400 ವರ್ಷಗಳ ಹಿಂದೆಯೇ ಭಾರತದಲ್ಲಿ ಏ.ಸಿ.ರೂಮುಗಳಿದ್ದುವಂತೆ.! ಅವು ಎಲ್ಲಿವೆ?ಹೇಗೆ ತಯಾರಿಸಿದರು?

ಮೊಘಲ್ ರಾಜರುಗಳಲ್ಲಿ ‘ಅಕ್ಬರ್’ ಹೆಸರು ಪ್ರಮುಖವಾದುದು. ಹೆಚ್ಚು ಕಡಿಮೆ ದೇಶದ ಎಲ್ಲಾ ರಾಜ್ಯಗಳನ್ನೂ ತನ್ನ ಹದ್ದು ಬಸ್ತಿನಲ್ಲಿಟ್ಟುಕೊಂಡಿದ್ದ. ಆತ ನಿರ್ಮಿಸಿದ ‘ಫತೇಪೂರ್ ಸಿಕ್ರಿ’ ರಾಜ ಭವನ ಬಹಳ ಆಕರ್ಷಣೀಯವಾಗಿದೆ. ಈಗಲೂ ಸಹ ರಾಜ ಭವನಗಳ ವಿಷಯ ಬಂದಾಗ ‘ಫತೇಪೂರ್ ಸಿಕ್ರಿ’ ಬಗ್ಗೆ ಜನರು ಹೆಮ್ಮೆಯಿಂದ ಮಾತನಾಡುತ್ತಾರೆ. ಆದರೆ,ಅಕ್ಬರ್ ಅರಮನೆಗಳ ಪೈಕಿ 400 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ‘ಬುಲಂದ್ ದರ್ವಾಜಾ’ ವಿಶಿಷ್ಟವಾದದ್ದು. ಏಕೆಂದರೆ,ಈ ಭವನವು ಸೆಖೆಯನ್ನು ತನ್ನ ಒಳಗೆ ಬರಗೊಡದೆ ಯಾವಾಗಲೂ ತಂಪಾಗಿರಿಸುತ್ತದೆ.ಬೇಸಿಗೆಯ ತಾಪಮಾನದಿಂದ ಮುಕ್ತಿ ಪಡೆಯಲು ಈ ಭವನದಲ್ಲಿ 20 ಕೊಠಡಿಗಳನ್ನು ನಿರ್ಮಿಸಿದ್ದಾನೆ.ಎಂತಹ ಬಿರು ಬೇಸಿಗೆಯಲ್ಲಿಯೂ ಈ ಕೊಠಡಿಗಳು ತಂಪಾಗಿರುವುದರಿಂದ,ಬೇಸಿಗೆಯಲ್ಲಿ ತನ್ನ ಕುಟುಂಬವನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದನಂತೆ.ಅಂದರೆ,400 ವರ್ಷಗಳ ಹಿಂದೆ ಫ್ಯಾನ್,ಏ.ಸಿ. ಹಾಗೂ ವಾತಾವರಣವನ್ನು ತಂಪಾಗಿಡುವ ಸಾಧನಗಳು ಇಲ್ಲದಿದ್ದ ಸಮಯದಲ್ಲಿ, ಈ ರೀತಿ ತಂಪಾಗಿರುವಂತೆ ಏರ್ಪಾಟು ಮಾಡಿದ್ದನಂತೆ.ಅದು ಹೇಗೆಂದು ತಿಳಿದುಕೊಳ್ಳೋಣ.

1_1455533355

 

ಉತ್ಖನನದಲ್ಲಿ ಹವಾ ನಿಯಂತ್ರಿತ ಕೊಠಡಿಗಳ ಬಗ್ಗೆ ತಿಳಿಯಿತು :

ಪುರಾತತ್ವ ಇಲಾಖೆಯ ಸರ್ವೇ ಸಿಬ್ಬಂದಿ, ‘ಬುಲಂದ್ ದರ್ವಾಜಾ’ವನ್ನು ಪರೀಕ್ಷಿಸುವಾಗ ಅಲ್ಲಿರುವ ಶಿಥಿಲಗಳ ಕೆಳಗೆ ಗುಟ್ಟುಅಡಗಿದೆಯೆಂಬ ಅನುಮಾನದಿಂದ ಸುಮಾರು ಆರು ತಿಂಗಳುಗಳ ಕಾಲ ಉತ್ಖನನ ನಡೆಸಿದರು.ಈ ಸಮಯದಲ್ಲಿ ಅಲ್ಲಿಒಂದು ದೊಡ್ಡ ಸುರಂಗ ವಿರುವುದನ್ನು ಗಮನಿಸಿ,ಆ ಸುರಂಗ ಮಾರ್ಗವಾಗಿ ಹೋಗುವಾಗ ಸುರಂಗದ ಕೆಳ ಭಾಗದಲ್ಲೊಂದು ಕೊಠಡಿ ಕಂಡುಬಂದಿತು. ಅದರ ನಂತರ ಒಂದು ಶೀತಲೀಕರಣ ಕೊಠಡಿಯನ್ನು ಕಂಡರು.

