ಗೊತ್ತಿಲ್ಲದೆ…ದೆವ್ವವನ್ನು ಪ್ರೀತಿಸಿದೆ…! 2 ಕಿ.ಮೀ ಲಿಫ್ಟ್ ಸಹ ನೀಡಿದೆ.

ಒಮ್ಮೆ ಕಂಪೆನಿ ಕೆಲಸದ ಮೇಲೆ ವೈಜಾಗ್ ನಿಂದ ಹೈದರಾಬಾದ್ ಗೆ ಹೋಗಿ ಬರುತ್ತಿದ್ದೆ. ರಾತ್ರಿ 12 ಗಂಟೆ ಆಗಿದೆ. ಕಾರಿನಲ್ಲಿ ನಾನೊಬ್ಬನೇ ಇದ್ದೀನಿ. ಮಳೆ ಸಹ ಪ್ರಾರಂಭವಾಗುತ್ತದೆೆ. ಬೆಳಿಗ್ಗೆ ಕೆಲವು ರಿಪೋರ್ಟ್ ಗಳನ್ನು ನನ್ನ ಆಫೀಸಿಗೆ ತಲುಪಿಸಬೇಕು. ಗತ್ಯಂತರವಿಲ್ಲದೆ ಒಬ್ಬನೇ ಬರಬೇಕಾಯಿತು. ಹೀಗೆ ಆಲೋಚಿಸುತ್ತಿರುವಾಗ ಎದುರಿಗೆ ಒಬ್ಬ ಯುವತಿ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವುದು ಕಾಣಿಸಿತು. ಪಾಪ ಒಬ್ಬಳೇ ಹೋಗುತ್ತಿದ್ದಾಳೆ. ಸಹಾಯ ಮಾಡಬೇಕೆನಿಸಿತು. ಮಳೆಯಲ್ಲಿ ಒಬ್ಬಳೇ ಹೋಗುತ್ತಿರುವುದಾದರೂ ಎಲ್ಲಿಗೆ? ನಾನು ನಿನಗೆ ಯಾವ ರೀತಿ ಸಹಾಯ ಮಾಡಲಿ ಎಂದು ಕೇಳಿದೆ. ಥ್ಯಾಂಕ್ಯೂ ಎಂದು ಹೇಳುತ್ತ… ಇಲ್ಲೇ ಸುಮಾರು ಎರಡು ಕಿ.ಮೀ ದೂರ ಹೋಗಬೇಕಾಗಿದೆ ಎಂದಳು. ನಿಮಗೆ ಅಭ್ಯಂತರವಿಲ್ಲದಿದ್ದರೆ…ನನ್ನನ್ನು ಅಲ್ಲಿ ಇಳಿಸಿ ಎಂದಳು.

ನಾನು ಕಾರಿನ ಬಾಗಿಲನ್ನು ತೆರೆದು ಆಕೆಯನ್ನು ಹತ್ತಿಸಿಕೊಂಡೆ. ನೋಡಲು ಬಹಳ ಸುಂದರ ವಾಗಿದ್ದಳು. ಒಬ್ಬನೇ ಹೋಗುತ್ತಿದ್ದ ನನಗೆ ಜೊತೆ ಸಿಕ್ಕಿದ್ದು ಸಂತಸ ತಂದಿತ್ತು. ನೀವು ಯಾರು? ಎಲ್ಲಿಗೆ ಹೊರಟಿದ್ದಿರಿ ಎಂದು ಪ್ರಶ್ನಿಸಿದೆ. ಆಕೆ ಮೌನವಾಗಿದ್ದಳು. ಕೇವಲ ನಗುವಿನ ಉತ್ತರ ಮಾತ್ರ ದೊರೆಯಿತು. ಆಕೆಯ ನೆನೆದ ವಸ್ತ್ರಗಳು, ಒದ್ದೆಯಾದ ಕೂದಲು ಗಳನ್ನು ಒಣಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ . ನನ್ನ ನೋಟವನ್ನು ಆಕೆಯ ಮೇಲೆ ನೆಟ್ಟೆ. ಅಷ್ಟರಲ್ಲೇ ಎರಡು ಕಿ.ಮೀ ಕ್ರಮಿಸಿದ್ದೆವು.

