ಅನ್ನವನ್ನು ಹೀಗೆ ಬೇಯಿಸಿ ತಿಂದರೆ ಶರೀರದಲ್ಲಿ ಕೊಬ್ಬು ಸೇರುವುದಿಲ್ವಂತೆ… ಅಷ್ಟೇ ಅಲ್ಲದೇ ಕೊಬ್ಬಿನಾಂಶವೂ ಕರಗುತ್ತಂತೆ..!

ನಮ್ಮ ದೇಶದಲ್ಲಿಯೇ ಅಲ್ಲ, ಪ್ರಪಂದಾದ್ಯಂತ ಇರುವ ಕೆಲ ದೇಶಗಳಲ್ಲಿ ಅನ್ನ ಪ್ರಧಾನ ಆಹಾರ. ದಕ್ಷಿಣ ಭಾರತದಲ್ಲಿ ಇದು ಮುಖ್ಯ ಆಹಾರವಾಗಿದೆ‌. ಸುಲಭವಾಗಿ ಸಿಗುವ ಅಕ್ಕಿ, ಯಾವುದೇ ಸಾಂಬಾರು ಆದರೂ ಸೇರಿಸಿ ತಿನ್ನುವಂತಹ ಸೌಲಭ್ಯ ಇರುವುದರಿಂದ ನಮ್ಮವರು ಅನ್ನವನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ನಿತ್ಯ ದೈಹಿಕಶ್ರಮ ಪಡುವವರು ಅನ್ನವನ್ನು ಎಷ್ಟು ತಿಂದರೂ ಅವರಿಗೆ ಅನಾರೋಗ್ಯಗಳು ಬರುವುದಿಲ್ಲ. ಆದರೆ ದೈಹಿಕಶ್ರಮವಿಲ್ಲದೆ ನಿತ್ಯವೂ ಒಂದೇ ಹತ್ತಿರ ಕೂತು ಕೆಲಸಮಾಡುವವರಿಗೆ ಅನ್ನವು ತಂದೊಡುವ ತೊಂದರೆಗಳು ಹೇಳತೀರದು. ಶರೀರದಲ್ಲಿ ಶಕ್ತಿ ಹೆಚ್ಚಾಗಿ ಖರ್ಚಾಗುವುದಿಲ್ಲ ಕ್ಯಾಲರಿಗಳು ಬೆಳೆದು ತೂಕ ಹೆಚ್ಚಾಗುವುದು, ಹೃದಯ ರೋಗಗಳು, ಷುಗರ್ ನಂತಹ ಅನಾರೋಗ್ಯಗಳು ಬರುತ್ತವೆ. ಹೀಗೆ ಹೇಳುತ್ತಾ ಹೋದರೆ ಆ ಲಿಸ್ಟ್ ಇನ್ನೂ ಬೆಳೆಯುತ್ತಲ್ಲೆ ಹೋಗುತ್ತದೆ. ಇದಕ್ಕೆ ಪ್ರಮುಖ ಕಾರಣ ನಾವು ತಿನ್ನುವ ಅನ್ನ‌. ಚೆನ್ನಾಗಿ ಪಾಲೀಷ್ ‍ಮಾಡಿರುವ, ಮಲ್ಲಿಗೆ ಹೂವಿನ ಬಣ್ಣಕ್ಕೆ ಬಂದಿರುವ ಅನ್ನವೆಂದರೆ ನಮಗೆ ತುಂಬಾ ಇಷ್ಟ. ಅದನ್ನೇ ಹೆಚ್ಚಾಗಿ ಬಳಸುತ್ತೇವೆ. ಅನಾರೋಗ್ಯವನ್ನು ತಂದುಕೊಳ್ಳುತ್ತಿದ್ದೇವೆ. ಆದರೆ ಅನ್ನವನ್ನು ಒಂದು ಪ್ರತ್ಯೇಕವಾದ ವಿಧಾನದಲ್ಲಿ ಬೇಯಿಸಿ ತಿಂದರೆ ಅದರಿಂದ ನಮ್ಮ ಶರೀರದೊಳಗೆ ಕ್ಯಾಲರಿಗಳು ಸೇರುವುದಿಲ್ಲ, ಕೊಬ್ಬು ಸಹ ಬರುವುದಿಲ್ಲ. ಅಷ್ಟೇಅಲ್ಲ ಇಲ್ಲಿಯವರೆಗೆ ಶರೀರದಲ್ಲಿ ಸೇರಿದ ಕೊಬ್ಬನ್ನು ಕರಗಿಸುತ್ತದೆಯಂತೆ. ಅಂತಹ ಅದ್ಭುತವಾದ ಫಲಿತಾಂಶಗಳು ನೀಡುವ ಆ ಪವರ್‍ಪುಲ್ ಟಿಪ್ಸ್ ಏನೆಂಬುದನ್ನು ಈಗ ತಿಳಿಯೋಣ…

