ಎಷ್ಟು ಅದ್ಭುತವಾದ ಪೋಸ್ಟಿಂಗ್ ಇದು ಎಲ್ಲರೂ ತಪ್ಪದೇ ಓದಿರಿ….. ಈ ಕಥೆಯನ್ನು ಓದಿದ ಕೆಲವರಲ್ಲಾದರೂ ಬದಲಾವಣೆ ಯಾಗುತ್ತದೆ….

ನಿಜವಾಗಿಯೂ ಇದೊಂದು ಕಣ್ಣು ತೆರೆಸುವಂತಹ ಅದ್ಭುತವಾದ ನೀತಿಕಥೆ. ಒಂದಾನೊಂದು ನಗರದಲ್ಲಿ ಲಕ್ಷ್ಮೀಪತಿ ಎಂಬ ವ್ಯಕ್ತಿ ಇದ್ದನು. ಆತನಿಗೆ ಒಂದು ಸಂಕಲ್ಪವಿದೆ. ಅವರ ಮನೆಯ ಹತ್ತಿರದಲ್ಲಿ ಒಂದು ಸುಂದರವಾದ ಭವನವಿದೆ. ಯಾರದು ಆ ಮನೆ ಎಂದು ಕೇಳಿದರೆ ಯಾರೋ ಕೋಟ್ಯಾಧಿಪತಿಯ ಮನೆ ಎಂಬ ಉತ್ತರ ಬರುತ್ತದೆ. ಆಗ ಅಂದು ಕೊಳ್ಳುತ್ತಾನೆ ಈ ನಗರದಲ್ಲಿರುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ತಾನೂ ಸೇರಬೇಕು ಎಂದು. ಅದಕ್ಕಾಗಿ ಆತನು ಯುವಕನಾಗಿದ್ದಾಗಿನಿಂದಲೂ ತುಂಬಾ ಕಷ್ಟಪಡುತ್ತಿದ್ದನು. ಹಗಲು ರಾತ್ರಿ ದುಡಿಯುತ್ತಿದ್ದನು. ಸಂಪಾದನೆ ಮಾಡುವುದೇ ಸರ್ವಸ್ವವೆಂದು ಭಾವಿಸಿ ದುಡಿಯುತ್ತಿದ್ದನು.

40 ವರ್ಷದೊಳಗೆ ಕೋಟ್ಯಾಧಿಪತಿಯಾದನು. ಒಂದು ಕೋಟಿಯ ನಂತರ ಇನ್ನೊಂದು ಕೋಟಿ ಹೀಗೆ 50 ವರ್ಷದೊಳಗೆ ಎಷ್ಟೋ ಕೋಟಿಗಳ ಹಣ ಸಂಪಾದನೆ ಮಾಡಿದ. ಹಿಂದೆ ತಾನು ನೋಡಿದ ಬಂಗಲೆಯಂತಹ 2-3 ಬಂಗಲೆಗಳನ್ನು ಕಟ್ಟಿಸಿದನು. ಆದರೂ ತೃಪ್ತಿಯಾಗಲಿಲ್ಲ. ಈಗಿರುವ ಮನೆಗಳಲ್ಲದೆ, ನಗರದ ಮಧ್ಯಭಾಗದಲ್ಲಿ ತನ್ನ ಶ್ರೀಮಂತಿಕೆಯನ್ನು ಜನರಿಗೆ ತಿಳಿಯುವಂತೆ ಮಾಡಲು ಇಂದ್ರ ಭವನದಂತಹ ಒಂದು ಮನೆಯನ್ನು ಕಟ್ಟಿಸಬೇಕೆಂದು ಅದಕ್ಕಾಗಿ ಮತ್ತಷ್ಟು ಕಷ್ಟಪಟ್ಟು ದುಡಿದನು.

