ಅಮೆರಿಕದ ಚಿಂದಿ ಕಾಗದ, ಭಾರತದ ಬಂಗಾರಕ್ಕೆ ಸಮಾನವೇ…. ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಸತ್ಯ.

ರೂಪಾಯಿಯ ಬೆಲೆ ಕಡಿಮೆಯಾಗುತ್ತಿದೆ ಎಂದು ಬೊಬ್ಬಿಡುತ್ತಿರುವ ಜನರಿಗೊಂದು ಸಲಹೆ. ಇಡೀ ದೇಶ ಏಳು ದಿನಗಳ ಕಾಲ ಕಾರುಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿ ನೋಡಿ. ಡಾಲರ್ ಬೆಲೆ ತನ್ನಷ್ಟಕ್ಕೆ ತಾನೆ ಕೆಳಗಿಳಿಯುತ್ತೆ. ಇದು ಸತ್ಯ. ಯಾಕೆಂದರೆ,ಡಾಲರ್ಗೆ ಆ ಬೆಲೆಯನ್ನು ನೀಡುವುದೇ ಪೆಟ್ರೋಲ್ ಬೆಲೆಗಳು ಮಾತ್ರ. ಇದನ್ನೇ ಉತ್ಪನ್ನ ವ್ಯಾಪಾರ (ಡೆರಿವೇಟೀವ್ ಟ್ರೇಡಿಂಗ್) ಎನ್ನುವುದು.

ಅಮೆರಿಕದಲ್ಲಿ ಬಂಗಾರದಿಂದ ಡಾಲರ್ ಬೆಲೆ ನಿಗದಿಪಡಿಸುವುದನ್ನು ನಿಲ್ಲಿಸಿ 70 ವರ್ಷಗಳು ಕಳೆದಿವೆ. ಬಂಗಾರದ ಹಾಗೆ ಪೆಟ್ರೋಲ್ಗೂ ಬೆಲೆಯಿದೆಯಂದು ಅವರಿಗೆ ಗೊತ್ತಾಗಿ ಮಧ್ಯ ಪ್ರಾಚ್ಯ ದೇಳಗಳೊಂದಿಗೆ ಅವರ ಪೆಟ್ರೋಲನ್ನು ಅಮೆರಿಕನ್ ಡಾಲರ್ಗಳ್ಲಲಿ ಮಾರಲು ಒಪ್ಪಂದ ಮಾಡಿಕೊಳ್ಳುತ್ತಾರೆ. ಆದುದರಿಂದಲೆ ಅಮೆರಿಕನ್ ಡಾಲರ್ಗಳನ್ನು ಸಾಲಕ್ಕೆ (Debts legal tender) ಎಂದು ಮುದ್ರಿಸಿರುತ್ತಾರೆ. ಅಂದರೆ ಒಂದುವೇಳೆ ನಿಮಗೆ ಡಾಲರ್ ಇಷ್ಟವಾಗದಿದ್ದಲ್ಲಿ ಅವರ ಸರಕಾರ ಬಳಿ ತೆರಳಿ ನಮಗೆ ನಿಮ್ಮ ಡಾಲರ್ ಇಷ್ಟವಿಲ್ಲ ಅದರ ಬದಲಿಗೆ ಬಂಗಾರ ಕೊಡಿ ಎಂದರೆ ಅವರು ಕೊಡುವುದಿಲ್ಲ. ಅದೇ ನಮ್ಮ ಭಾರತದೇಶದ ಕರೆನ್ಸಿ ನೋಡಿ.I promise to pay the bearerಎಂದು ಸ್ಪಷ್ಟವಾಗಿ,ಗವರ್ನರ್ ಸಹಿಯೊಂದಿಗೆ ಇರುತ್ತದೆ. ಅಂದರೆ,ನಿಮಗೆ ರೂಪಾಯಿಗಳು ಇಷ್ಟವಿಲ್ಲದಿದ್ದರೆ,ಅದರ ಬೆಲೆಗೆ ತಕ್ಕ ಬಂಗಾರವನ್ನು ರಿಸರ್ವ್ ಬ್ಯಾಂಕ್ ನಿಮಗೆ ಕೊಡುತ್ತದೆ.

