ಸಾಫ್ಟ್ ವೇರ್ ಉದ್ಯೋಗ ಮಾಡುತ್ತಿದ್ದ ಹುಡುಗಿಯ ಜೀವನದಲ್ಲಿ ಊಹಿಸಲಾರದ ಸಂಘಟನೆ..!

ಆಕೆಯ ಹೆಸರು ಹಿಮ, ಓರ್ವ ಸಾಫ್ಟ್ ವೇರ್ ಇಂಜಿನಿಯರ್, ಒಂದೂವರೆ ಲಕ್ಷಕ್ಕೂ ಮೀರಿದ ತಿಂಗಳ ವೇತನ. ಸ್ವಂತ ರಾಜ್ಯ ಕೇರಳ. ಆದರೂ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿರುತ್ತಾಳೆ. ಒಂದು ಸಲ ರಜೆಗಳಲ್ಲಿ ಅಮೆರಿಕಾಗೆ ಹೋದಳು. ಅಲ್ಲಿ ಭಾರತದ ಪ್ರಜ್ವಲ್ ಎನ್ನುವ ವ್ಯಕ್ತಿಯೊಂದಿಗೆ ಪರಿಚಯವಾಯಿತು…ಅದು ಪ್ರೀತಿಯಾಗಿ ಮಾರ್ಪಟ್ಟಿತು. ಸ್ವಲ್ಪ ದಿನದ ನಂತರ ಮದುವೆ ಆಗುವ ನಿರ್ಧಾರ ತೆಗೆದುಕೊಂಡರು. ಒಂದು ದಿನ ಆಫೀಸಿನಿಂದ ಮನೆಗೆ ತೆರಳಿದ ಹಿಮ ಸ್ನೇಹಿತರೊಂದಿಗೆ ಎ.ಸಿ. ಬಸ್ಸಿನಲ್ಲಿ ಕುಳಿತ್ತಿದ್ದಳು. ಅಷ್ಟರಲ್ಲಿ ಆಕೆ ಇಳಿಯುವ ಸ್ಟಾಪ್ ಬಂದಾಗ…ಇಳಿಯಲೆಂದು ಬಾಗಿಲಿನ ಹತ್ತಿರ ಬಂದಳು. ಆ ಸ್ಟಾಪ್ ನಲ್ಲಿ ಹೆಚ್ಚು ಜನರು ಇಳಿಯುವವರು ಇದ್ದುದರಿಂದ ಅವರು ಇಳಿದ ನಂತರ ಇಳಿಯೋಣವೆಂದು ಸಾಲಿನ ಕೊನೆಯಲ್ಲಿದ್ದ ಹಿಮ ಕಾಯುತ್ತಿದ್ದಳು…ಎಲ್ಲರೂ ಇಳಿದರು ಎಂದಕೊಂಡ ಬಸ್ ಚಾಲಕ ಆಟೋಮೇಟಿಕ್ ಡೋರ್ ಅನ್ನು ಮುಚ್ಚಿ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ.

Hemas-My-Story-750x500

ಅದೇ ಸಮಯದಲ್ಲಿ ಬಸ್ ನಿಂದ ಕೆಳಕ್ಕಿಳಿಯುತ್ತಿದ್ದ ಹಿಮ ಉಡುಪು ಬಸ್ ಬಾಗಿಲಿಗೆ ಸಿಕ್ಕಿಕೊಂಡು ಕೆಳಗೆ ಬಿದ್ದಳು. ಕ್ಷಣಕಾಲದಲ್ಲಿ ಬಸ್ಸಿನ ಹಿಂಬದಿಯ ಚಕ್ರ ಆಕೆಯ ಎಡ ಮೊಣಕಾಲಿನ ಮೇಲೆ ಹಾದುಹೋಯಿತು. ಕಟಕ್…ಎನ್ನುವ ಶಬ್ದ. ರಕ್ತ ಚಿಮ್ಮಿ ಹರಿಯಿತು. ಹಿಮ ಪ್ರಜ್ಞೆ ತಪ್ಪುತ್ತಿದ್ದಳು. ಅಲ್ಲಿ ಗುಂಪು ಗೂಡಿದವರ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿತ್ತು. ಅಲ್ಲೇ ಇದ್ದ ಕೆಲವರು ಹಿಮಳನ್ನು ಆಸ್ಪತ್ರೆಗೆ ಸೇರಿಸಿ ಆಕೆಯ ತಂದೆತಾಯಿಯರಿಗೆ ಸಮಾಚಾರವನ್ನು ತಿಳಿಸಿದರು.

