ನೀವು ಹುಟ್ಟಿದ ತಿಂಗಳುಗನುಸಾರವಾಗಿ ನಿಮ್ಮನ್ನು ಪೀಡಿಸುವ ವ್ಯಾಧಿಗಳು.

ನಾವು ಹುಟ್ಟಿದ ರಾಶಿಗಳ ಮೇಲೆ ನಮ್ಮ ಜಾತಕವನ್ನು ಹೇಳಬಹುದು. ನಕ್ಷತ್ರಕ್ಕನುಗುಣವಾಗಿ ವ್ಯಕ್ತಿಗಳ ಸ್ವಭಾವವನ್ನು ಹೇಳಬಹುದು. ಇತ್ತೀಚೆಗೆ ಜರುಗಿದ ಸಂಶೋಧನೆಗಳ ಪ್ರಕಾರ ಮತ್ತೊಂದು ವಿಷಯವು ಬಹಿರಂಗವಾಯಿತು. ಅದೇನೆಂದರೆ, ನಾವು ಹುಟ್ಟಿದ ತಿಂಗಳನ್ನು ನೋಡಿ ನಮಗೆ ಬರುವ ಕಾಯಿಲೆಗಳು ಯಾವುವೆಂದು ಹೇಳಬಹುದಂತೆ. ಆಯಾ ತಿಂಗಳುಗಳಲ್ಲಿ ಹುಟ್ಟಿದರೆ…27 ರೀತಿಯ ದೀರ್ಘಕಾಲೀನ ರೋಗಗಳು ಬರುತ್ತವೆಂದು ಸ್ಪೆಯಿನ್ ದೇಶದ ಯೂನಿವರ್ಸಿಟಿ ಆಫ್ ಅಲಿಕಂಟ್ ಸಂಶೋಧಕರು ಕೇಳುತ್ತಾರೆ. ಸುಮಾರು 30 ಸಾವಿರ ಜನರ ಮೇಲೆ ಸಂಶೋಧನೆ ನಡೆಸಿದರು.

ಚಳಿಗಾಲದಲ್ಲಿ ಅಲ್ಟ್ರಾವಯಲೆಟ್ ಕಿರಣಗಳು , ವಿಟಮಿನ್ ಡಿ ಯಲ್ಲಿ ಏರುಪೇರು, ವೈರಸ್ ಗಳ ಪ್ರಭಾವದಿಂದಾಗಿ ಸ್ತ್ರೀಯರ ಗರ್ಭದಲ್ಲಿರುವ ಪಿಂಡದ ಬೆಳವಣಿಗೆಯ ಮೆಲೆ ಪ್ರಭಾವ ಬೀರುತ್ತದಂತೆ.
ಅದೇರೀತಿ ಸೆಪ್ಟೆಂಬರ್ ತಿಂಗಳಲ್ಲಿ ಪುರುಷರಲ್ಲಿ ಥೈರಾಯಿಡ್ ಸಮಸ್ಯೆಗಳು ಹೆಚ್ಚಾಗಿ ಬರುತ್ತವಂತೆ.
ಜುಲೈ ತಿಂಗಳಲ್ಲಿ ಹುಟ್ಟಿದ ಶೇ.27 ಸ್ತ್ರೀಯರಲ್ಲಿ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಯಿದೆ. ಶೇ.40 ಮಂದಿ ನಿಗ್ರಹವನ್ನು ಕಳೆದುಕೊಳ್ಳುತ್ತಾರೆ.
ಆಯಾ ತಿಂಗಳಿನಲ್ಲಿ ಜನಿಸಿದ ಪುರುಷ ಹಾಗೂ ಸ್ತ್ರೀಯರಿಗೆ ಬರುವ ಕಾಯಿಲೆಗಳು:

1. ಜನವರಿ:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಮಲಬದ್ಧತೆ, ಅಲ್ಸರ್, ಬೆನ್ನುಮೂಳೆ ನೋವು ಅನಾರೋಗ್ಯ ಸಮಸ್ಯೆಗಳು ಬರುತ್ತವಂತೆ.

ಇನ್ನು ಈ ತಿಂಗಳಲ್ಲಿ ಹುಟ್ಟಿದ ಸ್ತ್ರೀಯರಿಗೆ ಮೈಗ್ರೇನ್, ಮೆನೋಪಾಸ್ ಸಮಸ್ಯೆಗಳು, ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆಗಳಿವೆಯಂತೆ.

2. ಫೆಬ್ರವರಿ:ಈ ತಿಂಗಳಲ್ಲಿ ಹುಟ್ಟಿದಹ ಗಂಡಸರಿಗೆ ಥೈರಾಯಿಡ್, ಹೃದಯ ರೋಗಗಳು, ಆಸ್ಟಿಯೋ ಆರ್ಥರೈಟಿಸ್ ಬರುತ್ತವಂತೆ.

ಹೆಂಗಸರಿಗೆ  ಆಸ್ಟಿಯೋ ಆರ್ಥರೈಟಿಸ್, ಥೈರಾಯಿಡ್, ಬ್ಲಡ್ ಕ್ಲಾಟ್ ಸಮಸ್ಯೆಗಳು ಬರುತ್ತವಂತೆ.

3. ಮಾರ್ಚ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಕಣ್ಣಿನ ಪೊರೆ, ಹೃದಯ ಸಮಸ್ಯೆಗಳು, ಅಸ್ತಮಾ ಬರುತ್ತವಂತೆ.

ಹೆಂಗಸರಿಗೆ ಆರ್ಥರೈಟೀಸ್, ರುಮಾಟಿಸಂ, ಮಲಬದ್ಧತೆ ಬರುತ್ತದಂತೆ.

