ಈ ದಿನಕ್ಕಾಗಿ…ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರಂತೆ! ಅಂತಹ ವಿಶೇಷವಾದ ದಿನ…ಈ ದಿನ!!

ಶ್ರಾವಣ ಮಾಸದ, ಅಮಾವಾಸ್ಯೆ ಸೋಮವಾರ, ಸೂರ್ಯ ಗ್ರಹಣ, ಈ ನಾಲ್ಕು ಒಂದೇ ದಿನ ಬರುವುದು ತುಂಬಾ ಅಪರೂಪಕ್ಕೆಂಬಂತೆ ನಡೆಯುತ್ತದೆ. ಈ ದಿನ ಶಿವನನ್ನು ಪೂಜಿಸುವುದು ಮತ್ತು ಶಿವನಿಗೆ ಅಭಿಷೇಕಗಳು ಮಾಡುವುದರಿಂದ ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳು, ತಪ್ಪುಗಳು ಎಲ್ಲವೂ ತೊಲಗಿ ಹೋಗುತ್ತವೆ. ಈ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯುತ್ತಾರೆ. ಈ ದಿನಕ್ಕಾಗಿ ಸಪ್ತ ಋಷಿಗಳು, ನವಗ್ರಹಗಳು, ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರೆ. ಈ ದಿನ ಶಿವನಿಗೆ ಅಭಿಷೇಕ ಮಾಡಿ ಉಪವಾಸವಿದ್ದರೆ ಪುಣ್ಯ ಬರುತ್ತದೆಂದು ಪಂಡಿತರು ಹೇಳುತ್ತಿದ್ದಾರೆ. ಈ ದಿನ ಅಭಿಷೇಕ ಯಾಕೆ ಮಾಡುತ್ತಾರೆಂದರೆ ,ಈ ದಿನ ಸಕಲ ಶಕ್ತಿಗಳು ಲಿಂಗ ರೂಪವಾದ ಶಿವನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಮಾಡಿದ ಪಾಪಗಳು ತೊಲಗಿ ಹೋಗುತ್ತದೆಂದು ಹೇಳುತ್ತಾರೆ.

ಸುಧೀರ್ಘ ಸೂರ್ಯಗ್ರಹಣ ಸಂಧರ್ಭದಲ್ಲಿ ಗ್ರಹ ಕೊಡುಗೆ ನೋಡಿಕೊಂಡರೆ ಸೂರ್ಯನು ಈ ಸಂಪೂರ್ಣ ಸೂರ್ಯ ಗ್ರಹಣದ ದಿನದಂದು ಸಿಂಹ ರಾಶಿಯೊಳಗೆ ಪ್ರವೇಶಿಸುತ್ತಾನೆ. 99 ವರ್ಷಗಳ ನಂತರ ಈ ರೀತಿಯ ಸೂರ್ಯ ಗ್ರಹಣ ಬರುತ್ತಿದೆ ಎಂದು ಪಂಡಿತರು ಹೇಳುತ್ತಿದ್ದಾರೆ. ಸಿಂಹ ರಾಶಿ ರಾಜ ರಾಶಿಯ ಅಧಿಕಾರವನ್ನು ,ಶಕ್ತಿಯನ್ನು ಇದು ತೋರಿಸುತ್ತದೆ. ಈ ರಾಶಿಯ ಆತ್ಮವಿಶ್ವಾಸ, ಪ್ರೀತಿ ಇದು ರಾಶಿ ಚಕ್ರದಲ್ಲಿ ಐದನೇ ಸ್ಥಾನವಾಗುತ್ತದೆ. ಮಂತ್ರಾಂಗ, ಕ್ರೀಡೆಗಳು, ವಿನೋದಗಳು, ಮುಂತಾದವು ಈ ಸ್ಥಾನದಲ್ಲಿ ಆಧೀನದಲ್ಲಿರುತ್ತದೆ. ಇನ್ನು ಸಿಂಹ ರಾಶಿಯಲ್ಲಿ ರಾಹುವು, ಚಂದ್ರನು, ಸೂರ್ಯನು, ಬುಧನು ಇರುವಿಕೆ. ವೃಶ್ಚಿಕದಿಂದ ಶನಿ ತನ್ನ ದ್ರಸ್ತಮ ದೃಷ್ಟಿಯಿಂದ ಇವುಗಳನ್ನು ನೋಡುತ್ತಿದ್ದಾನೆ. ಕರ್ಕಾಟಕದಲ್ಲಿ ಶುಕ್ರನು, ಗುಜನು ಇದ್ದಾನೆ. ಕನ್ಯಾದಲ್ಲಿ ಗುರುವು, ವೃಶ್ಚಿಕದಲ್ಲಿ ಶನಿಯು ಇದ್ದಾನೆ. ಕೇತುವು ಕುಂಭ ರಾಶಿಯಲ್ಲಿ ಇದ್ದಾನೆ. ಗ್ರಹಣದ ಸಮಯದಲ್ಲಿ ಈ ರಾಶಿ ಮೇಲೆ ಶನಿಯ ಹೆಚ್ಚಿನ ಪ್ರಭಾವ ಇದ್ದರೆ, ಶನಿ ಪರಿಣಾಮಗಳು ಹೆಚ್ಚಾಗಿ ನಡೆಯುವ ಅವಕಾಶಗಳು ಇದೆ. ಸೂರ್ಯನು ವೃಶ್ಚಿಕ ,ಕುಂಭ, ವೃಷಭ ರಾಶಿಗಳಲ್ಲಿ ಇದ್ದೂ, ಕೆಲವು ಕೆಡು ಪರಿಣಾಮಗಳು ಎದುರಾಗುತ್ತದೆ. ಗೋಚರ ಸೂರ್ಯನು, ಗೋಚರ ರಾಮನೊಂದಿಗೆ ಏರ್ಪಡುವ ಕೇಂದ್ರ ದೃಷ್ಟಿಯಿಂದ ಈ ಸಂಗತಿಗಳು ನಡೆಯುತ್ತದೆ. ಆದ್ದರಿಂದ ಸೂರ್ಯನು ವೃಶ್ಚಿಕ, ಕುಂಭ, ವೃಷಭ ರಾಶಿಗಳಲ್ಲಿ ಇರವುದರಿಂದ ಕೆಲವು ಕೆಡು ಪರಿಣಾಮಗಳು ನಡೆಯುತ್ತದೆ.

ಇನ್ನು ರಾಶಿಗಳ ಪ್ರಕಾರ ಗ್ರಹಣ ಫಲಿತಾಂಶ ಈ ರೀತಿ ಇದೆ.‌.
ಮೇಷ, ವೃಷಭ, ಕನ್ಯಾ, ಧನಸ್ಸು ಈ ರಾಶಿಯವರಿಗೆ ಶುಭ ಫಲಿತಾಂಶ ಕೊಡುತ್ತದೆ. ಹಾಗೆಯೇ ಮಿಥುನ, ಸಿಂಹ, ತುಲಾ, ಮಕರ, ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ಕೊಡುತ್ತದೆ. ಕರ್ಕಾಟಕ, ವೃಶ್ಚಿಕ, ಕುಂಭ,ಮೀನ ರಾಶಿಯವರಿಗೆ ಈ ಗ್ರಹಣ ಅನಿಷ್ಟ ಫಲಿತಾಂಶವನ್ನು ಕೊಡುತ್ತದೆ.


Click Here To Download Kannada AP2TG App From PlayStore!