ಅಂದುಕೊಂಡದ್ದನ್ನು ಸಾಧಿಸಿದನು ಲಕ್ಷ್ಮೀಪತಿ. ನಗರದ ಮಧ್ಯದಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಅದ್ಭುತವಾದ ಭವನವನ್ನು ಕಟ್ಟಿಸಿದನು.  ಅದರ ಗೃಹಪ್ರವೇಶದ ದಿನದಂದು ನಗರದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಆಹ್ವಾನಿಸಿದನು. ಒಂದೊಂದು ದೇಶಕ್ಕೆ ಸಂಬಂದಿಸಿದ ಒಂದೊಂದು ವೈಶಿಷ್ಠತೆಗಳೆಲ್ಲವನ್ನು ಒಂದೇ ಕಡೇ ಹೊಂದಿಸಿದಂತೆ ಆ ಮನೆ ಇರುವುದರಿಂದ ಎಲ್ಲರೂ ಅಬ್ಬಾ! ಎಂದು ಆಶ್ಚರ್ಯಪಟ್ಟರು. ಶಭಾಷ್ ಎಂದು ಲಕ್ಷ್ಮೀಪತಿಯನ್ನು ಅಭಿನಂದಿಸಿದರು.

ಬಂದಿದ್ದ ಅತಿಥಿಗಳೆಲ್ಲರೂ ಹೋದ ಮೇಲೆ, ಲಕ್ಷ್ಮೀಪತಿ ಮಲಗುವ ಕೋಣೆಗೆ ಹೋಗಿ ಹಾಸಿಗೆ ಮೇಲೆ ಹಾಗೆಯೇ ಮಲಗಿದನು. ಹೆಂಡತಿ ಮಕ್ಕಳು ಇನ್ನೂ ಪೋನ್ ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಮನೆಯ ವೈಭೋಗದ ಬಗ್ಗೆ, ಅಥಿತಿಗಳ ಕಾಮೆಂಟಗ’ಗಳ ಬಗ್ಗೆ, ಮನೆಗೆ ಆದ ಖರ್ಚಿನ ಬಗ್ಗೆ ಅವರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಲಕ್ಷ್ಮೀಪತಿಗೆ ಯಾಕೋ ಇಂದು ಕಣ್ತುಂಬ ನಿದ್ದೆ ಹೋಗಬೇಕೆನ್ನಿಸಿತು.

ನಿಧಾನವಾಗಿ ಕಣ್ಣು ಮುಚ್ಚುತ್ತಿರುವಾಗ “ನಾನು ಹೋಗುತ್ತೇನೆ” ಎಂದು ಯಾರೋ ಕಿವಿಯಲ್ಲಿ ಹೇಳಿದಂತಾಯಿತು. ಕಣ್ಣು ತೆರೆದು ನೋಡಿದರೆ ಏನೂ ಕಾಣಿಸಲಿಲ್ಲ. ಎಲ್ಲಾ ಕತ್ತಲೆಯಂತಿದೆ. ಯಾರು? ಎಂದನು…. ಲಕ್ಷ್ಮೀಪತಿ. ಆದರೂ ತನ್ನ ಧ್ವನಿಗೆ ಪ್ರತಿಧ್ವನಿ ನೀಡಿದಂತೆ ಆಯಿತು. ನಾನು ನಿನ್ನ ಆತ್ಮ , ನಾನು ಹೋಗುತ್ತಿದ್ದೇನೆ ಎಂದು  ಕೇಳಿ ಬಂದಿತು.

