ಈ 25 ಸಿಂಪಲ್ ಟಿಪ್ಸ್ ಪಾಲಿಸಿ…ವೈದ್ಯರ ಬಳಿಗೆ ಹೋಗುವ ಅವಶ್ಯಕತೆ ಬರಲ್ಲ

ಆರೋಗ್ಯವಾಗಿ ಇರಬೇಕೆಂದು ಯಾರು ತಾನೆ ಬಯಸಲ್ಲ. ಇಂದಿನ ಗಜಿಬಿಜಿ ಬದುಕಿನಲ್ಲಿ ಅನೇಕ ಒತ್ತಡಗಳ ನಡುವೆ ಸಿಕ್ಕಿ ಒದ್ದಾಡುವ ಮಂದಿ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಆರೋಗ್ಯದ ಮೇಲೆ ದೃಷ್ಟಿ ನೆಡುವುದು ಒಮ್ಮೆಮ್ಮೆ ಕಷ್ಟಕರವಾಗುತ್ತಿದೆ. ಆದರೆ ಕೆಳಗೆ ಕೊಟ್ಟ ಕೆಲವು ಸಿಂಪಲ್ ಟಿಪ್ಸ್ ನಿತ್ಯ ಪಾಲಿಸಿದರೆ ಒಳ್ಳೆಯ ಆರೋಗ್ಯ ನಿಮ್ಮದಾಗುತ್ತದೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಿಲ್ಲ. ಆಯಾ ಸಮಯದಲ್ಲಿ ನಾವು ಮಾಡುವ ಕೆಲಸಗಳು, ತೆಗೆದುಕೊಳ್ಳುವ ಆಹಾರ, ನಿದ್ದೆ ಇನ್ನಿತರೆ ನಿತ್ಯ ಸಂಗತಿಗಳ ಮೇಲೆ ಸ್ವಲ್ಪ ಗಮನಹರಿಸಿದರೆ ಸಾಕು. ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಈಗ ನೋಡೋಣ.

1. ನಿತ್ಯ ಕನಿಷ್ಟ 7.50 ಕಿ.ಮೀ (ಸುಮಾರು 10 ಸಾವಿರ ಸ್ಟೆಪ್ಸ್) ನಡೆದರೆ ಸಾಕು. ಇದಕ್ಕಾಗಿ ಅಗತ್ಯವಾದರೆ ಸ್ಮಾರ್ಟ್‌ಫೋನ್, ಫಿಟ್ನೆಸ್ ಬ್ಯಾಂಡ್‌ನಂತಹ ಆಧುನಿಕ ತಾಂತ್ರಿಕ ಪರಿಕರಗಳ ಸಹಾಯ ಪಡೆಯಬಹುದು. ಹೀಗೆ ಮಾಡಿದರೆ ಕೆಲವು ದಿನಗಳಲ್ಲೇ ದೇಹದಲ್ಲಿ ಬದಲಾವಣೆ ಕಾಣಬಹುದು.

2. ಸಾಮಾನ್ಯವಾಗಿ ನಮ್ಮಲ್ಲಿ ಅಧಿಕ ಮಂದಿ ಕುಳಿತು ಮಾಡುವ ಉದ್ಯೋಗಗಳಲ್ಲಿದ್ದಾರೆ. ಆದರೆ ಹೆಚ್ಚಿನ ಹೊತ್ತು ಕೂತಿದ್ದರೂ, ಸ್ವಲ್ಪ ವಿರಾಮ ಸಿಕ್ಕಿದರೆ ಹೆಚ್ಚು ಹೊತ್ತು ನಿಂತುಕೊಳ್ಳಲು ಪ್ರಯತ್ನಿಸಿ. ಹೀಗೆ ಮಾಡಿದರೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಬರುವ ರೋಗಗಳು ದೂರವಾಗುವ ಸಾಧ್ಯತೆಗಳಿವೆ.

3. ನಡೆದರೂ, ನಿಂತರೂ ಒಂದೇ ರೀತಿಯ ಭಂಗಿ ಬರುವಂತೆ ನೋಡಿಕೊಳ್ಳಿ. ಅದೇಗೆಂದರೆ ಹೊಟ್ಟೆ ಒಳಗಡಗೆ, ಎದೆ ಹೊರಗೆ ಇದ್ದು, ಭುಜಗಳು ಹಿಂದಕ್ಕೆ ಇರುವಂತೆ, ಕುತ್ತಿಗೆ ನೇರವಾಗಿರುವಂತೆ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದಲ್ಲಿನ ಕೆಲವು ಕ್ಯಾಲರಿಗಳನ್ನು ಕರಗಿಸಲು ಉಪಯೋಗಕ್ಕೆ ಬರುತ್ತದೆ.

