ಈ ವ್ಯಕ್ತಿಗೆ ಮದುವೆಯಾದ 19 ವರ್ಷಗಳ ನಂತರ ಗೊತ್ತಾಯಿತು ಪತ್ನಿ ಹೆಣ್ಣು ಅಲ್ಲ ಗಂಡು ಅಂತ

ಬೆಲ್ಜಿಯಮ್ ನಲ್ಲಿ ಓರ್ವ ವ್ಯಕ್ತಿಯ ಜೊತೆಗೆ ತೀರಾ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯ ಹೆಸರು ಜೆನ್ ಈತನ ಮದುವೆಯಾದ 19 ವರ್ಷಗಳ ನಂತರ ಹೆಂಡತಿಯ ಬಗೆಗಿನ ಬೆಚ್ಚಿ ಬೀಳಿಸುವ ಸತ್ಯ ಹೊರ ಬಿದ್ದಿದೆ. ಇದರಿಂದ ಅವನ ಜೀವನವೇ ಅಲ್ಲೋಲ ಕಲ್ಲೋಲ ವಾಗಿದೆ.

ಜೆನ್ ನ ವಯಸ್ಸು ಈಗ 64 ವರ್ಷ. ಪತ್ನಿಯ ವಯಸ್ಸು 48,ಇಬ್ಬರು 19 ವರ್ಷ ಮುಂಚೆ ಮದುವೆಯಾಗಿದ್ದರು. ಹೆಂಡತಿಯ ಹೆಸರು ಮೋನಿಕಾ ಇಂಡೋನೇಷಿಯಾ ಮೂಲದವಳು. ಜೆನ್ ಪ್ರಕಾರ ಬೆಲ್ಜಿಯಮ್ ಅಥಾರಿಟಿ ಯವರು ಮೊದ ಮೊದಲು ಸಂದೇಹ ವ್ಯಕ್ತಪಡಿಸಿದ್ದರು. ನಂತರ ವಿವಿಧ ಗುರುತಿನ ಚೀಟಿಗಳನ್ನು ನೋಡಿದ ನಂತರ ಹಾಗೂ ಪರಿಶೀಲನೆಯ ನಂತರ ಯಾವುದೇ ಅಡತಡೆ ಮಾಡಲಿಲ್ಲ.

ಯಾವಾಗ ನಾನು ಮೋನಿಕಾಳನ್ನು ಬೆಲ್ಜಿಯಮ್ ವರೆಗೆ ಕರೆ ತಂದೆ, ಆ ಸಮಯದಲ್ಲಿ ನನಗೆ ಬಹಳಷ್ಟು ಕಷ್ಟಗಳು ಎದುರಾದವು. ಅಷ್ಟೇ ಏಕೆ ಕೋರ್ಟ್ ಸಹ ಲೈಂಗಿಕ ಪರಿಶೀಲನೆ ಹಾಗೂ ಅದಕ್ಕೆ ಸಂಬಂಧಪಟ್ಟ ಡಾಕ್ಯೂಮೆಂಟ್ಸ್ ಗಳ ಮೇಲೆ ತುಂಬಾ ಸಂದೇಹ ವ್ಯಕ್ತ ಪಡಿಸಿತ್ತು. ಆದರೆ ಮುಂದೆ ಅದರ ಬಗ್ಗೆ ಕೋರ್ಟ್ ಸಹ ಏನೂ ಕೇಳಲಿಲ್ಲ ಎಂದು ಜೆನ್ ತಮ್ಮ ನೆನಪನ್ನು ಬಿಚ್ಚಿದ್ದಾರೆ.

ಜೆನ್ ಪ್ರಕಾರ ಮೋನಿಕಾ ಬೇರೆ ಮಹಿಳೆಯರ ಹಾಗೆಯೇ ತುಂಬಾ ಆಕರ್ಷಕವಾಗಿದ್ದಳು. ಅವಳಲ್ಲಿ ಪುರುಷರ ಯಾವುದೇ ರೀತಿಯ ಲಕ್ಷಣಗಳು ಕಾಣುತ್ತಿರಲಿಲ್ಲ. ತಿಂಗಳಿಗೊಮ್ಮೆ ನನಗೆ ಪಿರೀಡ್ ಬಂದಿದೆ ಎಂದು ಹೇಳಿ ನನ್ನನ್ನು ಮೂರ್ಖನನ್ನಾಗಿಸುತ್ತಿದ್ದಳು, ಹಾಗೂ ಸತ್ಯವನ್ನು ಮುಚ್ಚಿಡುವ ಸಲುವಾಗಿ ಸ್ಯಾನಟರಿ ನ್ಯಾಪಕಿನ್ ಗಳ ಉಪಯೋಗ ಸಹ ಮಾಡುತ್ತಿದ್ದಳು. ಸೆಕ್ಸ್ ಸಂದರ್ಭದಲ್ಲಿ ನಾನೂ ಇಂತಹ ವಿಷಯಗಳ ಕಡೆಗೆ ಜಾಸ್ತಿ ಗಮನ ಹರಿಸುತ್ತಿರಲಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಜೆನ್ ನ ಮೊದಲ ಹೆಂಡತಿಯಿಂದ ಎರಡು ಮಕ್ಕಳಿದ್ದ ಕಾರಣ ಇಬ್ಬರೂ ಪರಸ್ಪರ ನಮಗೆ ಮಕ್ಕಳ ಅವಶ್ಯಕತೆ ಇಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು. ಮಕ್ಕಳ ಜೊತೆಗೂ ಮೋನಿಕಾ ತುಂಬಾ ಚೆನ್ನಾಗಿ ವರ್ತಿಸುತ್ತಿದ್ದಳು.

