ಎಚ್ಚರಿಕೆ : ಗೂಬೆಯನ್ನು ಮನೆಯೊಳಗೆ ಬಿಡುತ್ತಾರೆ… ಪೂರ್ತೀ ಕೊಳ್ಳೆ ಹೊಡೆಯುತ್ತಾರೆ..!!

ಕಳ್ಳರಲ್ಲಿ ಎರಡು ರೀತಿಯವರು… ತಮ್ಮ ಕಷ್ಟವನ್ನೇ ನಂಬಿಕೊಂಡ ಕಳ್ಳರು.. ತಮ್ಮ ಬುದ್ದಿವಂತಿಕೆಯನ್ನು ನಂಬಿಕೊಂಡ ಕಳ್ಳರು. ಇದರಲ್ಲಿ ಈಗ ಎರಡನೇ ರೀತಿಯವರು ದೇಶದೆಲ್ಲಡೆ ಪ್ರತೀ ದಿನ ಯಾವುದೋ ಒಂದು ರೀತಿಯಲ್ಲಿ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ.ಇತ್ತೀಚೆಗೆ ಬೆಂಗಳೂರಿನ ಕಳ್ಳರು ಅತೀ ಬುದ್ಧಿವಂತರಾಗಿದ್ದಾರೆ. ಇಂತಹ ಕಳ್ಳತನವನ್ನು ನೀವ್ಯಾರೂ ಇದುವರೆಗೂ ಕೇಳಿರಲು ಸಾಧ್ಯವೇ ಇಲ್ಲ. ಅದುದರಿಂದಲೇ ಇಂದು ಈ ವಿಷಯ ದೇಶದೆಲ್ಲೆಡೆ ಬಿಸಿ ಸುದ್ದಿಯಾಗಿದೆ. ಈ ಹೊಸರೀತಿಯ ಕಳ್ಳರು ಮೊದಲು ಮನೆಯೊಳಗೆ ಗೂಬೆಗಳನು ಬಿಡುತ್ತಾರೆ. ಭಯಭೀತಗೊಂಡ ಮನೆಯ ಸದಸ್ಯರಿಗೆ ಈ ಗುಂಪಿನ ಜನರು ಕಾಣಿಸಿಕೊಳ್ಳುತ್ತಾರೆ. ನಿಮ್ಮ ಮನೆಗೆ ಗೂಬೆಯ ಪ್ರವೇಶವಾಗಿದೆ. ಇನ್ನು ಮೇಲೆ ನಿಮ್ಮ ಮನೆಯಲ್ಲಿ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಿಮಗೆ ಶಾಂತಿಯಿರುವುದಿಲ್ಲ. ಒಂದು ವೇಳೆ ನಾವು ಹೇಳಿದಂತೆ ಮಾಡದೆ ಹೋದರೆ, ನೀವು ಸರ್ವನಾಶವಾಗುತ್ತೀರಿ ಎಂದು ಹೆದರುವಂತೆ ಮಾಡುತ್ತಾರೆ. ನಿಮಗೆ ಒಳ್ಳೆಯದಾಗಬೇಕೆಂದರೆ.. ನಾವು ಹೇಳಿದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಬೇಕು ಎಂದು ಹೇಳುತ್ತಾರೆ. ಇನ್ನು ಆಸ್ತಿಕರು ಅವರ ಮಾತುಗಳನ್ನು ನಂಬಿ ಗಂಟು ಮೂಟೆ ಕಟ್ಟಿಕೊಂಡು, ಪರಿಹಾರಕ್ಕಾಗಿ ದೆವಾಲಯಗಳನ್ನು ಸುತ್ತಲು ಹೋಗುತ್ತಾರೆ. ನಂತರವೇ ನೋಡಿ ಅಸಲು ಅಟ ಪಾರಂಭವಾಗುವುದು.

ರಾತ್ರಿಯಾಗುವುದೇ ತಡ. ಯಾರೂ ಇಲ್ಲದ ಮನೆಗೆ ಲಗ್ಗೆ ಹಾಕಿ ಇದ್ದ ಬದ್ದದ್ದನ್ನೆಲ್ಲಾ ದೋಚಿ ಪರಾರಿಯಾಗುತ್ತಾರೆ. ಹೀಗೆ ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿರುವ ಗುಂಪಿನಲ್ಲಿದ್ದ ಐವರನ್ನು ಬೆಂಗಳೂರು ಕಾಟನ್ ಪೇಟೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಕಳ್ಳತನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಗೂಬೆಯನ್ನೂ ಸಹ ವಶಪಡಿಸಿಕೊಂಡಿದ್ದಾರೆ.ಗೂಬೆಯನ್ನು ಮನೆಯೊಳಗೆ ಬಿಟ್ಟ ಈ ತಂಡ …ನಂತರ ದೋಷಪರಿಹರಿಸಿಕೊಳ್ಳಲು ದೇವಾಲಯಗಳಿಗೆ ಹೊರಟಾಗ, ಮನೆಯನು ದೋಚಿದ ಈ ತಂಡದ ಕುರಿತು ಹಲವು ದೂರುಗಳು ಬಂದಾಗ ಪೊಲೀಸರು ಎಚ್ಚರಗೊಂಡು ಕ್ರಮ ಜರುಗಿಸಿದ್ದಾರೆ. ಜನರ ನಂಬಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುವ ಈ ತಂಡ ಹೇಳಿದಂತೆ ಪುಣ್ಯ ಕ್ಷೇತ್ರಗಳಿಗೆ ಹೋಗದಿದ್ದರೆ, ಮನೆಯವರಿಗೆ ತಿಳಿಯದಂತೆ ಮನೆಯೊಳಗೆ ಮೊಟ್ಟೆಗಳನ್ನು ಎಸೆಯುವುದು…ಕೆಂಪು ಬಣ್ಣದ ನಿರನ್ನು ಚೆಲ್ಲುವುದು ಮುಂತಾದ ಕೃತ್ಯಗಳಿಂದ ಭಯಭೀತರನ್ನಾಗಿಸುತ್ತಾರೆ. ಇಂತಹ ಘಟನೆಗಳು ಮರುಕಳಿಸುವುದರಿಂದ ಹೆದರಿದ ಜನರೇ ಇವರ ಗುರಿಯಾಗುತ್ತಾರೆ. ಇವರ ಯೋಜನೆಯ ಬಗ್ಗೆ ತಿಳಿಯದ ಜನರು ತಮ್ಮ ಮನೆಗಳನ್ನು ಮಾರಿಕೊಂಡದ್ದೂ ಇದೆ. ಆಗ ಇವರದ್ದೇ ಆದ ಮತ್ತೊಂದು ತಂಡ ಮಧ್ಯ ಪ್ರವೇಶಿಸಿ ಕಡಿಮೆ ಬೆಲೆಗೆ ಮನೆಗಳನ್ನು ಖರೀದಿಸಿ ಅಧಿಕ ಲಾಭಕ್ಕೆ ಮಾರುತ್ತಾರೆ. ಹೀಗೆ ಅತಿ ಬುದ್ಧಿವಂತರಾದ ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇಂತಹವರ ಬಗ್ಗೆ ಜಾಗ್ರತೆಯಿಂದಿರಲು ಪೊಲೀಸರು ಜನರನ್ನು ಎಚ್ಚರಿಸುತ್ತಿದ್ದಾರೆ