ಆಪರೇಷನ್ ಮಾಡಲೆಂದು ಮತ್ತಿನ ಔಷಧಿ ನೀಡಿದರು. ಹಿಮ ಪ್ರಜ್ಞೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ ಕಣ್ಣ ಮುಂದೆ ತಮ್ಮ, ತಮ್ಮನ ಪಕ್ಕದಲ್ಲಿಯೇ ತಂದೆತಾಯಿಯರು ಅಳುತ್ತಾ ಕಾಣಿಸಿದರು. ನೋವಾಗುತ್ತಿದ್ದ ಕಾಲನ್ನು ನೊಡುವಷ್ಟರಲ್ಲಿ ಅರ್ಧ ಕಾಲು ಮುರಿದಿತ್ತು. ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿದ್ದರು. ಅಳುತ್ತಿದ್ದ ಅಮ್ಮನನ್ನು ಕಂಡು ಕಾಲು ಹೋದರೆ ಹೋಯಿತು ನಾನು ಬದುಕಿದ್ದೇನಲ್ಲವೇ ಎಂದು ಅವರಿಗೆ ಧೈರ್ಯ ತುಂಬಿದಳು. ಈ ವಿಷಯ ತಿಳಿದ ಹಿಮ ಬಾಯ್ ಫ್ರೆಂಡ್ …. ಭಾರತಕ್ಕೆ ಬಂದನು. ನೇರವಾಗಿ ಆಸ್ಪತ್ರೆಗೆ ತಲುಪಿದನು. ಹಿಮ ಮನಸ್ಸಿನಲ್ಲಿ ಸಂಶಯ… ಈ ಪರಿಸ್ಥಿತಿಯಲ್ಲಿರುವ ತನ್ನ ನೋಡಿ ಪ್ರಜ್ವಲ್ ಮದುವೆ ಬೇಡ ಎಂದುಕೊಳ್ಳುತ್ತಾನೆ….ಈ ಪರಿಸ್ಥಿತಿಯಲ್ಲಿ ನಾನು ಕೂಡಾ ಒತ್ತಾಯ ಮಾಡಬಾರದು ಎಂದುಕೊಂಡಳು.

ಆದರೂ ಈ ಸಂಶಯಗಳನ್ನು ತಳ್ಳಿಹಾಕಿ ಹಿಮಳನ್ನು ನೋಡಲು ಬಂದ ಪ್ರಜ್ವಲ್….ಎಲ್ಲರ ಮುಂದೆ ಆಸ್ಪತ್ರೆಯಲ್ಲಿ ಹಿಮಳನ್ನು ಮದುವೆಯಾಗುತ್ತೇನೆಂದು ಒಪ್ಪಿಗೆ ನೀಡಿದನು. ಆಡಿದ ಮಾತಿನಂತೆ ಹಿಮ ಚೇತರಿಸಿಕೊಂಡ ನಂತರ ಮದುವೆಯಾದನು. ಮದುವೆಯಾದ ಒಂದೂವರೆ ವರ್ಷದಲ್ಲಿ ಹಿಮ ಗರ್ಭವತಿ ಆದಳು. ಒಂದು ಕಾಲಿಲ್ಲ…ಅದರಲ್ಲೂ ಗರ್ಭವತಿ. ಹುಟ್ಟುವ ಮಗುವಿನ ಮೇಲೆ ಎಂತಹ ಪರಿಣಾಮ ಬೀರುತ್ತದೆಯೋ ಎಂದು ಆತಂಕ….ಅವಳಿಗೆ ಅಚ್ಚುಕಟ್ಟಾದ, ಆರೋಗ್ಯವಂತನಾದ ಮಗು ಜನಿಸಿತು. ಆ ಮಗು ಜನಿಸಿದ 20 ತಿಂಗಳಿಗೆ ಜನಗಣಮನ ಅಧಿನಾಯಕ ಜಯಹೇ ಎಂದು ರಾಷ್ಟ್ರಗೀತೆಯನ್ನು ಕಂಠಪಾಟವಾಗಿ ಆಡುವಷ್ಟು ಚುರುಕಾಗಿದ್ದನು.
ಪುನಃ ಹಿಮ ಉದ್ಯೋಗಕ್ಕೆ ಹಾಜರಾದಳು. ಅವರ ಕುಟುಂಬವೂ ಸಂತೋಷವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರಜ್ವಲ್ ಹಿಮಳಿಗೆ ಎಲ್ಲಾ ವಿಧದಲ್ಲೂ ಸಹಾಯವಾಗಿದ್ದು…ರಿಯಲ್ ಹೀರೋ ಅನಿಸಿಕೊಂಡಿದ್ದಾನೆ.


Click Here To Download Kannada AP2TG App From PlayStore!