4. ಏಪ್ರಿಲ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಅಸ್ತಮಾ, ಆಸ್ಟಿಯೋ ಪೊರೋಸಿಸ್, ಥೈರಾಯಿಡ್ ಸಮಸ್ಯೆಗಳು ಬರುತ್ತವಂತೆ.

ಹೆಂಗಸರಿಗೆ ಆಸ್ಟಿಯೋ ಪೊರೋಸಿಸ್, ಟ್ಯೂಮರ್‌ಗಳು, ಬ್ರಾಂಕೈಟೀಸ್ ಬರುತ್ತದಂತೆ.

5. ಮೇ:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಡಿಪ್ರೆಷನ್, ಅಸ್ತಮಾ, ಡಯಾಬಿಟೀಸ್ ಬರುತ್ತದಂತೆ.

ಹೆಂಗಸರಿಗಾದರೆ ಅಲರ್ಜಿಗಳು, ಆಸ್ಟಿಯೋ ಪೊರೋಸಿಸ್, ಮಲಬದ್ಧತೆ ಬರುತ್ತದಂತೆ.

6. ಜೂನ್ :ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಹೃದಯ ರೋಗಗಳು, ಕಣ್ಣಿನಲ್ಲಿ ಪೊರೆ, ಬ್ರಾಂಕೈಟೀಸ್ ಕಾಯಿಲೆಗಳು ಬರುತ್ತವಂತೆ.

ಹೆಂಗಸರಿಗೆ ಮಾನಸಿಕ ನೆಮ್ಮದಿ ಇಲ್ಲದಿರುವುದು, ಆರ್ಥರೈಟೀಸ್, ರುಮಾಟಿಸಂ ಕಾಯಿಲೆಗಳು ಬರುತ್ತವಂತೆ.

7. ಜುಲೈ:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಆರ್ಥರೈಟೀಸ್, ಅಸ್ತಮಾ, ಟ್ಯೂಮರ್‌ಗಳು ಬರುತ್ತವಂತೆ.

ಹೆಂಗಸರಿಗೆ ಕತ್ತು ನೋವು, ಅಸ್ತಮಾ, ಟ್ಯೂಮರ್‌ಗಳು ಬರುತ್ತವಂತೆ.

8. ಆಗಸ್ಟ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಅಸ್ತಮಾ, ಆಸ್ಟಿಯೋ ಪೊರೋಸಿಸ್, ಥೈರಾಯಿಡ್ ಸಮಸ್ಯೆಗಳು ಬರುತ್ತವಂತೆ.

ಹೆಂಗಸರಿಗೆ ಬ್ಲಡ್ ಕ್ಲಾಟ್ಸ್, ಆರ್ಥರೈಟೀಸ್, ರುಮಾಟಿಸಂ ಕಾಯಿಲೆಗಳು ಬರುತ್ತವೆ.

9. ಸೆಪ್ಟೆಂಬರ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಅಸ್ತಮಾ, ಆಸ್ಟಿಯೋ ಪೊರೋಸಿಸ್, ಥೈರಾಯಿಡ್ ಸಮಸ್ಯೆಗಳು ಬರುತ್ತವೆ.

ಹೆಂಗಸರಿಗೆ ಆಸ್ಟಿಯೋಪೊರೋಸಿಸ್, ಥೈರಾಯಿಡ್ ಸಮಸ್ಯೆಗಳು, ದೊಡ್ಡ ಟ್ಯೂಮರ್‌ಗಳು ಆಗುತ್ತವೆ.

10. ಅಕ್ಟೋಬರ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಥೈರಾಯಿಡ್ ಸಮಸ್ಯೆಗಳು, ಆಸ್ಟಿಯೋ ಪೊರೋಸಿಸ್, ಮೈಗ್ರೇನ್ ಸಮಸ್ಯೆಗಳು ಬರುತ್ತವೆ.

ಹೆಂಗಸರಿಗೆ ಹೈ ಕೊಲೆಸ್ಟ್ರಾಲ್, ಆಸ್ಟಿಯೋ ಪೊರೋಸಿಸ್, ಅನಿಮಿಯಾ ಕಾಯಿಲೆಗಳು ಬರುತ್ತವೆ.

11. ನವೆಂಬರ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಚರ್ಮ ಸಮಸ್ಯೆಗಳು, ಹೃದಯ ರೋಗಗಳು, ಥೈರಾಯಿಡ್ ಸಮಸ್ಯೆಗಳು ಬರುತ್ತವೆ.

ಹೆಂಗಸರಿಗೆ ಮಲಬದ್ಧತೆ, ಹಾರ್ಟ್ ಅಟ್ಯಾಕ್, ವೆರಿಕೋಸ್ ವೀನ್ಸ್ ಸಮಸ್ಯೆಗಳು ಬರುತ್ತವೆ.

12. ಡಿಸೆಂಬರ್:ಈ ತಿಂಗಳಲ್ಲಿ ಹುಟ್ಟಿದ ಗಂಡಸರಿಗೆ ಕಣ್ಣಿನಲ್ಲಿ ಪೊರೆ, ಡಿಪ್ರೆಷನ್, ಹೃದಯ ಸಮಸ್ಯೆಗಳು ಬರುತ್ತವೆ.

ಹೆಂಗಸರಿಗೆ ಬ್ರಾಂಕೈಟೀಸ್, ಅಸ್ತಮಾ, ಬ್ಲಡ್ ಕ್ಲಾಟ್ ಸಮಸ್ಯೆಗಳು ಬರುತ್ತವೆ.

 


Click Here To Download Kannada AP2TG App From PlayStore!