4. ಒಳ್ಳೆಯ ಭಂಗಿಯ ಜತೆಗೆ ಶ್ವಾಸವನ್ನು ಸಹ ಸರಿಯಾಗಿ ತೆಗೆದುಕೊಳ್ಳಬೇಕು. ಇದು ಎದೆ ಭಾಗದ ಚಲನೆಯನ್ನು ಉತ್ತಮ ಪಡಿಸುತ್ತದೆ. ಇದರಿಂದ ದೇಹದಲ್ಲಿನ ಕಣಗಳಿಗೆ ಆಕ್ಸಿಜನ್ ಸೂಕ್ತವಾಗಿ ಸಿಕ್ಕಿ ಒತ್ತಡದಿಂದ ದೂರವಾಗಬಹುದು. ಈ ರೀತಿ ಮಾಡುವುದರಿಂದ ದೇಹಕ್ಕೆ ಹೊಸ ಶಕ್ತಿ ಸಿಗುತ್ತದೆ.

5. ಮೇಲೆ ತಿಳಿಸಿದ ಕೇವಲ ನಾಲ್ಕು ಸೂತ್ರಗಳನ್ನು ನಿತ್ಯ ಪಾಲಿಸಿದರೆ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿವರೆಗೂ ತೂಕ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದರೆ ನಂಬುತ್ತೀರಾ? ಆದರೂ ಇದು ನಿಜ.

6. ಮೇಲೆ ತಿಳಿಸಿದ ವಾಕಿಂಗ್ ಜತೆಗೆ ಸಾಧ್ಯವಾದಷ್ಟು ವ್ಯಾಯಾಮ, ಯೋಗಾ, ವೆಯಿಟ್ ಟ್ರೈನಿಂಗ್‌ನಂತಹ ನಿತ್ಯ ಸ್ವಲ್ಪ ಸಮಯದ ಜತೆಗೆ ಮಾಡಬಹುದು. ಇದು ದೇಹದಲ್ಲಿನ ಅಧಿಕ ಕ್ಯಾಲರಿಗಳನ್ನು ಕರಗಿಸುತ್ತದೆ.

7. ವಾರದಲ್ಲಿ ಒಂದು ದಿನ ಉಪವಾಸ ಇರಿ. ಆದರೆ ಉಪವಾಸ ಇರಲು ಸಾಧ್ಯವಿಲ್ಲ ಎನ್ನುವವರು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ.

8. ಖಾಲಿ ಹೊಟ್ಟೆಯಲ್ಲಿ, ಹಸಿವಾದಾಗ ಆಹಾರ ಪದಾರ್ಥಗಳನ್ನು ಕೊಳ್ಳಲು ಹೋಗಬೇಡಿ. ಯಾಕೆಂದರೆ ಅದು ನಿಮ್ಮ ಕೈಲಿ ಅನಾರೋಗ್ಯಕರವಾದ ಆಹಾರವನ್ನು ಹೆಚ್ಚು ಕೊಳ್ಳುವಂತೆ ಮಾಡುತ್ತದೆ.

9. ಜಂಕ್ ಫುಡ್, ಮಸಾಲಾ ಆಹಾರ, ಸಕ್ಕರೆಯಿಂದ ಮಾಡಿದ ಪದಾರ್ಥಗಳು, ಆಯಿಲ್ ಫುಡ್‌ನಂತಹವುಗಳನ್ನು ಅಡುಗೆ ಮನೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಯಾಕೆಂದರೆ ಅವು ನಿಮಗೆ ಹೆಚ್ಚಿನ ಕ್ಯಾಲರಿಗಳನ್ನು ಕೊಡುತ್ತವೆ. ಮತ್ತೆ ಅವುಗಳನ್ನು ಕರಗಿಸಬೇಕೆಂದರೆ ಇನ್ನೂ ಹೆಚ್ಚಿ ಕಷ್ಟಪಡಬೇಕಾಗುತ್ತದೆ. ಅದಕ್ಕೆ ಬದಲಾಗಿ ಬಾದಾಮಿ, ವಾಲ್‌ನಟ್ಸ್, ಹಣ್ಣು, ಖರ್ಜೂರದಂತಹವು ಅಡುಗೆಮನೆಯಲ್ಲಿ ಇರಲಿ. ಸ್ವಲ್ಪ ಹಸಿವಾದಾಗ ಇವುಗಳನ್ನು ಸ್ವಲ್ಪ ತಿಂದರೂ ಅಧಿಕ ಕ್ಯಾಲರಿಗಳು ಸಿಗುತ್ತವೆ. ಇದರಿಂದ ಹಸಿವಾಗಲ್ಲ.