2_1455533355

ಆ ಕೊಠಡಿಗಳ ವಿಶೇಷತೆಯೇನು ?
ಆ ಶಿತಲೀಕರಣ ಕೊಠಡಿಗಳು ತಂಪಾಗಿರುವುದರ ಕಾರಣವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ,ಕಕೊಠಡಿಯ ಸುತ್ತಲೂ ಭೂಗರ್ಭ ಜಲವಿದ್ದುದರಿಂದ ಯಾವಾಗಳು ತಂಪಾಗಿರುತ್ತಿತ್ತಂತೆ.ಈ ಕೊಠಡಿಗಳಲ್ಲಿ 400 ವರ್ಷಗಳ ಹಿಂದೆ ಅಕ್ಬರ್ ತನ್ನ ಕುಟುಂಬದವರೊಂದಿಗೆ ಇಲ್ಲಿಗೆ ಬಂದು ಕಾಲ ಕಳೆಯುತ್ತಿದ್ದನೆಂದು ಪುರಾತತ್ವ ಇಲಾಖೆ ತಿಳಿಸಿತಂತೆ.ಇಲ್ಲಿ ಕಿಟಕಿಗಳನ್ನೂ ಇಟ್ಟಿದ್ದಾರಂತೆ.ಗೋಡೆಗಳ ಸುತ್ತಲೂ ಯಾವಾಗಲೂ ನೀರು ಹರಿಯುತ್ತಿರುವುದರಿಂದ ,ಗೋಡೆಗಳನ್ನು,ಕಿಟಕಿಗಳನ್ನು ನೀರಿನಿಂದ ಒದ್ದೆ ಮಾಡುತ್ತಿದ್ದರಂತೆ.ಆಕಾರಣದಿಂದಾಗಿ ಕೋಣೆಗಳು ಯಾವಾಗಲೂ ತಂಪಾಗಿರುತ್ತಿದ್ದವಂತೆ.

3_1455533356

ಮಳೆ ನೀರಿನ ಕೊಯಿಲನ್ನು(Rain water harvesting) ಮಾಡಿಸಿದ್ದ ಅಕ್ಬರ್.

ಮತ್ತಷ್ಟು ಉತ್ಖನನ ಮಾಡಿಅಕ್ಬರನ ಅರಮನೆಯನ್ನು ಪರಿಶೀಲಿಸಿದಾಗ,ಅಲ್ಲಿ 52 ಭಾವಿಗಳಿದ್ದು,ಅವುಗಳನ್ನು ಮಳೆಯ ನೀರಿನಿಂದ ತುಂಬಿಸುತ್ತಿದ್ದನೆಂದು ಪುರಾತತ್ವ ಸರ್ವೇ ಅಧಿಕಾರಿ ಭೂಷಣ್ ವಿಕ್ರಂ ತಿಳಿಸಿದರು.ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವುದರಿಂದ,ಮಳೆಗಾಲದಲ್ಲಿ ಸಿಗುವ ಮಳೆಯ ನೀರನ್ನು ಆ ಭಾವಿಗಳಲ್ಲಿ ಶೇಖರಿಸಿಟ್ಟುಕೊಂಡು.ಬೇಸಿಗೆಯಲ್ಲಿ ಉಪಯೋಗಿಸುತ್ತಿದ್ದರಂತೆ.ಆ ಭಾವಿಗಳು ಈಗ ಶಿಥಿಲ ವಾಗಿವೆಯಂತೆ.
5_1455533356

 ಅಂದರೆ,400 ವರ್ಷಗಳ ಹಿಂದೆಯೇ ಮಳೆ ನೀರಿನ ಕೊಯಿಲನ್ನು ಅಕ್ಬರ್ ಮಾಡಿದ್ದನೆಂದಾಯ್ತು. ಈ ವಿಧವಾಗಿ ಅಕ್ಬರ್ ಚಕ್ರವರ್ತಿ 400 ವರ್ಷಗಳ ಹಿಂದೆಯೇ ಅತ್ಯಾಧುನಿಕ ರೈನ್ ವಾಟರ್ ಹಾರ್ವೆಸ್ಟಿಂಗ್,ಮತ್ತು ಹವಾನಿಯಂತ್ರಿತ ಕೊಠಡಿಗಳನ್ನು ಏರ್ಪಡಿಸಿದ್ದನೆಂದಾಯಿತು. ನಿಜ ಹೇಳಬೇಕೆಂದರೆ, ಅಕ್ಬರ್ ರಾಜನ ಅಂದಿನ ಕಲ್ಪನೆಗಳಲ್ಲಿ ಇವು ಬಹಳ ಚೆನ್ನಾಗಿವೆ.

8_1455533357


Click Here To Download Kannada AP2TG App From PlayStore!

Share this post

scroll to top