ಜೆನ್ ನ ಜೀವನದಲ್ಲಿ ನಾಟ್ಯಮಯ ತಿರುವು ಯಾವಾಗ ಬಂತೆಂದರೆ ಮೋನಿಕಾಗೆ ಫುಲ್ ಟಾಯಿಮ್ ಜಾಬ್ ಸಿಕ್ಕಾಗ. ಮೋನಿಕಾಳು ಕೆಲಸದ ಮೇಲೆ ಹೋಗಲು ಪ್ರಾರಂಭಿಸಿದ ನಂತರ ಅವಳ ಜೀವನದಲ್ಲಿ ತುಂಬಾ ವೇಗದಿಂದ ಪರಿವರ್ತನೆ ಕಾಣಲಾರಂಭಿಸಿತು. ಜೆನ್ ನ ಮಗ ಎಷ್ಟೋ ಸಲ ತನ್ನ ಎರಡನೆಯ ತಾಯಿಯನ್ನು(ಮೋನಿಕಾಳನ್ನು) ನೈಟ್ ಕ್ಲಬ್ ನಲ್ಲಿ ನೋಡಿ ತಂದೆಗೆ ಹೇಳಿದನು. ಮೋನಿಕಾಳು ತನ್ನ ಉಡುಪುಗಳನ್ನು ತುಂಬಾ ಪ್ರಚೋದಿಸುವ ನಿಟ್ಟಿನಲ್ಲಿ ಧರಿಸಲು ಶುರು ಮಾಡಿದ್ದಳು. ಈ ವಿಷಯದ ಬಗ್ಗೆ ಇಬ್ಬರೂ ಚರ್ಚಿಸಬೇಕೆಂದರೆ ದಿಢೀರ್ ಅಂತ ಮೋನಿಕಾ ಜಗಳಕ್ಕೆ ನಿಲ್ಲುತ್ತಿದ್ದಳು. ಎಷ್ಟೋ ಸಲ ವಾದವಿವಾದ ಹೂಡಿಬಡಿಯಲ್ಲಿ ಪರಿವರ್ತನೆಗೊಂಡು ಪೊಲೀಸರ ವರೆಗೂ ಹೋಗಲಾರಂಭಿಸಿತು. ಮುಂದೆ ಒಂದು ದಿನ ಜೆನ್ ನ ಗೆಳೆಯ ಹೇಳಿದ, ‘ನಿನ್ನ ಹೆಂಡತಿ ಮೋನಿಕಾ ಲಿಂಗ ಪರಿವರ್ತನೆ ಮಾಡಿಕೊಂಡ ಗಂಡು ಇದ್ದಾನೆ ಅಂತ’. ಮೊದ ಮೊದಲು ಜೆನ್ ಗೆ ವಿಶ್ವಾಸ ಮೂಡಲಿಲ್ಲ. ಮುಂದೆ ಮಗನು ಸಹ ಅದೇ ಮಾತನ್ನು ಹೇಳಿದಾಗ ಈ ವಿಷಯವಾಗಿ ಮೋನಿಕಾಳ ಜೊತೆಗೆ ಜೆನ್ ಚರ್ಚಿಸಿದಾಗ ಜಗಳಿನ ಆವೇಶದಲ್ಲಿ ಮೋನಿಕಾ ಬಾಯಿ ಬಿಟ್ಟ ಸತ್ಯದಿಂದ ಜೆನ್ ನ ಕಾಲು ಕೆಳಗಿನ ಭೂಮಿಯೇ ಬಾಯಿ ತೆರೆದು ನುಂಗಿದ ಅನುಭವವಾಯಿತು. ಮತ್ತು ನಾನು 19 ವರ್ಷಗಳ ವರೆಗೆ ಒಂದು ಗಂಡಿನ ಜೊತೆಗೆ ಸಂಸಾರವನ್ನು ನಡೆಸುತ್ತಿದ್ದೆ ಎನ್ನುವ ಸಂಗತಿ ತಿಳಿದುಕೊಂಡು ಜೀವನದ ಬಗ್ಗೆ ಜಿಗುಪ್ಸೆ ಮೂಡಿದ ಹಾಗೆ ಆಯಿತು. ನಂತರ ಕಾನೂನಿನ ಪ್ರಕಾರ ಮೋನಿಕಾಳಿಂದ ವಿಚ್ಚೇದನೆ ಪಡೆದನು.


Click Here To Download Kannada AP2TG App From PlayStore!