10. ಎಷ್ಟು ತಿಂದರೂ ಇನ್ನೂ ಹಸಿವಾಗಿಯೇ ಇದ್ದರೆ ಮತ್ತೆ ಆಹಾರ ತಿನ್ನದೆ ಅದಕ್ಕೆ ಬದಲಾಗಿ ನೀರು ಅಥವಾ ಗ್ರೀನ್ ಟೀ ಕುಡಿಯಿರಿ. ನಿತ್ಯ ಈ ರೀತಿ ಮಾಡಿದರೆ ದೇಹದಲ್ಲಿನ ಅಧಿಕ ಕ್ಯಾಲರಿಗಳು ಸೇರಲ್ಲ. ಇದು ತೂಕ ಕಡಿಮೆಯಾಗಲು ಸಹ ಸಹಕಾರಿ.

11. ಒಮೆಗಾ-3 ಫ್ಯಾಟಿ ಆಸಿಡ್ಸ್ ಹೆಚ್ಚಾಗಿ ಇರುವ ಮೀನಿನಂತಹ ಪದಾರ್ಥಗಳನ್ನು ವಾರದಲ್ಲಿ ಕನಿಷ್ಠ 3 ಸಾರಿ ತಿನ್ನಬೇಕು. ಇದರಿಂದ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಬಹಳಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ.

12. ಆಹಾರವನ್ನು ಅಧಿಕ ಉಷ್ಣತೆಯಲ್ಲಿ ಹೆಚ್ಚು ಹೊತ್ತು ಬೇಯಿಸಬಾರದು. ಹೀಗೆ ಮಾಡಿದರೆ ಅದರಲ್ಲಿನ ಪೋಷಕಾಂಶಗಳು ಆವಿಯಾಗುತ್ತವೆ. ಯಾವಾಗಲೂ ಕಡಿಮೆ ಉಷ್ಣತೆಯಲ್ಲಿ ಆಹಾರವನ್ನು ಬೇಯಿಸಬೇಕು.

13. ಸಕ್ಕರೆ ಹೆಚ್ಚಾಗಿರುವ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಕೂಲ್ ಡ್ರಿಂಕ್ಸ್, ಕೇಕ್‌ಗಳು, ಬಿಸ್ಕೆಟ್‌ಗಳು, ಸ್ವೀಟ್ಸ್, ಐಸ್‌ಕ್ರೀಮ್ಸ್‌ನಂತಹವನ್ನು ಸಾಧ್ಯವಾದಷ್ಟು ಕಡಿಮೆ ತಿನ್ನಬೇಕು. ಉದಾಹರಣೆಗೆ ಒಂದು ದೊಡ್ಡ ಕೇಕ್ ಪೀಸ್ ತಿನ್ನಬೇಕಾದರೆ ಅದರಲ್ಲಿ 3ನೇ ಒಂದರಷ್ಟು ಮಾತ್ರ ತಿನ್ನಿ. ದೊಡ್ಡ ಕಪ್‌ನಲ್ಲಿ ಕಾಫಿ ಕುಡಿಯಬೇಕಾದರೆ ಅದರಲ್ಲಿ ಅರ್ಧ ಕಡಿಮೆ ಮಾಡಿ ಕುಡಿಯಿರಿ. ಹೀಗೆ ತಪ್ಪದೆ ಮಾಡುತ್ತಾ ಹೋದರೆ ಸಕ್ಕರೆಗೆ ನೀವು ದೂರವಾಗುತ್ತೀರ.

14. ಕೊಬ್ಬರಿ ಎಣ್ಣೆ, ಅವಕೋಡ, ದೇಸಿ ತುಪ್ಪ, ಕೋಳಿಮೊಟ್ಟೆ, ಹಾಲಿನಂತಹವು ನಿತ್ಯ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗಲ್ಲ. ಹಾನಿಯಾಗುತ್ತದೆ ಎಂಬುದೆಲ್ಲಾ ಕೇವಲ ವದಂತಿಗಳಷ್ಟೇ.

