ಅಂಬಾನಿ ಮಗನ ಮದುವೆ ಫಿಕ್ಸ್..? ವಧು ಯಾರ ಮಗಳು ಗೊತ್ತಾ.? ಆಕೆ ಕುರಿತ ಕುತೂಹಲ ಸಂಗತಿಗಳು.!

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಆರಂಭವಾಗಿದೆಯೇ.. ಮುಕೇಶ್ ಅಂಬಾನಿ ಮಗ ಆಕಾಶ್ ಶೀಘ್ರದಲ್ಲೇ ಮದುಮಗ ಆಗುತ್ತಿದ್ದಾನಾ.. ಹೌದು ಎನ್ನುತ್ತಿವೆ ಮೂಲಗಳು. ಈ ಹಿಂದೆ ಆಕಾಶ್ ಅಂಬಾನಿ ಮದುವೆ ಬಗ್ಗೆ ಸುದ್ದಿ ಇತ್ತು. ಮದುವೆ ಆಮಂತ್ರಣ ಪತ್ರಿಕೆ ಬೆಲೆ ಲಕ್ಷಗಳಲ್ಲಿರುತ್ತದೆ ಎಂಬ ಸುದ್ದಿ ಹರಿದಾಡಿತ್ತು.. ಆದರೆ ಅದೆಲ್ಲಾವೂ ವದಂತಿ ಎಂದು ಗೊತ್ತಾಯಿತು. ಆದರೆ ಈಗ ಆಕಾಶ್ ಮದುಮಗನಾಗುತ್ತಿದ್ದಾನೆ ಎಂಬ ಸುದ್ದಿ ಇದೆ. ಇಷ್ಟಕ್ಕೂ ಆಹಾರ್ ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ?

ವಧುವಿನ ಹೆಸರು ಶ್ಲೋಕಾ..
‘ರೋಜಿ ಬ್ಲೂ ಡೈಮಂಡ್’ ಮಾಲೀಕ ರಸ್ಸೆಲ್ ಮೆಹ್ತಾ ಕುಟುಂಬಕ್ಕೂ ಮುಕೇಶ್ ಅಂಬಾನಿ ಕುಟುಂಬಕ್ಕೂ ಒಳ್ಳೆಯ ಸ್ನೇಹ ಸಂಬಂಧ ಇದೆ. ಶ್ಲೋಕಾ ಮೆಹ್ತಾ, ಆಕಾಶ್ ಅಂಬಾನಿ ಇಬ್ಬರೂ ಪರಿಚಿತರು ಎಂದಿವೆ ಮೂಲಗಳು. ಧೀರೂಬಾಯಿ ಅಂಬಾನಿ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಇವರಿಬ್ಬರೂ ಒಟ್ಟಿಗೆ ಓದಿಕೊಂಡಿದ್ದಾರೆ. 2009ರಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದ ಶ್ಲೋಕಾ ಮೆಹ್ತಾ ಬಳಿಕ ಪ್ರಿನ್ಸ್‌ಟನ್ ಯೂನಿವರ್ಸಿಟಿಯಲ್ಲಿ ಮಾನವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್‌ನಿಂದ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ರೋಜಿ ಬ್ಲೂ ಫೌಂಡೇಷನ್‌ನಲ್ಲಿ 2014 ಜುಲೈನಿಂದ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಸರಕಾರೇತರ ಸಂಸ್ಥೆಗಳಿಗೆ ಬೇಕಾಗುವ ಸ್ವಯಂಸೇವಕರನ್ನು ಹೊಂದಿಸುವ ‘ಕನೆಕ್ಟ್‌ಫರ್’ ಎಂಬ ಸಂಸ್ಥೆಯ ಸಹ ವ್ಯವಸ್ಥಾಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಇಷ್ಟಕ್ಕೂ ಶ್ಲೋಕಾ ಯಾರು, ಮದುವೆ ಯಾವಾಗ?
ರಸ್ಸೆಲ್ ಮೆಹ್ತಾ ಮುಖ್ಯಸ್ಥರಾಗಿರುವ ’ರೋಜಿ ಬ್ಲೂ’ ವಿಶ್ವದ ಅತಿದೊಡ್ಡ ವಜ್ರಾಭರಣಗಳ ಕಂಪೆನಿ. ಬೆಲ್ಜಿಯಂ ಕೇಂದ್ರವಾಗಿ ನಡೆಯುತ್ತಿರುವ ರೋಜಿ ಸ್ಲೂ… 50 ವರ್ಷಗಳ ಹಿಂದೆ ಬಿ .ಅರುಣ್ ಕುಮಾರ್ ಹೆಸರಿನಲ್ಲಿ ವ್ಯಾಪಾರ ಆರಂಭಿಸ್ತಿಉ. 1973ರಲ್ಲಿ ದಿಲೀಪ್ ಮೊಹ್ತಾ ನೇತೃತ್ವದಲ್ಲಿ ಜಗತ್ತಿನಾದ್ಯಂತ ವ್ಯಾಪಾರವನ್ನು ವಿಸ್ತರಿಸಲು ಮುಂದಡಿ ಇಟ್ಟಿತು. ರೋಜಿ ಬ್ಲೂಗೆ ಒರಾ ಹೆಸರಿನಲ್ಲಿ ನಮ್ಮ ದೇಶದಲ್ಲಿ ಸುಮಾರು 30 ಮಳಿಗೆಗಳಿವೆ. ರಸ್ಸೆಲ್, ಮೋನಾ ಮೊಹ್ತಾ ಮೂವರು ಮಕ್ಕಳಲ್ಲಿ ಕೊನೆಯವರು ಶ್ಲೋಕಾ ಮೆಹ್ತಾ.

