70 ಲೀಟರ್ ಪೆಟ್ರೋಲ್… 95 ರೂಪಾಯಿ ಮಾತ್ರ..!

ಮಾನವ ದೇಹಕ್ಕೆ ರಕ್ತ ಹೇಗೋ, ಕಂಪ್ಯೂಟರ್‌ಗೆ ಕರೆಂಟ್ ಹೇಗೋ… ದೇಶದ ಆರ್ಥಿಕತೆಗೆ ತೈಲ ಉತ್ಪನ್ನಗಳು ಹಾಗೆ ಎಂದು ಅರ್ಥಿಕ ತಜ್ಞರು ಹೇಳುತ್ತಾರೆ. ಇದು ಸತ್ಯವೂ ಹೌದು. ತಿಂಗಳಿಗೊಮ್ಮೆ ಪೆಟ್ರೋಲ್, ಡೀಸೆಲ್‌’ಗಳ ಬೆಲೆ ಹೆಚ್ಚಿತ್ತಿದ್ದರೆ ಸಾಮ್ಯ ನಾಗರಿಕರನ ಹೃದಯ ಬಡಿತ ಹೆಚ್ಚುತ್ತದೆ. ಲೀಟರ್ ಪೆಟ್ರೋಲ್ ಬೆಲೆ ಯಾವಾಗ ಎಷ್ಟು ಆಗುತ್ತದೆ ಎಂದು ಯಾರೂ ಹೇಳಲಾಗದ ಪರಿಸ್ಥಿತಿ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದೆ ಎಂದು ಸುದ್ದಿ ಬರುತ್ತಿದ್ದರೂ.. ನಮ್ಮ ದೇಶದಲ್ಲಿ ಆ ಬೆಲೆಗೆ ಜನರಿಗೆ ದೊರೆಯುತ್ತಿಲ್ಲ, ದೊರೆಯುವುದೂ ಇಲ್ಲ. ನಮ್ಮ ದೇಶದಲ್ಲಿ 75 ರೂಪಾಯಿ ಖರ್ಚು ಮಾಡಿದರೆ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತದೆ. ಪ್ರಪಂಚದ ಯಾವ ದೇಶಗಳಲ್ಲಿ ಅತಿಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರೆಯುತ್ತದೆ… ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಲ್ಲಿ ಇದೆ. ಅದಕ್ಕಾಗಿ ಪ್ರಪಂಚದ ಅತ್ಯಂತ ಕಡಿಮೆ ಬೆಲೆಗೆ ಪೆಟ್ರೋಲ್ ಮಾರುವ ಟಾಪ್-10 ದೇಶಗಳ ವಿವರ ನಿಮಗಾಗಿ…


1. ವೆನೆಜುವೆಲಾ
ಒಂದು ಲೀಟರ್ ಪೆಟ್ರೋಲ್ ಬೆಲೆ: 0.02 ಡಾಲರ್ (1.36 ರೂಪಾಯಿ)

2. ಸಿರಿಯಾ
ಲೀಟರ್ ಪೆಟ್ರೋಲ್ ಬೆಲೆ: 0.05 ಡಾಲರ್ (3.41 ರೂಪಾಯಿಗಳು)

3. ಲಿಬಿಯಾ
ಲೀಟರ್ ಪೆಟ್ರೋಲ್ ಬೆಲೆ: 0.12 ಡಾಲರ್ (8.18 ರೂಪಾಯಿಗಳು)

4. ಸೌದಿ ಅರೇಬಿಯಾ
ಲೀಟರ್ ಪೆಟ್ರೋಲ್ ಬೆಲೆ: 0.15 ಡಾಲರ್ (10.22 ರೂಪಾಯಿಗಳು)

5. ಟರ್ಕ್ ಮೆನಿಸ್ತಾನ್
ಲೀಟರ್ ಪೆಟ್ರೋಲ್ ಬೆಲೆ: 0.21 ಡಾಲರ್ (14.30 ರೂಪಾಯಿಗಳು)

6. ಕುವೈತ್
ಲೀಟರ್ ಪೆಟ್ರೋಲ್ ಬೆಲೆ: 0.22 ಡಾಲರ್ (14.98 ರೂಪಾಯಿಗಳು)

7. ಇರಾನ್
ಲೀಟರ್ ಪೆಟ್ರೋಲ್ ಬೆಲೆ: 0.24 ಡಾಲರ್ (16.35 ರೂಪಾಯಿಗಳು)

8. ಬಹ್ರೇನ್
ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.03 ರೂಪಾಯಿಗಳು)

9. ಕತಾರ್
ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.03 ರೂಪಾಯಿಗಳು)

10. ಆಲ್ಜೀರಿಯಾ
ಒಂದು ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.03 ರೂಪಾಯಿಗಳು)

ವೆನೆಜುವೆಲಾದಲ್ಲಿ 70 ಲೀಟರ್ ಪೆಟ್ರೋಲ್’ನಿಂದ ಕಾರಿನ ಪುಲ್’ಟ್ಯಾಂಕ್ ಮಾಡಬೇಕೆಂದರೆ ಕೇವಲ 95 ಇದ್ದರೆ ಸಾಕು. ಅದೇ ಭಾರತದಲ್ಲಿ 5,250 ರೂಪಾಯಿ ಬೇಕು. ಈ ದೇಶಗಳಲ್ಲಿ ತೈಲ ವ್ಯಾಪಾರ ಪ್ರಮುಖವಾಗಿದ್ದು, ಸೌದಿ, ಕುವೈತ್, ಬಹ್ರೇನ್ ಕತಾರ್ ನಂತಹಾ ಗಲ್ಫ್ ದೇಶಗಳು ಸಹ ಈ ಪಟ್ಟಿಯಲ್ಲಿರುವುದು ಗಮನಾರ್ಹ.


Click Here To Download Kannada AP2TG App From PlayStore!

Share this post

scroll to top