ಕಾಡಿನಲ್ಲಿ ಆಂಬುಲೆನ್ಸ್… ಅಜಯ್ C/o ಚತ್ತೀಸ್ ಗಡ್ ಕಾಡುಗಳು..!

ಅದು ಚತ್ತೀಸ್ ಗಡದಲ್ಲಿನ ಏಜೆನ್ಸಿ.. ಅಲ್ಲಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಬರುತ್ತಿದೆ… ಅಷ್ಟರಲ್ಲೇ ಯಾರೋ ಆಂಬುಲೆನ್ಸ್ ಅಜಯ್‌ಗೆ ಕರೆ ಮಾಡಿದರು… ಕರೆ ಮಾಡಿದ ನಿಮಿಷಗಳಲ್ಲೇ ಕುಯ್ ಕುಯ್ ಎಂದು ತನ್ನ ಮೋಟಾರ್ ಸೈಕಿಲ್ ಆಂಬುಲೆನ್ಸನೊಂದಿಗೆ ಅಲ್ಲಿಗೆ ಹಾಜರಾದ ಅಜಯ್..! ಆ ಗರ್ಭಿಣಿ ಮಹಿಳೆಯನ್ನು ತನ್ನ ಆಂಬುಲೆನ್ಸ್‌ನಲ್ಲಿ ಹತ್ತಿಸಿಕೊಂಡು… ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಆ ಮಹಿಳೆಗೆ ಆರೋಗ್ಯವಂತ ಮಗು ಜನಿಸಿತು..! ಆ ಮಗುವನ್ನು ನೋಡಿ ಸಿಕ್ಕಾಪಟ್ಟೆ ಖುಷಿಯಾದ ಆಂಬುಲೆನ್ಸ್ ಅಜಯ್..!

ಈ ರೀತಿ ಏಜೆನ್ಸಿ ಪ್ರದೇಶದಲ್ಲಿ ಯಾವುದೇ ಮಹಿಳೆ ಹೆರಿಗೆ ನೋವಿನಿಂದ ನರಳಿದರೆ ಮೊದಲ ಕರೆ ಹೋಗುವುದು ಇವರಿಗೆ… ಓರ್ವ ಅಣ್ಣನಾಗಿ ಆ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸುವುದು ಅವರೇ… ಈ ರೀತಿ ಈಗಾಗಲೆ 200 ಮಂದಿ ಗರ್ಭಿಣಿಯರನ್ನು ಅವರವರ ಮನೆಯಿಂದ ಆಸ್ಪತ್ರೆಗೆ ಸೇರಿಸಿ ಅವರ ಪ್ರಾಣವನ್ನು ಕಾಪಾಡಿದ್ದಾನೆ.

ಮೋಟಾರ್ ಸೈಕಲ್ ಆಂಬುಲೆನ್ಸ್ ಅಗತ್ಯ ಏನು?
ಚತ್ತೀಸ್ ಗಡದಲ್ಲಿನ ಬಹಳಷ್ಟು ಏಜೆನ್ಸಿ ಪ್ರದೇಶಗಳು ಬೆಟ್ಟಗಳ ನಡುವೆ ಇರುತ್ತವೆ. ಸರಿಯಾದ ರಸ್ತೆ ವ್ಯವಸ್ಥೆ ಇರಲ್ಲ. ಅಲ್ಲಿಗೆ ತಲುಪಬೇಕು ಎಂದರೆ ಬೈಕ್‍ಗಳಿಂದ ಮಾತ್ರ ಸಾಧ್ಯ. ಹಾಗಾಗಿ ತಮ್ಮ ಪ್ರದೇಶದ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಲು ಅಜಯ್ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ತನ್ನ ಮೋಟಾರ್ ಸೈಕಲನ್ನು ಸ್ವಲ್ಪ ಡಿಫರೆಂಟ್ ಆಗಿ ಮಾಡಿಫಿಕೇಷನ್ ಮಾಡಿದ.

ಅತ್ಯಂತ ನೋವಿನ ಸಂಗತಿ.
ಒಂದು ದಿನ… ನಾರಾಯಣ ಪೂರ್‌ನಿಂದ ಫೋನ್ ಬಂತು. ಬಹಳ ವೇಗವಾಗಿ ಅಲ್ಲಿಗೆ ಹೋದೆ… ಅಲ್ಲಿ ನೋವಿನಿಂದ ನರಳುತ್ತಿರುವ ಓರ್ವ ಮಹಿಳೆಯನ್ನು ನನ್ನ ಆಂಬುಲೆನ್ಸ್‌ನಲ್ಲಿ ಹತ್ತಿಸಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ… ಹೊಟ್ಟೆಯಲ್ಲಿನ ಮಗು ಅಡ್ಡ ತಿರುಗಿ ಮಾರ್ಗ ಮಧ್ಯೆಯೇ ಮೃತಪಟ್ಟಿತು. ಆಗ ತುಂಬಾ ನೋವಾಯಿತು.

ಸಂತೋಷಕರ ಸಂದರ್ಭ
ಹೆರಿಗೆ ಬಳಿಕ… ಮಹಿಳೆಯರು ಪ್ರೀತಿಯಿಂದ ಥ್ಯಾಂಕ್ಸ್ ಅಣ್ಣಾ ಎನ್ನುತ್ತಿದ್ದರೆ…. ಆಗಷ್ಟೇ ಹುಟ್ಟಿದ ಮಗುವಿನ ಮುಖ ನೋಡುತ್ತಿದ್ದರೆ… ಯಾವ ಏಜೆನ್ಸಿಗೆ ಹೋದರೂ ಅಲ್ಲಿನ ಜನ ನನ್ನನ್ನು ಅವರ ಮನೆಯವರಂತೆ ನೋಡುತ್ತಿದ್ದರೆ ಈ ಜನ್ಮಕ್ಕೆ ಇಷ್ಟು ಸಾಕು ಎಂಬಷ್ಟು ಸಂತೋಷವಾಗುತ್ತದೆ.


Click Here To Download Kannada AP2TG App From PlayStore!

Share this post

scroll to top