ನಾನು ಇಳಿಯಬೇಕಾದ ಜಾಗ ಬಂದಿದೆ. ಎಂದಾಗ ನನ್ನ ಮನಸ್ಸಿಗೆ ಕೊಂಚ ಬೇಸರವಾಯಿತು. ಇನ್ನೂ ಸ್ವಲ್ಪ ಹೊತ್ತು ಆಕೆ ನನ್ನೊಂದಿಗೆ ಇರುತ್ತಿದ್ದರೆ…ಎಂದೆನಿಸಿತು. ಮಳೆಯೂ ಕಡಿಮೆಯಾಗಿತ್ತು.

ಆಕೆ ಕಾರಿನಿಂದ ಇಳಿದು ಹೊರಡತೊಡಗಿದಳು ಎಲ್ಲಿಗೆ ಹೊರಡುತ್ತಿದ್ದೀರ? ಈಗಲಾದರೂ ತಿಳಿಸಿ ಎಂದೆ. ಮೂರು ತಿಂಗಳಿಂದ ಇಲ್ಲೇ ಇದ್ದೀನಿ ಎಂದು ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋದಳು. ಆಕೆಯನ್ನು ಹಿಂಬಾಲಿಸುವ ಮನಸ್ಸಾಯಿತು. ಕಾರಿನಲ್ಲಿದ್ದ ಟಾರ್ಚ್ ತೆಗೆದುಕೊಂಡು ಆಕೆ ಹೊರಟ ಮಣ್ಣಿನ ರಸ್ತೆಯಲ್ಲಿ ಹೊರಟೆ.

ಕತ್ತಲಲ್ಲಿ ಒಳಗೆ ಹೋಗುತ್ತಿದ್ದರೆ…ಅಳುವ ಶಬ್ದ ಹೆಚ್ಚಾಗತೊಡಗಿ ಒಮ್ಮೆಲೇ ನಿಂತುಹೋಯಿತು. ನನ್ನ ಟಾರ್ಚ್ ಲೈಟ್ ಸಹ ಆರಿತು. ಒಮ್ಮೆಲೇ ಆಕಾಶದಲ್ಲಿ ಒಂದು ದೊಡ್ಡ ಸಿಡಿಲು…ಅದರ ಬೆಳಕಲ್ಲಿ ನನಗೆ ಕಮಡಿದ್ದು ಒಂದು ಸಮಾಧಿ…

ಆ ಸಮಾಧಿ ಯಾರದ್ದೋ ಅಲ್ಲ. ಇಷ್ಟು ಹೊತ್ತು ನಾನ್ನೊಡನಿದ್ದ ಯುವತಿಯದ್ದು. ಆಗಲೇ ನನಗೆ ಅರ್ಥವಾಗಿದ್ದು. ಇಷ್ಟು ಹೊತ್ತು ನನ್ನೊಡನಿದ್ದದ್ದು ಒಂದು ದೆವ್ವವೆಂದು. ಮೈ ಬೆವರತೊಡಗಿತು. ಕೈಕಾಲುಗಳು ಕಂಪಿಸತೊಡಗಿದವು. ಕಾರಿನ ಬಳಿಗೆ ಓಡಿದೆ. ಒಳಗೆ ಕುಳಿತು ಸ್ಟಾರ್ಟ್ ಮಾಡಿದೆ. ಎಲ್ಲಿಯೂ ನಿಲ್ಲಿಸದಂತೆ ಹೊರಟೆ.

ನನ್ನ ಜೀವನದಲ್ಲಿ ಅಂದು ನಡೆದ ಘಟನೆ ಕನಸೋ ನನಸೋ ನನಗೆ ತಿಳಿಯದು. ಆದರೂ…ಇಂದಿಗೂ ನಾನದನ್ನು ಮರೆತಿಲ್ಲ.

 


Click Here To Download Kannada AP2TG App From PlayStore!