200 ವರ್ಷಗಳಿಂದ ಪದ್ಮಾಸನದಲ್ಲಿ ಕುಳಿತಿರುವ ಈತ ಈಗಲೂ ಹಾಗೆಯೇ ಇದ್ದಾನೆ..!

ಅದು ಒಬ್ಬ ಬೌದ್ಧ ಸನ್ಯಾಸಿ ಮಮ್ಮಿ. ಹಾಗೆಂದು ಸತ್ತ ನಂತರ ಬಚ್ಚಿಟ್ಟ ಮಮ್ಮಿ ಅಲ್ಲ. ಬದುಕಿರುವ ಮಮ್ಮಿಯೇ. ಅಷ್ಟಕ್ಕೂ ಅದನ್ನು ಮಮ್ಮಿ ಎಂದು ಕರೆಯುವುದಕ್ಕಿಂತ ಬದುಕಿರುವ ಶವ.. ಎಂದು ಕರೆಯಬಹುದು..! ಏನು ಕನ್ಫ್ಯೂಶನ್ ಆಗುತ್ತಿದೀಯಾ…! ಹೌದು ಮತ್ತೆ. ಈಗ ನಾವು ಹೇಳುತ್ತಿರುವ ವಿಷಯ ಕೇಳಿದರೆ ಡಬಲ್ ಕನ್ಫೂಶನ್ ಆಗುತ್ತೆ. ವಿಷಯ ಏನೆಂದರೆ 200 ವರ್ಷಗಳ ಹಿಂದೆ ಒಬ್ಬ ಬೌದ್ಧ ಸನ್ಯಾಸಿ ಇದ್ದನಂತೆ. ಆತ ಧ್ಯಾನ ಮಾಡುತ್ತಾ ಹಾಗೆಯೇ ಉಳಿದುಬಿಟ್ಟ ಈಗ ಆತ ಅದರಲ್ಲಿ ಉಚ್ಛಸ್ಥಾನದಲ್ಲಿದ್ದನಂತೆ. ಹೀಗೆ ಆತನ ಶರೀರ ಉಳಿದಿದೆ. ಆದರೆ ಆತ ಸಾವನ್ನಾಪ್ಪಿಲ್ಲ ಎಂದು ಬೌದ್ಧ ಸನ್ಯಾಸಿಗಳು ನಂಬಿಕೆಯಾಗಿದೆ. ಫಾರೆನ್ಸಿಕ್ ತಜ್ಞರ ಪ್ರಕಾರ ಇದು ಎರಡು ಶತಮಾನದ ಹಿಂದಿನ ಮಮ್ಮಿ ಎಂದು ಹೇಳುತ್ತಿದ್ದಾರೆ.

ಈ ಸನ್ಯಾಸಿ ಮಮ್ಮಿಯನ್ನು ಮಂಗೋಲಿಯಾದ Kobdsk ಎಂಬ ಪ್ರಾಂತ್ಯದ ಒಂದು ಗುಹೆಯಿಂದ ಒಬ್ಬ ವ್ಯಕ್ತಿ ತೆಗೆದುಕೊಂಡು ಬಂದು ಯಾರಿಗೂ ತಿಳಿಯದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೋಗಿ Ulaanbaatar ಎಂಬ ಪ್ರಾಂತ್ಯದಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದರಿಂದಾಗಿ ಮಮ್ಮಿ ಸನ್ಯಾಸಿ ಬಗೆಗಿನ ವಿಷಯ ಬೆಳಕಿಗೆ ಬಂದಿದೆ. ಈಗ ಸನ್ಯಾಸಿ ಮಮ್ಮಿ ಮಂಗೋಲಿಯಾದ Ulaanbaatar ಪ್ರಾಂತ್ಯದ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಎಕ್ಸ್’ಪಾರ್ಟಯಿಜ್ ಎಂಬ ಕೇಂದ್ರದಲ್ಲಿ ಭದ್ರವಾಗಿದೆಯಂತೆ. ಸ್ವಲ್ಪ ದಿನಗಳ ನಂತರ ಆ ಸನ್ಯಾಸಿ ಮಮ್ಮಿ ಬುದ್ಧನಾಗಿ ಬದಲಾಗುತ್ತದೆ ಎಂದು ಕೆಲವು ಬೌದ್ದ ಸನ್ಯಾಸಿಗಳು ಹೇಳುತ್ತಿದ್ದಾರೆ. ಎಷ್ಟು ದಿನ ಎಂಬುದು ಅವರಿಗೂ ಸಹ ಗೊತ್ತಿಲ್ಲ. ಹೀಗೆ ಸನ್ಯಾಸಿಗಳ ಮಮ್ಮಿ ದೊರೆತಿರುವುದು ಇದೇ ಮೊದಲು ಎಂದು ಹೇಳಲಾಗುತ್ತದೆ.

 ಸಮಾನ್ಯವಾಗಿ ಯಾವುದೇ ಬೌದ್ಧ ಸನ್ಯಾಸಿ ಧಾನ್ಯ ಮಾಡುತ್ತಾ ಮೂರು ವಾರಗಳಿಗಿಂತ ಹೆಚ್ಚು ಸಮಯದವರೆಗೆ ಅದೇ ಸ್ಥಿತಿಯಲ್ಲಿದರೆ ಆಗ ಅವರ ಶರೀರ ಹೀಗೆ ಮಮ್ಮಿಯಂತೆ ಆಗುತ್ತದೆ. ಇದು ಸನ್ಯಾಸಿಗಳು ಹೇಳಿದ್ದು ಅಲ್ಲ ಡಾಕ್ಟರ್ ಬ್ಯಾರಿ ಕೆರ್ಜಿನ್ ಎಂಬ ಒಬ್ಬ ಫಿಜಿಷಿಯನ್ ಹೇಳಿದ ಮಾತುಗಳು. ಮತ್ತೆ ವಾಸ್ತವವಾಗಿದ್ದರೆ ಮೇಲೆ ಹೇಳಿದ ಆ ಸನ್ಯಾಸಿ ಮಮ್ಮಿ ಈಗಲೂ ಬದುಕಿ ಇದ್ದಾನೆ ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ ಎಂದೇ ಹೇಳಬಹುದು. ಇಂದಿಗೂ ಆತನ ದೇಹದ ಮೇಲೆ ಸಂಶೋಧನೆಗಳು ನಡೆಯುತ್ತಿವೆ.


Click Here To Download Kannada AP2TG App From PlayStore!