15. ರಾತ್ರಿಹೊತ್ತು ಭೋಜನಕ್ಕೆ, ಆ ಬಳಿಕ ನಿದ್ದೆಗೂ ನಡುವೆ ಕನಿಷ್ಠ 2 ಗಂಟೆಗಳ ಗ್ಯಾಪ್ ಇರುವಂತೆ ನೋಡಿಕೊಳ್ಳಿ. ಇದರಿಂದ ದೇಹದಲ್ಲಿನ ಗ್ಲೂಕೋಸ್ ಲೆವೆಲ್ಸ್ ಸಾಮಾನ್ಯ ಮಟ್ಟಕ್ಕೆ ಬರುತ್ತವೆ. ರಾತ್ರಿ ತಿಂದ ಕೂಡಲೆ ನಿದ್ರಿಸಿದರೆ ಬ್ಲಡ್ ಶುಗರ್ ಬೆಳೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದು ದೀರ್ಘಕಾಲದಲ್ಲಿ ಡಯಾಬಿಟೀಸ್‌ಗೆ ದಾರಿಯಾಗುತ್ತದೆ.

16. ದೇಹದ ತೂಕವನ್ನು ಅವಲಂಭಿಸಿ 1.4 ರಿಂದ 2 ಗ್ರಾಮ್‌ಗಳವರೆಗೂ ಪ್ರೋಟೀನ್ ಸಮೃದ್ಧಿಯಾಗಿ ಇರುವ ಆಹಾರ ತೆಗೆದುಕೊಳ್ಳಬೇಕು. ಇದು ದೇಹದಲ್ಲಿನ ಕ್ಯಾಲರಿಗಳನ್ನು ಕರಗಿಸಲು, ಹೊಸ ಕಣಗಳನ್ನು ಏರ್ಪಡಿಸಲು ಉಪಯೋಗಕ್ಕೆ ಬರುತ್ತದೆ.

17. ಮಧ್ಯಾಹ್ನ, ರಾತ್ರಿ ಸಮಯದಲ್ಲಿ ಭೋಜನಕ್ಕೆ ಮೊದಲು ಸ್ವಲ್ಪ ಹಸಿ ತರಕಾರಿಗಳನ್ನು ತಿನ್ನಿ. ಇದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗಿ ಆಟೋಮೆಟಿಕ್ ಆಗಿ ನೀವು ಕಡಿಮೆ ಊಟ ಮಾಡುತ್ತೀರ. ಇದು ತೂಕ ಕಡಿಮೆಯಾಗಲು ಸಹಕಾರಿ.

18. ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಕಡ್ಡಾಯವಾಗಿ 1 ಲೀಟರ್ ನೀರು ಕುಡಿಯಬೇಕು. ಇದು ದೇಹ ಡೀಹೈಡ್ರೇಶನ್‍‌ಗೆ ಗುರಿಯಾಗದಂತೆ ಕಾಪಾಡುತ್ತದೆ.

19. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಟಿ, ಕಾಫಿಯಂತಹವು ಕುಡಿಯಬಾರದು. ಯಾಕೆಂದರೆ ರಾತ್ರಿಯಿಂದ ಬೆಳಗ್ಗೆವರೆಗೂ ಸುಮಾರು 8 ರಿಂದ 10 ಗಂಟೆಗಳ ಕಾಲ ಹೊಟ್ಟೆ ಖಾಲಿಯಾಗಿರುತ್ತದೆ. ಆ ಸಮಯದಲ್ಲಿ ಕಾಫಿ, ಟಿ ಕುಡಿದರೆ ಅವುಗಳಲ್ಲಿನ ಆಸಿಡ್ಸ್ ಹೊಟ್ಟೆಯಲ್ಲಿನ ಲೈನಿಂಗ್ (ಮ್ಯೂಕಸ್ ಪೊರೆ) ಹಾನಿ ಮಾಡುತ್ತವೆ. ನೀರು ಅಥವಾ ಗ್ರೀನ್ ಟಿಯಂತಹವು ಕುಡಿದ ಬಳಿಕ ಕಾಫಿ, ಟೀ ಕುಡಿಯುವುದು ಉತ್ತಮ.