ಅದೇನು, ನೀನು ಹೋದರೆ ನಾನು ಸತ್ತು ಹೋಗ್ತೀನಿ ಅಲ್ವಾ! ಎಂದು ಗಾಬರಿಯಾದನು ಲಕ್ಷ್ಮೀಪತಿ. ಹೌದು ಎಂದು ಪ್ರತಿಧ್ವನಿಸಿತು. ಆಗ ಆತ್ಮ ಬೇಡ ಹೋಗಬೇಡ! ನೋಡು ಎಷ್ಟು ಸುಂದರವಾದ ಮನೆಯನ್ನು ಕಟ್ಟಿಸಿದ್ದೇನೆ. ಎಷ್ಟು ಹಣ ಸಂಪಾಧನೆ ಮಾಡಿದ್ದೆನೆ. ನೋಡು ಇವೆಲ್ಲಾ ನಿನಗೋಸ್ಕರನೇ ಅಲ್ವಾ! ನಿನ್ನನ್ನು ಸುಖಪಡಿಸುವುದಕ್ಕೆ ಅಲ್ವಾ, ನಿನ್ನ ತೃಪ್ತಿಗಾಗಿಯೇ ಅಲ್ವಾ. ಇರು ನನ್ನಲ್ಲಿದ್ದು ಇವೆಲ್ಲವನ್ನು ಅನುಭವಿಸು ಎಂದನು ಲಕ್ಷ್ಮೀಪತಿ. ಅನುಭವಿಸಬೇಕಾ….? ಹೇಗೆ ಅನಿಭವಿಸಲಿ….? ನಿನ್ನ ಶರೀರಕ್ಕೆ ಡಯಾಬೀಟಿಸ್ ಇರುವುದರಿಂದ ಸಿಹಿ ತಿನ್ನಲು ಆಗುವುದಿಲ್ಲ, ನಿನ್ನ ಶರೀರಕ್ಕೆ BP ಇರುವುದರಿಂದ ಉಪ್ಪು ಕಾರವನ್ನು ತಿನ್ನುವುದಕ್ಕೆ ಆಗುವುದಿಲ್ಲ, ಅದರ ಮೇಲೆ ಇಷ್ಟುವೂ ಇಲ್ಲ. ಇನ್ನೂ ಇಷ್ಟವಾದದ್ದೂ ಏನೂ ತಿನ್ನಲಾರೆ ಏಕೆಂದರೆ ನಿನ್ನ ಶರೀರಕ್ಕೆ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ನಿನ್ನ ಶರೀರವು ಒಟ್ಟಾರೆಯಾಗಿ ಕಣ್ಣಿನಿಂದ ಕಾಲಿನ ಏರೆಗೂ ಒಂದು ರೀತಿಯ ರೋಗಗಳ ಹುತ್ತವಾಗಿದೆ.

ಆ ಹೊಟ್ಟೆ ನೋಡು ಹೇಗೆ ಮುಂದಕ್ಕೆ ಬಂದಿದೆ. ಹೆಜ್ಜೆ ತೆಗೆದು ಮರು ಹೆಜ್ಜೆಹಾಕುವುದಕ್ಕೆ ನೀನು ಎಷ್ಟು ಆಯಾಸ ಪಡುತ್ತೀಯಾ ಎಂಬುದು ನಮ್ಮಿಬ್ಬರಿಗೂ ಗೊತ್ತು. ನೀನೇ ಹೇಳು ನಿನ್ನ ಶರೀರದಲ್ಲಿ ಹೇಗಿರಲಿ…? ಅಲ್ಲಲ್ಲಿ ಶಿಥಿಲವಾಗಿರುವ ಮನೆಯಲ್ಲಿ ಯಾರಾದ್ರು ಇರ್ತಾರಾ…? ನೀನು ಕಟ್ಟಿಸಿದ ಸುಂಧರವಾದ ಮನೆಯಿಂದ ನನಗೇನು ಸಂಬಂಧ…? ನಾನಿರುವುದು ನಿನ್ನ ಶರೀರದಲ್ಲಿ, ಅದೇ ನನ್ನ ನಿವಾಸಸ್ಥಳ. ನನ್ನ ಮನೆಗೆ ಇರುವ ಒಂಭತ್ತು ದ್ವಾರಗಳಿಗೂ ಸಮಸ್ಯೆಗಳೇ, ನನಗೆ ರಕ್ಷಣೆ ಇಲ್ಲ, ಸುಖವಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ, ನಿನಗೆ ಮೊದಲಿಗೆ ಬಂದತಹ ಖಾಯಿಲೆ, ಹಣದ ಖಾಯಿಲೆ ‌.