  1.  ಸಾಮಾನ್ಯವಾಗಿ ಎಲ್ಲರೂ ಅನ್ನವನ್ನು ಅನೇಕ ವಿಧದಲ್ಲಿ ಬೇಯಿಸುತ್ತಾರೆ. ಕೆಲವರು ಎಲೆಕ್ಟ್ರಿಕ್ ಕುಕ್ಕರ್’ನಲ್ಲಿ ಬೇಯಿಸಿದರೆ, ಇನ್ನೂ ಕೆಲವರು ಗ್ಯಾಸ್ ಸ್ಟೌವ್‍ ಮೇಲೆ ಗಂಜಿ ಬಸಿದು ಕೊಳ್ಳುತ್ತಾರೆ, ಇದಲ್ಲದೆ ಅದನ್ನು ಹಾಗೇ ಇಂಗಿಸಿತ್ತಾರೆ. ಆದರೆ ಅನ್ನವನ್ನು ಹೇಗೆ ಬೇಯಿಸಿದರೂ, ಅಕ್ಕಿ ನೀರಿನೊಂದಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಜೊತೆಗೆ ಪಾತ್ರೆಯಲ್ಲಿ ಹಾಕಬೇಕಂತೆ. ಕೊಬ್ಬರಿ ಎಣ್ಣೆ ಎಂದರೆ ನಾವು ಕೂದಲಿಗೆ ಹಚ್ಚುವಂತದ್ದಲ್ಲ. ಅಡುಗೆ ಮಾಡಲು ಬಳಸುವುದು ಬೇರೆ ಇರುತ್ತದೆ. ಅದು ಹೆಚ್ಚಾಗಿ ಎಣ್ಣೆ ತಯಾರುಸುವ ಯಂತ್ರದಿಂದ ಲಭ್ಯವಾಗುತ್ತಿದೆ. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳಬಹುದು. ಆದರೆ ನೀವು ಬಳಸುವಂತಹ ಅಕ್ಕಿಯ ಪ್ರಮಾಣದ 1/3 ರಷ್ಟು ಭಾಗವನ್ನು ಸೇರಿಸಬೇಕು ಉದಾಹರಣೆಗೆ 1 ಕೆ.ಜಿ ಅಕ್ಕಿ ಬೇಯಿಸಲು ಇಟ್ಟಾಗ ಅದರಲ್ಲಿನ 1/3 ಭಾಗವನ್ನು ಅಂದರೆ 30 ಗ್ರಾಂ ಕೊಬ್ಬರಿಎಣ್ಣೆಯನ್ನು ಆ ಅಕ್ಕಿಯ ಜೊತೆ ಸೇರಿಸಬೇಕು ಹಾಗೆ ಕೊಬ್ಬರಿ ಎಣ್ಣೆಯನ್ನು ಕಲಿಸಿದ ಅನ್ನವನ್ನು ತಣ್ಣಗೆ ಮಾಡಿ ಫ್ರಿಜ್‍ನಲ್ಲಿಡಬೇಕು‌. 12 ಗಂಟೆಗಳ ನಂತರ ಆ ಅನ್ನವನ್ನು ಹೊರಗೆ ತೆಗೆದು ಸ್ವಲ್ಪ ಬಿಸಿ ಮಾಡಿ ತಕ್ಷಣ ತಿನ್ನುವುದರಿಂದ ಎಷ್ಟೋ ವಿಧವಾದ ಪ್ರಯೋಜನಗಳು ಸಿಗುತ್ತವೆ.
  2. ಮೇಲೆ ಹೇಳಿದ ವಿಧಾನಗಳಲ್ಲಿ ಅನ್ನವನ್ನು ತಯಾಸುವುದು ಅನ್ನ ರೆಸಿಸ್ಟೆಂಟ್ ಸ್ಟಾರ್ಚ್ ಎಂಬ ಸಂಕ್ಲಿಷ್ಟವಾದ ಹಿಟ್ಟು ಪದಾರ್ಥವಾಗಿ ಬದಲಾಗುತ್ತದೆ. ಇದನ್ನು ಕೆಲವರು ವಿಜ್ಞಾನಿಗಳು ಇತ್ತೇಚೆಗೆ ಕಂಡುಕೊಂಡಿದ್ದಾರೆ. ಹೀಗೆ ಸಂಕ್ಲಿಷ್ಟವಾದ ಹಿಟ್ಟಾಗಿ ಬದಲಾಗಿದ್ದ ಅನ್ನವನ್ನು ತಿಂದರೆ ನಮಗೆ ಸಾಧಾರಣ ಅನ್ನಕ್ಕಿಂತ ಸುಮಾರು ಅರ್ಧದಷ್ಟು ಕ್ಯಾಲರಿಗಳು