(ವಾಸ್ತವದಲ್ಲಿ ಕೊಡು ಕೊಳ್ಳುವ ಷರತ್ತುಗಳಲ್ಲಿ ವ್ಯತ್ಯಾಸ ವಿರಬಹುದು. ಸ್ಥೂಲವಾಗಿ ವಿಷಯ ಅರ್ಥವಾಗುವ ಹಾಗೆ ವಿವರಿಸುತ್ತೇನೆ) ಒಂದು ಉದಾಹರಣೆಯನ್ನು ನೋಡೋಣ.ಭಾರತದ ಇಂದನ ಶಾಖೆಯ ಮಂತ್ರಿ.ಪೆಟ್ರೋಲ್ ಖರೀದಿಸಲು ಮಧ್ಯ ಪ್ರಾಚ್ಯ ದೇಶದ ಅಂಗಡಿಗೆ ಹೋಗಿದ್ದಾರೆಂದುಕೊಳ್ಳಿ. ಆ ಅಂಗಡಿಯವರು ಒಂದು ಲೀಟರ್ ಪೆಟ್ರೋಲ್ ಬೆಲೆ ಒಂದು ಡಾಲರ್ ಎಂದು ಹೇಳುತ್ತಾರೆ…. ನಮ್ಮಲ್ಲಿ ಡಾಲರ್ ಇಲ್ಲದ ಕಾರಣ ಅಮೇರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ನವರು ತಮ್ಮ ಬಳಿಯಿರುವ ಒಂದು ಬಿಳಿ ಕಾಗದದ ಮೇಲೆ ಡಾಲರ್ ಮುದ್ರಿಸಿಕೊಡುತ್ತಾರೆ. ಅದನ್ನು ಕೊಟ್ಟು ನಾವು ಪೆಟ್ರೋಲ್ ಖರೀದಿಸುತ್ತೇವೆ!. ಆದರೆ ಇದರಲ್ಲಿ ಒಂದು ಮೋಸವಿದೆ. ಒಂದು ವೇಳೆ ನಾವು ನಮ್ಮ ಮನಸ್ಸು ಬದಲಾಯಿಸಿಕೊಂಡು, ನಿಮ್ಮ ಡಾಲರ್ ಬದಲು ಬಂಗಾರ ಕೊಡಿ ಎಂದು ಕೇಳಲಾಗುವುದಿಲ್ಲ.ಏಕೆಂದರೆ ಡಾಲರ್ ಬದಲು ನಾವು ಬೇರೆ ಏನನ್ನಾದರೂ ಕೊಡುತ್ತೇವೆಂದು ಹೇಳಿದ್ದೇವೆಯೇ ಎನ್ನುತ್ತಾರೆ. ಬೇಕಾದರೆ ಸರಿಯಾಗಿ ಮತ್ತೊಮ್ಮೆ ಪರಿಶೀಲಿಸಿ ನೋಡಿ ಇದು ಸಾಲ ದ… ಎಂದು ಮುದ್ರಿಸಿದ್ದೇವೆ ಎನ್ನುತ್ತಾರೆ.ಅಂದರೆ ಅಮೆರಿಕ ಡಾಲರ್ಗಳನ್ನು ಮುದ್ರಿಸಲು ಅಷ್ಟೇ ಬೆಲೆಯ ಬಂಗಾರವನ್ನು ತೆಗೆದಿರಿಸಬೇಕೆನ್ನುವ ನಿಯಮವಿಲ್ಲ.

ಆದುದರಿಂದ ಅವರು ತಮ್ಮಲ್ಲಿರುವ ಬಿಳಿ ಕಾಗದದ ಮೇಲೆ ತಮಗಿಷ್ಟ ಬಂದಷ್ಟು ಡಾಲರ್ಗಳನ್ನು ಮುದ್ರಿಸುತ್ತಾರೆ. ಆದರೆ ಅಮೆರಿಕ ಮಧ್ಯಪ್ರಾಚ್ಯ ದೇಶಗಳಿಗೆ ಏನನ್ನು ಕೊಡುತ್ತದೆ? ಅಂದರೆ ಅಲ್ಲಿರುವ ರಾಜರನ್ನು ಕಾಪಾಡಿದ್ದಕ್ಕಾಗಿ ಅಮೆರಿಕಾ ಸೈನ್ಯಕ್ಕೆ ಅಲ್ಲಿಯ ರಾಜರು ಬಾಡಿಗೆ ಕೊಡುತ್ತಾರೆ. ಈ ರೀತಿ ಆ ದೇಶಗಳಲ್ಲಿ ರಸ್ತೆ, ಭವನಗಳನ್ನು ಅಮೆರಿಕ ನಿರ್ಮಿಸಿಕೊಟ್ಟಿದ್ದು ಆ ಸಾಲವನ್ನು ಅವರಿನ್ನೂ ತೀರಿಸುತ್ತಿದ್ದಾರೆ. ಇದೇ ಅಮೆರಿಕನ್ ಡಾಲರ್ ಬೆಲೆ. ಆದುದರಿಂದಲೇ ಎಂದಾದರೊಂದು ದಿನ ಅಮೆರಿಕನ್ ಡಾಲರ್ ಪತನವಾಗುತ್ತದೆಂದು ಎಲ್ಲರೂ ಹೇಳುತ್ತಿರುತ್ತಾರೆ.

ಭಾರತಕ್ಕೆ ಬಂದಿರುವ ಕಷ್ಟವೆಂದರೆ ಅಮೆರಿಕ ದೇಶದ ಡಾಲರ್ ಗಳನ್ನು ಕೊಂಡುಕೊಳ್ಳುವಲ್ಲಿದೆ . ಅಮೆರಿಕದವರ ಚಿಂದಿ ಕಾಗದ ಭಾರತದ ಬಂಗಾರಕ್ಕೆ ಸಮಾನವೆಂದಂತಾಯ್ತು!. ದೇಶದಲ್ಲಿ ಕಾರುಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಡಾಲರ್ ಬೆಲೆ ತನ್ನಿಂದ ತಾನೆ ಕೆಳಗಿಳಿಯುತ್ತೆ.ಅರ್ಥವಾಯಿತೇ?


Click Here To Download Kannada AP2TG App From PlayStore!

Share this post

scroll to top