ಹಣದ ಖಾಯಿಲೆ ನಿನಗೆ ಬಂದಂದಿನಿಂದ, ನನ್ನನು ಒಮ್ಮೆಯಾದರೂ ನಿದ್ದೆ ಮಾಡಲು ಬಿಟ್ಟಿದ್ದೀಯಾ…? ನಾನಿರುವ ಶರೀರಕ್ಕೆ ಸ್ವಲ್ಪವಾದರೂ ವಿಶ್ರಾಂತಿ ನೀಡಿದ್ದೀಯಾ….? ಪ್ರತೀಕ್ಷಣವೂ ಇನ್ನೊಬ್ಬನಿಗೆ ಪೈಪೋಟಿಯಾಗಿ ನನ್ನಲ್ಲಿ ಅಸೂಯೆಯನ್ನು ತುಂಬಿದ್ದೀಯಾ…? ಇನ್ನೊಬ್ಬನನ್ನು ಹಿಂದೆ ತಳ್ಳಲು ನನ್ನಿಂದ ಕುತಂತ್ರಗಳನ್ನು ಮಾಡಿಸಿದೆ. ಎಷ್ಟೋ ಸಾರಿ ನನ್ನನ್ನು ಹಗೆಯಿಂದ, ಹೊಟ್ಟೆಕಿಚ್ಚಿನಿಂದ, ಎಷ್ಟು ನೋಯಿಸಿದೆಯೋ ಒಂದುಸಾರಿ ನೆನಪುಮಾಡಿಕೋ… ರೋಗಗಳು ಆವರಿಸಿದರೂ, ಎಂದಾದರೂ ಗಮನ ಹರಿಸಿದೆಯಾ? ಯೋಚನೆ ಮಾಡಿ ನೋಡು. ಇನ್ನೂ ಒಂದು ಕ್ಷಣವೂ ನಾನು ನಿನ್ನ ಶರೀರದಲ್ಲಿ ಇರುವುದಿಲ್ಲ. ನಾನು ಹೋಗುತ್ತಿದ್ದೇನೆ…!” ಎಂದು ಆ ರಾತ್ರಿ ತಾನು ಸಂಪಾದನೆ ಮಾಡಿರುವ ಲಕ್ಷ್ಮೀಯನ್ನು ಇಲ್ಲಿಯೇ ಬಿಟ್ಟು ಲಕ್ಷ್ಮೀಪತಿ ಸ್ವರ್ಗಕ್ಕೋ ನರಕಕ್ಕೋ ಯಾವುದೋ ಒಂದು ಲೋಕಕ್ಕೆ ಕಾಣದಂತಹ ಲೋಕಕ್ಕೆ ಹೋಗಿಬಿಟ್ಟನು.

ಇಂದು ಪ್ರತಿ ಮನುಷ್ಯನಿಗೂ ನಾಳೆಯ ಬಗ್ಗೆ ಆಲೋಚನೆ ಅಧಿಕವಾಗಿದೆ. ಆದ್ದರಿಂದ ಈ ದಿನ, ಈ ಕ್ಷಣವನ್ನು ಆನಂದದಿಂದ ಅನಿಭವಿಸುವುದನ್ನು ಮರೆತಿದ್ದಾನೆ. ದೇವರು ಕೊಟ್ಟ ಆರೋಗ್ಯವೇ ಮಹಾಭಾಗ್ಯ ಎಂಬ ವಿಷಯವನ್ನು ಮರೆತು, ಮನುಷ್ಯ ಸೃಷ್ಠಿಸಿಕೊಂಡ ಹಣವನ್ನೇ ಭಾಗ್ಯವೆಂದುಕೊಳ್ಳುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ರೋಗಗಳನ್ನು ಬರಲೆಂದು ಆಹ್ವಾನ ನೀಡಿ,  ಅವು ಬಂದಾಗ ಖರ್ಚು ಮಾಡಲು ಕಷ್ಟಪಟ್ಟು ಹಣಸಂಪಾದನೆ ಮಾಡುತ್ತಿದ್ದಾನೆ. ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು. ಆನಂದಿಸಲು ಕಷ್ಟಪಡಬೇಕು. ನಾವು ಇರುವ ಜೀವನಕ್ಕಾಗಿ ಕಷ್ಟಪಡಬೇಕು. ಅಷ್ಟೇ ಆಗಲಿ ನಾವು ಹೋದ ನಂತರದ ಜೀವನಕ್ಕಾಗಿ ಕಷ್ಟ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ….?


Click Here To Download Kannada AP2TG App From PlayStore!