ಕೂಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ತನ್ನ ಆರು ಹೆಣ್ಣು ಹಾಗೂ ಒಬ್ಬ ಗಂಡು ಮಕ್ಕಳನ್ನು ಉನ್ನತ ಅಧಿಕಾರಿಗಳನ್ನಾಗಿ ಮಾಡಿದ…!

ನೆಲ್ಸನ್ ಮಂಡೇಲಾ ರವರು ಹೇಳಿದಂತೆ ಪ್ರಪಂಚವನ್ನೇ ಬದಲಾಯಿಸುವ ಶಕ್ತಿಯುಳ್ಳ ಆಯುಧ ವಿದ್ಯೆ. ಇದು ಸತ್ಯವಾದ ಮಾತು. ವಿದ್ಯೆಯಿಂದಲೇ ಆ ಕೆಲಸ ಸಾಧ್ಯವಾಗುತ್ತದೆ. ಆದ್ದರಿಂದಲೇ ಆ ವ್ಯಕ್ತಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಿದ್ದೇ ಅಲ್ಲದೆ ತನ್ನ 6 ಮಂದಿ ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ದೇಶವೇ ಹೆಮ್ಮೆಪಡುವಂತೆ ಬೆಳೆಸಿದ್ದಾರೆ. ಅವರನ್ನು ಕಷ್ಟಪಟ್ಟು ಓದಿಸಿ ಮುನ್ನಡೆಸಿದ ಆತನ ಹೆಸರು ರೂಪಾರಾಂ ಧನದೇವ್.

Rooparam-Dhandev

ರಾಜಾಸ್ಥಾನ್ ನ ಜೈಸಲ್ಮೇರ್ ಜಿಲ್ಲೆಯ ಚೆಲಾಕ್ ಗ್ರಾಮದಲ್ಲಿನ ದಲಿತ ಕುಟುಂಬದಲ್ಲಿ ಜನಿಸಿದ ರೂಪಾರಾಂ ನ ತಂದೆ ಕೂಲಿ ಕೆಲಸ ಮಾಡುತ್ತಿದ್ದು, ಕಷ್ಟಪಟ್ಟು ತನ್ನನ್ನು ಓದಿಸುತ್ತಿರುವ ತಂದೆಯ ಆಶಯವನ್ನು ವ್ಯರ್ಥ ಮಾಡದೆ ಶ್ರದ್ಧೆಯಿಂದ ಓದಿ ಪ್ರೌಢಶಾಲೆಯಲ್ಲಿ ಉತ್ತಮ ಪ್ರತಿಭೆ ತೋರಿ ಮೊದಲಸ್ಥಾನ ಗಳಿಸಿದ. ಮುಂದಿನ ವಿದ್ಯಾಭ್ಯಾಸಕ್ಕೆ ಹಣದ ಕೊರತೆ ಇದ್ದುದರಿಂದ ಶಾಲೆಯ ಉಪಾಧ್ಯಾಯರು ಸಹಾಯ ಮಾಡಿದರು. ರೂಪಾರಾಂಗೆ ಮದುವೆಯಾದ ನಂತರವೂ ಓದಬೇಕೆಂಬ ಆಸೆ ಇತ್ತು. ವಿದ್ಯಾಭ್ಯಸ ಮಾಡುತ್ತಲೇ ಬಿಡುವಿನ ಸಮಯದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಅದರಿಂದ ಬಂದ ಹಣದಿಂದ ಕುಟುಂಬವನ್ನು ಪೋಷಿಸುತ್ತಿದ್ದ. ಹೀಗೆಯೇ ಎಂ.ಬಿ.ಎ. ಮುಗಿಸಿ ರಾಜಾಸ್ಥಾನ್ ಪಬ್ಲಿಕ್ ಸರ್ವೀಸ್ ಕಮೀಷನ್ ನಲ್ಲಿ ಇಂಜಿನಿಯರ್ ಹುದ್ದೆ ಗಳಿಸಿದ. ತನ್ನ ಮಕ್ಕಳನ್ನು ಪ್ರಯೋಜಕರನ್ನಾಗಿ ಮಾಡಬೇಕೆಂಬ ಷರತ್ತಿನಿಂದ ತನ್ನ ಮಕ್ಕಳನ್ನೂ ಬೆಳೆಸಿದರು.

ರೂಪಾರಾಂನ ಹಿರಿಯ ಮಗಳು ಅಂಜನ ಜೈ ಸಲ್ಮೇರ್ ನ ಮೇಯರ್ ಆಗಿ, ಎರಡನೇ ಮಗಳು ಗೋಮತಿ ದಂತವೈದ್ಯರಾಗಿ, ಮೂರನೇ ಮಗಳು ರಾಜೇಶ್ವರಿ ಪೀಡಿಯಾಟ್ರಿಷನ್ (ಮಕ್ಕಳ ವೈದ್ಯರು), ನಾಲ್ಕನೇ ಮಗಳು ಪ್ರೇಂ ಜೈ ಸಲ್ಮೇರ್ ನ ಆರ್.ಪಿ.ಎಸ್. ಅಧಿಕಾರಿಯಾಗಿ, ಐದನೇ ಮಗಳು ದಂತವೈದ್ಯರಾಗಿ, ಆರನೇ ಮಗಳು ಕ್ಯಾಲಿಫೋರ್ನಿಯಾದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾಳೆ. ಮಗ ಹರೀಶ್ ಅಲ್ಲಿಯೇ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಬೇಸಾಯದ ಮೇಲೆ ಆಸಕ್ತಿ ಇರುವುದರಿಂದ -ಅಲೊವೆರಾ (ಲೋಳೆಸರ) ಬೆಳೆಯನ್ನು ಬೆಳೆಸುತ್ತಾ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾನೆ. ಇದೇ ಒಬ್ಬ ಬಡ ದಲಿತ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯ ವಿಜಯ ಗಾಥೆ. ರೂಪಾರಾಂ ಹಾಗೂ ಆತನ ಮೊದಲ ಐದು ಮಂದಿ ಮಕ್ಕಳನ್ನು ಹೋಲಿಸಿದರೆ ಒಂದು ವಿಶೇಷತೆಯನ್ನು ಕಾಣಬಹುದು. ಅವರು ಹುದ್ದೆಗಳನ್ನು ಪಡೆದ ಮೊದಲ ದಲಿತ ವ್ಯಕ್ತಿಗಳು ಜೈ ಸಲ್ಮೇರ್ ನವರೇ ಆಗಿರುವುದು ಒಂದು ವಿಶೇಷವಾಗಿದೆ.

ಕೂಲಿ ಕೆಲಸ ಮಾಡುತ್ತಲೇ ತಾನು ವಿದ್ಯಾಭ್ಯಾಸ ಮಾಡಿಕೊಂಡು, ತನ್ನ ಮಕ್ಕಳಿಗೂ ವಿದ್ಯಾಭ್ಯಾಸ ಮಾಡಿಸಿ, ಉನ್ನತ ಸ್ಥಾನಕ್ಕೇರಿದ ರೂಪಾರಾಂಗೆ ಹ್ಯಾಟ್ಸಾಪ್ ಹೇಳಲೇಬೇಕು.

 


Click Here To Download Kannada AP2TG App From PlayStore!