20. ನಮ್ಮಲ್ಲಿ ಅತ್ಯಧಿಕ ಮಂದಿ ಹೊಟ್ಟೆ ತುಂಬಿದರೂ, ತುಂಬದಿದ್ದರೂ ಅಧಿಕ ತಿಂಡಿ ತಿನ್ನುತ್ತಾರೆ. ಆದರೆ ಹೀಗೆ ತಿನ್ನುವುದು ಅಪಾಯಕರ. ಮುಖ್ಯವಾಗಿ ತೂಕ ಕಡಿಮೆಯಾಗಬೇಕಾದರೆ ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಆದರೆ ಹೊಟ್ಟೆ ತುಂಬಿದ ಭಾವನೆ ಉಂಟಾಗಲು ಸ್ವಲ್ಪ ಮುಂಚಿತವಾಗಿಯೇ ಭೋಜನ ಮುಗಿಸುವುದು ಉತ್ತಮ ಪದ್ಧತಿ.

21. ಚಿಕ್ಕ ಸೈಜಿನಲ್ಲಿರುವ ಪ್ಲೇಟ್‌ನಲ್ಲಿ ಆಹಾರ ತಿನ್ನಿ. ಯಾಕೆಂದರೆ ಆ ಸೈಜ್‌ನಲ್ಲಿ ಪ್ಲೇಟ್ ಇದ್ದರೆ ಅದರಲ್ಲಿ ಸ್ವಲ್ಪ ಆಹಾರ ಹಾಕಿದರೂ ಹೆಚ್ಚು ತಿನ್ನುತ್ತಿದ್ದೇವೆ ಎಂಬ ಭಾವನೆ ಉಂಟಾಗುತ್ತದೆ. ಹಾಗಾಗಿ ಭೋಜನ ಕಡಿಮೆ ಮಾಡುತ್ತೇವೆ. ಹಲವು ಸಂಶೋಧಕರು ಈ ವಿಷಯವನ್ನು ಶಾಸ್ತ್ರೀಯವಾಗಿ ದೃಢಪಡಿಸಿದ್ದಾರೆ ಸಹ.

22. ಯಾವಾಗಲೂ ಕೃತಜ್ಞತಾ ಭಾವದಿಂದ ಇತರ ಬಗ್ಗೆ ಕನಿಕರ, ದಯೆ ಇರುವಂತೆ ನೋಡಿಕೊಳ್ಳಿ. ಹಿಗೆ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಲವು ವಿಜ್ಞಾನಿಗಳು ಈ ವಿಷಯವನ್ನು ಸಂಶೋಧನೆಯಲ್ಲಿ ಸಹ ಮಾಡಿದ್ದಾರೆ.

23. ಸಾಧ್ಯವಾದರೆ ದೇಹಕ್ಕೆ ಆಗಾಗ ಮಸಾಜ್ ಮಾಡಿಸಿಕೊಳ್ಳಬೇಕು. ಇದು ದೇಹದಲ್ಲಿನ ರಕ್ತ ಸಂಚಲನವನ್ನು ಉತ್ತಮ ಪಡಿಸುತ್ತದೆ. ನಿದ್ದೆ ಚೆನ್ನಾಗಿ ಬರುವಂತೆ ಮಾಡುತ್ತದೆ.

24. ನಿದ್ರಿಸುವ ಸಮಯದಲ್ಲಿ ಕೊಠಡಿಯಲ್ಲಿ ಸಾಧ್ಯವಾದಷ್ಟು ವರೆಗೂ ಕತ್ತಲು ಇರುವಂತೆ ನೋಡಿಕೊಳ್ಳಿ. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಸಾಧ್ಯವಾದರೆ ಐ ಮಾಸ್ಕ್ ಧರಿಸಬಹುದು.

25. ನಿತ್ಯ ಕನಿಷ್ಠ 20 ನಿಮಿಷಗಳ ಕಾಲ ನಮ್ಮ ದೇಹಕ್ಕೆ ಸೂರ್ಯಕಾಂತಿ ತಗಲುವಂತೆ ನೋಡಿಕೊಳ್ಳಿ. ಹೀಗೆ ಮಾಡಿದರೆ ಆ ದಿನಕ್ಕೆ ಬೇಕಾದ ಡಿ ವಿಟಮಿನ್ ನಮಗೆ ಸಿಗುತ್ತದೆ. ವಿಟಮಿನ್ ಡಿ ಯಿಂದ ಮೂಳೆಗಳು ದೃಢವಾಗಿ ಬದಲಾಗುವುದಷ್ಟೇ ಅಲ್ಲ, ಸುಮಾರು 3 ಸಾವಿರ ರಕ್ತ ಕಣಗಳಿಗೆ ಶಕ್ತಿ ಸಿಗುತ್ತದೆ.

 


Click Here To Download Kannada AP2TG App From PlayStore!