ಬಾಣಂತಿಯರು… ಎದೆ ನಡುವಿನ ಭಾಗವನ್ನು ಒಂದು ನಿಮಿಷದ ಕಾಲ ಮೃದುವಾಗಿ ಪ್ರೆಸ್ ಮಾಡಿದರೆ, ಹಾಲು ಚೆನ್ನಾಗಿ ಬರುತ್ತದಂತೆ.!

ದೇಹದ ಕೆಲವು ಭಾಗಗಳನ್ನು ಸ್ವಲ್ಪ ಸಮಯ ಮಸಾಜ್ ಮಾಡುವುದು ಅಥವಾ ಅವುಗಳ ಮೇಲೆ ಒತ್ತಡ ಉಂಟು ಮಾಡುವ ಮೂಲಕ ಹಲವು ಅನಾರೋಗ್ಯಗಳನ್ನು ಗುಣಪಡಿಸಿಕೊಳ್ಳಬಹುದು. ಇದನ್ನೇ ರಿಫ್ಲೆಕ್ಸಾಲಜಿ ಎಂದೂ, ಇನ್ನೂ ಸರಳವಾಗಿ ಹೇಳಬೇಕೆಂದರೆ ಆಕ್ಯುಪ್ರೆಜರ್ ವೈದ್ಯ ಎನ್ನುತ್ತಾರೆ. ಆದರೆ ಯಾವ ಭಾಗದಲ್ಲಿ ಮಸಾಜ್ ಮಾಡಿದರೆ ಯಾವ ಅನಾರೋಗ್ಯದಿಂದ ಉಪಶಮ ಪಡೆಯಬಹುದು ಈಗ ತಿಳಿದುಕೊಳ್ಳೋಣ. ದೇಹದಲ್ಲಿನ ಒಂದೊಂದು ಭಾಗವನ್ನು ಪ್ರೆಸ್ ಮಾಡುವುದರಿಂದ ಅದರ ಪ್ರಭಾವ ಇನ್ನೊಂದು ಭಾಗದ ಮೇಲಾಗುತ್ತದೆ. ಇದೇ ರೀತಿ ಎದೆ ಮಧ್ಯಭಾಗವನ್ನು, ಎರಡು ಹುಬ್ಬುಗಳ ಮಧ್ಯಭಾಗವನ್ನು ಪ್ರೆಸ್ ಮಾಡುವುದರಿಂದ ನಮ್ಮ ದೇಹಕ್ಕೆ ಅದ್ಭುತ ಫಲಿತಾಂಶಗಳು ಸಿಗುತ್ತವೆ!

ಚಿತ್ರದಲ್ಲಿ ತೋರಿಸಿದಂತೆ ಎದೆ ಮೂಳೆಗಳ ನಡುವಿನ ಭಾಗದಲ್ಲಿನ ಪಾಯಿಂಟನ್ನು ಸೀ ಆಫ್ ಟ್ರಾಂಕ್ವಿಲಿಟಿ ಎಂದು ಕರೆಯುತ್ತಾರೆ. ಈ ಪಾಯಿಂಟ್ ಮೇಲೆ 1 ರಿಂದ 2 ನಿಮಿಷಗಳ ಕಾಲ ಮೃದುವಾಗಿ ಒತ್ತಬೇಕು. ಆ ಸಮಯದಲ್ಲಿ ಉಸಿರಾಟ ನಿಧಾನಕ್ಕೆ ಇರಬೇಕು. ಈ ರೀತಿ ಮಾಡುವುದರಿಂದ ಗಾಬರಿ, ಆತುರತೆ, ಎದೆ ಸಮಸ್ಯೆಗಳು, ಹೃದಯ ಸಮಸ್ಯೆಗಳು, ಅಸ್ತಮಾ, ಕೆಮ್ಮಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದೇ ರೀತಿ ಹಾಲುಡುಸುವ ತಾಯಂದಿರಿಗೆ ಚೆನ್ನಾಗಿ ಹಾಲಾಗುತ್ತದಂತೆ.

ಚಿತ್ರದಲ್ಲಿ ತೋರಿಸಿದಂತೆ ಕಣ್ಣು ಹುಬ್ಬುಗಳ ನಡುವೆ ಇರುವ ಪಾಯಿಂಟನ್ನು ಥರ್ಡ್ ಐ ಪಾಯಿಟ್ ಎಂದು ಕರೆಯುತ್ತಾರೆ. ಈ ಪಾಯಿಂಟ್ ಸ್ವಲ್ಪ ಹೊತ್ತು ಮಸಾಜ್ ಮಾಡುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ನಿದ್ರಾಹೀನತೆ, ತಲೆನೋವು, ಮೂಗು ಕಟ್ಟುವಂತಹ ಸಮಸ್ಯೆಗಳಿಗೆ ಥರ್ಡ್ ಐ ಪಾಯಿಂಟ್ ಮೂಲಕ ಗುಣಪಡಿಸಿಕೊಳ್ಳಬಹುದು. ಎರಡು ಕಣ್ಣುಗಳನ್ನು ಮುಚ್ಚಿ ಕಣ್ಣುಹುಬ್ಬುಗಳ ನಡುವೆ ಥರ್ಡ್ ಐ ಪಾಯಿಂಟನ್ನು ಸುಮಾರು 1 ನಿಮಿಷ ಕಾಲ ತೋರು ಬೆರಳಿನಿಂದ ಅಥವಾ ಮಧ್ಯ ಬೆರಳಿನಿಂದ ಮೃದುವಾಗಿ ಒತ್ತಬೇಕು. ಈ ಸಮಯದಲ್ಲಿ ದೀರ್ಘವಾಗಿ ಶ್ವಾಸ ತೆಗೆದುಕೊಳ್ಳಬೇಕು.

ಕೊನೆಯದಾಗಿ ಒಂದು ವಿಷಯ. ರಿಫ್ಲೆಕ್ಸಾಲಜಿ ಪದ್ಧತಿಯಲ್ಲಿ ಆಕ್ಯುಪ್ರೆಷರ್ ಮೂಲಕ ಉಪಶಮನ ಪಡೆಯಬೇಕೆಂದಿರುವವರು ಉಸಿರಾಟದ ಮೇಲೆ ಹೆಚ್ಚಿನ ದೃಷ್ಟಿ ಹರಿಸಬೇಕು. ಖಚಿತವಾದ ಶ್ವಾಸದಿಂದ ಮಾನಸಿಕವಾಗಿಯೂ ಉಲ್ಲಾಸ ಸಿಗುತ್ತದೆ.

ಅಂಗೈ, ಪಾದಗಳಲ್ಲಿ ಒತ್ತುವುದರಿಂದ ಉತ್ತಮ ಆರೋಗ್ಯ ಸಿಗುತ್ತದೆ. ಇದರಿಂದ ಹಲವು ನೋವುಗಳಿಂದ ಉಪಶಮನ ಸಿಗುತ್ತದೆ. ಅದೇ ರೀತಿ ತಲೆಸುತ್ತುವ, ವಾಂತಿಯಾಗುವಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.

 


Click Here To Download Kannada AP2TG App From PlayStore!