ಕಡಿಮೆ ಲಭಿಸುತ್ತವೆಯಂತೆ. ಉದಾಹರಣೆಗೆ: ಸಾಧಾರಣ ಅನ್ನದಿಂದ 100 ಗ್ರಾಂ ಗಳಿಗೆ 400 ಕ್ಯಾಲರಿಗಳು ಲಭಿಸುತ್ತವೆಂದರೆ, ಈ ಅನ್ನದಿಂದ ನಮಗೆ 100 ಗ್ರಾಂಗಳಿಗೆ 200ಕ್ಯಾಲರೀಗಳು ಮಾತ್ರ ಲಭಿಸುತ್ತವೆ. ಅವು ಸಹ ಶರೀರದಲ್ಲಿ ನಿಧಾನವಾಗಿ ಸೇರುತ್ತವೆ. ಅಂದರೆ ಆ ಅನ್ನ ಸಾಧಾರಣ ಅನ್ನದ ರೀತಿಯಲ್ಲಿಲ್ಲದೆ, ತುಂಬಾ ನಿಧಾನವಾಗಿ ಜೀರ್ಣವಾಗುತ್ತದೆ. ಹೀಗೆ ಶರೀರದಲ್ಲಿರುವ ಕೊಬ್ಬನ್ನು ಖರ್ಚುಮಾಡುತ್ತದೆ. ಇದರಿಂದ ನಮಗೆ ಕ್ಯಾಲರೀಗಳು ಕಡಿಮೆಯಾಗುವುದು. ಕೊಬ್ಬುಕರಗುತ್ತದೆ. ತುಂಬಾ ಕಡಿಮೆ ಮೊತ್ತದಲ್ಲಿ ಈ ಅನ್ನ ಹೊಟ್ಟೇ ತುಂಬಿದೆ, ಎಂಬ ಭಾವನೆಯಾಗುವುದು. ಇದರಿಂದ ಶರೀರದ ತೂಕವೂ ಕಡಿಮೆಯಾಗುತ್ತದೆ.
  3. ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಿದ ಅನ್ನವು ಮಧುಮೇಹ ಇದ್ದವರಿಗೆ ಎಷ್ಟೋ ಒಳಿತುಂಟುಮಾಡುತ್ತದೆ. ನಿತ್ಯವೂ ಅನ್ನವನ್ನು ಬಿಟ್ಟು ಚಪಾತಿಯನ್ನು ಮಾತ್ರ ತಿನ್ನುತ್ತಿದ್ದವರು, ಅವುಗಳನ್ನು ತಿನ್ನುವುದಕ್ಕಾಗದವರು ಈ ರೀತಿಯ ಅನ್ನವನ್ನು ಸೇವಿಸುವುದರಿಂದ ರಕ್ತದಲ್ಲಿನ ಷುಗರ್ ಪ್ರಮಾಣ ಹಿಡಿತದಲ್ಲಿರುತ್ತದೆ. ಇದರ ಮೂಲಕ ಔಷಧಿಗಳ ಬಳಕೆಯನ್ನು ಕ್ರಮ ಕ್ರಮವಾಗಿ ಕಡಿಮೆ ಮಾಡಿಕೊಳ್ಳಬಹುದು. ಈ ಅನ್ನದಿಂದ ಶರೀರಕ್ಕೆ ವಿಟಮಿನ್‍ಗಳು, ಮಿನರಲ್ಸ್, ಚೆನ್ನಾಗಿ ಸಿಗುತ್ತವೆ. ಮಲಬದ್ದತೆ ಸಹ ಹೋಗುತ್ತವೆ. ಜೀರ್ಣವ್ಯವಸ್ಥೆ ಚನ್ನಾಗಿ ಕೆಲಸ ಮಾಡುತ್ತವೆ. ಶರಿರದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಹೋಗಿ ಒಳ್ಳೆಯ ಬ್ಯಾಕ್ಟೀರಿಯಗಳು ವೃದ್ದಿಯಾಗುತ್ತವೆ. ಅಷ್ಟೇ ಅಲ್ಲ ಶರೀರದ ರೋಗನಿರೋಧಕ ವ್ಯವಸ್ಥೆಯು ಬಲಿಷ್ಠವಾಗುತ್ತದೆ.

Click Here To Download Kannada AP2TG App From PlayStore!

Share this post

scroll to top