ಕಟ್ಟಿಂಗ್ ಮಾಡಿಸಿಕೊಂಡ ನಂತರ, ಶ್ಮಶಾನದಿಂದ ಬಂದಮೇಲೆ… ತಪ್ಪದೆ ಸ್ನಾನ ಮಾಡಬೇಕು.ಯಾಕೆಂದು ಗೊತ್ತೇ?

ಎಷ್ಟೇ ಕೆಲಸಗಳಿದ್ದರೂ, ಯಾವಾಗಲೇ ಆಗಲಿ,ಎಲ್ಲೇ ಇರಲಿ …. ನಾವು ಪ್ರತಿ ನಿತ್ಯ ಸ್ನಾನ ಮಾಡಲೇಬೇಕು. ಇದರಿಂದ ಶರೀರ ಶುದ್ಧವಾಗುವುದರ ಜೊತೆಗೆ ಅನೇಕ ರೀತಿಯ ರೋಗಗಳು ಹತ್ತಿರ ಸುಳಿಯದೆ ಇರುತ್ತವೆ. ಶರೀರದ ಆರೋಗ್ಯದ ಜೊತೆಗೆ ಮನಸ್ಸು ಸಹ ಉಲ್ಲಾಸದಿಂದಿದ್ದು ನೆಮ್ಮದಿ ದೊರೆಯುತ್ತದೆ.  ನಾವು ದಿನವೂ ಸ್ನಾನ ಮಾಡುತ್ತೇವಾದರೂ ಕೆಲವು ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆ ಸಂದರ್ಭಗಳು ಯಾವುವೆಂದು ತಿಳಿದುಕೊಳ್ಳೋಣ.

ಶ್ಮಶಾನದಿಂದ ಬಂದ ಮೇಲೆ…
ಯಾರಾದರು ಮರಣ ಹೊಂದಿದಾಗ ಅವರ ಮತದ ಸಂಪ್ರದಾಯದಂತೆ ದಹನ ಅಥವ ಖನನ ಮಾಡುತ್ತಾರೆ. ನಾವು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇ ಬೇಕು. ಯಾಕೆಂದರೆ, ಸತ್ತ ವ್ಯಕ್ತಿ ನಮಗೆ ಎಷ್ಟೇ ಹತ್ತಿರದವರಾದರೂ ಅದು ಮೃತ ದೇಹವೇ. ಅದರಲ್ಲಿ ಕೆಲವು ಕ್ರಿಮಿ ಕೀಟಗಳು ಇದ್ದೇ ಇರುತ್ತವೆ. ಅವು ನಮ್ಮ ಶರೀರಕ್ಕೂ ಅಂಟಿಕೊಂಡಿರಬಹುದು. ಆದುದರಿಂದ ಸ್ನಾನ ಮಾಡಲೇಬೇಕು.

ರತಿಕ್ರಿಯೆ ನಂತರ….
ದಂಪತಿಗಳು ರತಿಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಮರೆಯದೆ ಸ್ನಾನ ಮಾಡಬೇಕೆಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯಾಕೆಂದರೆ ಅದು ಒಂದು ಪವಿತ್ರ ದೈವ ಕಾರ್ಯವಾದುದರಿಂದ,ತಪ್ಪದೆ ಸ್ನಾನ ಮಾಡಲೇಬೇಕು. ಸ್ನಾನ ಮಾಡದೆ ಮನೆಯಿಂದ ಹೊರಗೆ ಹೋಗಬಾರದಂತೆ.

ಅಭ್ಯಂಜನ ನಂತರ :
ಪ್ರತಿಯೊಬ್ಬರೂ ವಾರಕ್ಕೆ ಒಮ್ಮೆಯಾದರೂ ಶರೀರಕ್ಕೆ ಎಣ್ಣೆ ಬಳಿದುಕೊಂಡು, ಮಸಾಜ್ ಮಾಡಿಕೊಂಡ ನಂತರ ತಪ್ಪದೆ ಸ್ನಾನ ಮಾಡಬೇಕು. ಮಸಾಜ್ ಮಾಡಿಕೊಂಡ ನಂತರ ತಡಮಾಡದೆ ಸ್ನಾನ ಮಾಡಬೇಕು . ಯಾಕೆಂದರೆ ಎಣ್ಣೆ ಮಸಾಜ್ ಮಾಡಿದರೆ ಚರ್ಮದ ಸೂಕ್ಷ್ಮ ರಂದ್ರಗಳು ತೆರೆದುಕೊಂಡು ವಿಷಪದಾರ್ಥಗಳು ಹೊರಗೆ ಬಂದಿರುತ್ತವೆ. ಆದುದರಿಂದ ತಡಮಾಡದೆ ಸ್ನಾನ ಮಾಡಬೇಕು.

ಕಟ್ಟಿಂಗ್ ಮಾಡಿಸಿಕೊಂಡ ನಂತರ :
ಕೂದಲು ಕತ್ತರಿಸಿಕೊಂಡನಂತರ ಶರೀರದ ಮೇಲೆ ಅಂಟಿಕೊಂಡಿರುವ ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ಕಟ್ಟಿಂಗ್ ಮಾಡಿಸಿಕೊಂಡ ಒಡನೆಯೇ ಸ್ನಾನ ಮಾಡಬೇಕು.


Click Here To Download Kannada AP2TG App From PlayStore!

Share this post

scroll to top