14 ವರ್ಷದ ಈ ಬಾಲಕ 5 ಕೋಟಿಯ ಒಪ್ಪಂದವನ್ನು ಮಾಡಿಕೊಂಡಿದ್ದು ಹೇಗೆ…?!

ಎಲ್ಲರಿಗೂ ಆಶ್ಚರ್ಯವಾಗುವಂತಹ ವಿಷಯ ಇದು. ಬುದ್ಧಿವಂತಿಕೆಗೆ ವಯಸ್ಸಿನ ಭೇದವಿಲ್ಲ ಎಂದು ಸಾರುವ ಕಥೆಯಿದು. 14 ವರ್ಷ ಬಾಲಕ ಗುಜರಾತ್’ನಲ್ಲಿ ನಡೆಯುತ್ತಿರುವ ವೈಬ್ರಂಟ್‌ ಜಾಗತಿಕ ಶೃಂಗಸಭೆಯಲ್ಲಿ ತಾನು ಡಿಸೈನ್ ಮಾಡಿದ ಡ್ರೋನ್ ಅನ್ನು ಪ್ರದರ್ಶನ ತಂದಿದ್ದನು. ಅಷ್ಟೇ ಗುಜರಾತ್ ಸರ್ಕಾರ ತಮಗೆ ಅಂತಹ ಡ್ರೋನ್ ಬೇಕೆಂದು ಆತನ ಜೊತೆ ಬರೊಬ್ಬರಿ 5 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ. ಯುದ್ಧ ಪ್ರದೇಶಗಳಲ್ಲಿ, ಗಡಿ ಪ್ರದೇಶಗಳಲ್ಲಿ ಅಡಗಿಸಿ ಇಟ್ಟಿರುವ ಮದ್ದುಗುಂಡುಗಳನ್ನು ಗುರ್ತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸುವ ಮೂರು ವಿಧದ ಡ್ರೋನ್’ಗಳನ್ನು ಈ ಪುಟ್ಟ ಪೋರ ತಯಾರಿಸಿದ್ದಾನೆ.

ಕಳೆದ ಒಂದು ವರ್ಷದಿಂದ ತಾನು ಇಂತಹ ಡ್ತೋನ್’ಗಳನ್ನು ನಿರ್ಮಿಸುತ್ತಿದ್ದು, ಟಿವಿ ನೋಡುವಾಗ ತುಂಬಾ ಜನ ಸೈನಿಕರು ಸ್ಪೋಟಕಗಳಿಂದ ಸಾವನ್ನಪ್ಪುವುದು, ತೀವ್ರವಾಗಿ ಗಾಯಗೊಳ್ಳುವುದನ್ನು ನೋಡಿ ಈ ಆಲೋಚನೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಮೂರು ವಿಧದ ಡ್ರೋನ್’ಗಳನ್ನು ತಯಾರಿಸಲು 5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾನೆ. ಈ ಡ್ರೋನ್’ನಲ್ಲಿ ಇನ್‌ಫ್ರಾರೆಡ್, ಆರ್’ಜಿಬಿ ಸೆನ್ಸರ್ ಇರುತ್ತದೆ ಎಂದೂ, ಜೊತೆಗೆ ಥರ್ಮಲ್ ಮೀಟರ್, 21 ಮೇಗಾಪಿಕ್ಸಲ್ ಕ್ಯಾಮರ, ಮೆಕಾನಿಕಲ್ ಷಟ್ಟರ್ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.

ಇವುಗಳ ಸಹಾಯದಿಂದ ಹೈ ರಿಜಲ್ಯೂಷನ್ ಫೋಟೋಗಳನ್ನು ತೆಗೆದು ಕಳುಹಿಸುತ್ತದೆ ಎಂದು ವಿವರಿಸಿದ. ಭೂಮಿಯಿಂದ 2 ಅಡಿ ಗುರುತನ್ನು, 8 ಚದರ ಮೀಟರ್ ಪರಿಧಿಯಲ್ಲಿರುವ ಎಲ್ಲಾ ಜಾಗವನ್ನು ಈ ಡ್ರೋನ್ ಕವರ್ ಮಾಡುತ್ತದೆ. ಆ ಜಾಗದಲ್ಲಿ ಎಲ್ಲಿಯಾದರೂ ಸ್ಪೋಟಕಗಳು ಕಂಡು ಬಂದರೆ ತಕ್ಷಣ ಬೇಸ್ ಸ್ಟೇಷನ್’ಗೆ ಕಳುಹಿಸುತ್ತದೆ. ಇದರಲ್ಲಿ 50 ಗ್ರಾಂಗಳು ತೂಕದ ಬಾಂಬ್ ಒಂದು ಇದ್ದು, ಅದು ಸ್ಫೋಟಕಗಳನ್ನು ಧ್ವಂಸ ಮಾಡುತ್ತದೆ. ತನ್ನ ಕಂಪನಿ ಏರೋಬಾಟಿಕ್ಸ್ ಹೆಸರಿನಲ್ಲಿ ಈ ಡ್ರೋನ್ ಅನ್ನು ಈಗಾಗಲೇ ಪೇಟೆಂಟ್ ಸಹ ರಿಜಿಸ್ಟ್ರಾರ್ ಮಾಡಿಸಿದ್ದಾನೆ ಈ ಬಾಲಕ.

ಹ್ಯಾಟ್ಸಪ್ ಟು ಹರ್ಷವರ್ಧನ್…


Click Here To Download Kannada AP2TG App From PlayStore!

Share this post

scroll to top