊಂಬೆಗಳನ್ನು ಮಲಗುವ ಕೋಣೆಯಲ್ಲಿರಿಸಿ. ಇದರಿಂದ ಫೆಂಗ್ ಷುಯ್ ವಾಸ್ತು ಪ್ರಕಾರ ದಂಪತಿಗಳ ನಡುವೆ ಕಲಹಗಳು ಉಂಟಾಗುವುದಿಲ್ಲ.

3. ಕ್ರಿಸ್ಟಲ್ಸ್.
ಕ್ರಿಸ್ಟಲ್ ಗಳನ್ನು ಮಲಗುವ ಕೋಣೆಯಲ್ಲಿ ನೇತಾಡಿಸಿ. ಹೀಗೆ ಮಾಡುವುದರಿಂದ ಪಾಸಿಟಿವ್ ತರಂಗಗಳು ಉತ್ಪತ್ತಿಯಾಗುತ್ತವೆ. ದಂಪತಿಗಳ ನಡುವೆ ಇರುವ ಕಲಹಗಳು ತೊಲಗುತ್ತವೆ. ಸಂತಸದಿಂದ ಸಂಸಾರ ಸಾಗಿಸುತ್ತಾರೆ.

4. ಕೆಂಪು ಬಣ್ಣ.
ಬೆಡ್ ರೂಂನಲ್ಲಿರುವ ಹಾಸಿಗೆ, ಬೆಡ್ ಶೀಟ್ ಗಳು, ಕಿಟಕಿಯ ಹಾಗೂ ಬಾಗಿಲುಗಳ ಕರ್ಟನ್ಗಳು ಕೆಂಪು ಬಣ್ನದ್ದಗಿರಲಿ. ಬೆಡ್ ರೂಂನಲ್ಲಿರುವ ಎಲ್ಲಾ ವಸ್ತುಗಳೂ ಕೆಂಪು ಬಣ್ಣ ಹೊಂದಿರಲಿ. ಹೀಗೆ ಮಾಡಿದಲ್ಲಿ ದಂಪತಿಗಳ ನಡುವಿನ ಕಲಹಗಳು ದೂರವಾಗುತ್ತವೆ.

Image result for paired dolls

5. ಜೋಡಿ ಬೊಂಬೆಗಳು.
ಬೆಡ್ ರೂಂನಲ್ಲಿರಿಸುವ ಆಲಂಕಾರಿಕ ವಸ್ತುಗಳು ಯಾವಾಗಲೂ ಬೆಸ ಸಂಖ್ಯೆಯಲ್ಲಿರಲಿ. ಜೋಡಿ ಪಕ್ಷಿಗಳು, ಜೋಡಿ ಮನುಷ್ಯರು ಹೀಗೆ ಎಲ್ಲವೂ ಜೋಡಿಯಾಗಿರಲಿ. ಇದರಿಂದಾಗಿ ದಂಪತಿಗಳ ನಡುವೆ ಇರಬಹುದಾದ ಅಪಾರ್ಥಗಳು ದೂರವಾಗಿ ದಂಪತಿಗಳು ಸುಖವಾಗಿರುತ್ತಾರೆ.

6.ಆರೆಂಜ್.
ಆರೆಂಜ್ ಪರಿಮಳವುಳ್ಳ ಸ್ಪ್ರೇಗಳನ್ನು ಬೆಡ್ ರೂಂನಲ್ಲಿ ಸ್ಪ್ರೇ ಮಾಡಬೇಕು. ಇದರಿಂದ ಪಾಸಿಟಿವ್ ತರಂಗಗಳು ಉತ್ಪತ್ತಿಯಾಗಿ ವಾಸ್ತು ದೋಷ ನಿವಾರಣೆಯಾಗಿ ,ದಂಪತಿಗಳು ಸುಖವಾಗಿರುತ್ತಾರೆ.

7. ಲೈಟ್ ಗಳು.
ಹಾಸಿಗೆಯ ಎರಡೂ ಕಡೆ ಚಿಕ್ಕ ಬೆಡ್ ಲೈಟ್ ಗಳನ್ನು ಇರಿಸುವುದರಿಂದ ಪಾಸಿಸಿವ್ ತರಂಗಗಳು ಹೊರಹೊಮ್ಮಿ, ದಂಪತಿಗಳ ನಡುವೆ ಕಲಹಗಳು ಇರುವುದಿಲ್ಲ.

8.ಕಸ.
ಬೆಡ್ ರೂಂ ನಲ್ಲಿ ಕಸವಿರಲೇ ಬಾರದು. ಕಸವಿದ್ದಲ್ಲಿ ದಂಪತಿಗಳ ಸಂಸಾರ ಸರಾಗವಾಗಿ ಸಾಗದು. ಅನಗತ್ಯ ವಸ್ತುಗಳು, ಕಸ ಬೆಡ್ ರೂಂನಲ್ಲಿ ಇರದಂತೆ ನೋಡಿಕೊಳ್ಳಬೇಕು.

9. ಬಹುಮಾನಗಳು.
ದಂಪತಿಗಳು ಆಗಾಗ್ಗೆ ಒಬ್ಬರಿಗೊಬ್ಬರು ಬಹುಮಾನಗಳನ್ನು ಕೊಡುತ್ತಿರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವೆ ಪ್ರಿತಿ, ಆತ್ಮೀಯತೆ ಹೆಚ್ಚುತ್ತದೆ. ಆದರೆ, ಕತ್ತಿ, ಬ್ಲೇಡ್ ಮೊದಲಾದ ಹರಿತವಾದ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಬಾರದು.

10. ಗುಲಾಬಿಗಳು.
ಪಿಂಕ್ ಇಲ್ಲವೇ ಕೆಂಪು ಬಣ್ಣದ ಗುಲಾಬಿಗಳನ್ನು ಬೆಡ್ ರೂಂನಲ್ಲಿ ಇರಿಸಬೇಕು. ಇದರಿಂದಾಗಿ ವಾಸ್ತು ದೋಷ ನಿವಾರಣೆಯಾಗಿ, ಪ್ರೀತಿ ಚಿಗುರುತ್ತದೆ.


Click Here To Download Kannada AP2TG App From PlayStore!