ಇವರಿಬ್ಬರ ನಿಶ್ಚಿತಾರ್ಥ ಕೆಲ ವಾರಗಳಲ್ಲೇ ಪ್ರಕಟವಾಗಲಿದೆಯಂತೆ. ಇದೇ ವರ್ಷದ ಡಿಸೆಂಬರ್ ಆರಂಭದಲ್ಲಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿವೆ ಎಂದಿವೆ ಮೂಲಗಳು. ಆದರೆ ಈ ಮದುವೆ ಬಗ್ಗೆ ಎರಡೂ ಕುಟುಂಬಿಕರು ಪ್ರತಿಕ್ರಿಯಿಸಲು ನಿರಾಕರಿಸಿವೆ. ನಿಶ್ಚಿತಾರ್ಥ, ಮದುವೆಗೆ ಸಂಬಂಧಿಸಿದಂತೆ ದಿನಾಂಕಗಳು ಯಾವುದೂ ಇನ್ನೂ ಪಕ್ಕಾ ಆಗಿಲ್ಲ ಎಂದು ಅಂಬಾನಿ ಕುಟುಂಬದ ಆತ್ಮೀಯ ಮೂಲಗಳು ತಿಳಿಸಿವೆ. ‘ಆಕಾಶ್ ಅಂಬಾನಿ ಮದುವೆಗೆ ಸಂಬಂಧಿಸಿದಂತೆ ಶುಭಸುದ್ದಿಯನ್ನು ಸೂಕ್ತ ಸಮಯದಲ್ಲಿ ಮುಕೇಶ್ ಅಂಬಾನಿ ಕುಟುಂಬ ಸ್ವತಃ ಎಲ್ಲರೊಂದಿಗೆ ಹಂಚಿಕೊಳ್ಳಲಿದೆ. ಮದುವೆ ನಿಶ್ಚಯವಾದರೆ ಖಂಡಿತವಾಗಿ ಭಾರತದಲ್ಲೇ ನಡೆಯುತ್ತದೆ’ ಎಂದಿವೆ ಮೂಲಗಳು. ಇದೇ ತಿಂಗಳು 24ರಂದು ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯನ್ನು ತಳ್ಳಿಹಾಕಿದ್ದಾರೆ.


Click Here To Download Kannada AP2TG App From PlayStore!