ಹೊರಬಿದ್ದ ಮತ್ತೊಂದು ಖಾಸಗಿ ಆಸ್ಪತ್ರೆ ಬಂಡವಾಳ. ಡೆಂಗ್ಯೂ ರೋಗಿಗೆ ರೂ.15.88 ಲಕ್ಷ ಬಿಲ್ ಹಾಕಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸರಿಯಾಗಿ ಕೊಡುವುದಿಲ್ಲ ಎಂದು ಹೇಳಿ ನಾವು ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ. ಆದರೆ ಅಲ್ಲಿ ಏನೇನೋ ಟೆಸ್ಟ್‌ಗಳನ್ನು ಮಾಡಿ ಸಾವಿರಾರು, ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಾರೆ. ಸರಿ ಆ ರೀತಿ ವಸೂಲಿ ಮಾಡಿದರೂ ನಮ್ಮ ಪ್ರಾಣ ಗ್ಯಾರಂಟಿ ಎನ್ನುವಂತಿಲ್ಲ..? ಎಂದರೆ.. ಊಹುಂ..ಇರಲ್ಲ ಎಂದರೆ ಇರಲ್ಲ. ಅದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳೇ ನಿದರ್ಶನ. ಫೋರ್ಟಿಸ್ ಆಸ್ಪತ್ರೆ ವ್ಯವಹಾರ ನೆನಪಿದೆ ಅಲ್ಲವೇ. ಡೆಂಗ್ಯೂ ಬಂದಿದ್ದ ಮಗುವಿಗೆ ಚಿಕಿತ್ಸೆ ಮಾಡಿದರೂ ಆ ಬಾಲಕಿ ಸಾವಪ್ಪಿದಳು. ಆ ಆಸ್ಪತ್ರೆಯವರು ರೂ.16 ಲಕ್ಷ ಫೀಜನ್ನು ವಸೂಲಿ ಮಾಡಿದರು. ಈ ಸುದ್ದಿ ಇಡೀ ದೇಶದ ಗಮನಸೆಳೆದಿತ್ತು. ಇದೀಗ ಅಂತಹದ್ದೇ ಘಟನೆ ನಡೆದಿದೆ.

ಗುರುಗ್ರಾಮದಲ್ಲಿ ಇರುವ ಮೇಡಾಂಟಾ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ 8 ವರ್ಷದ ಬಾಲಕನನ್ನು ಅವರ ತಂದೆತಾಯಿ ಆಸ್ಪತ್ರೆಗೆ ದಾಖಲಿಸಿದರು. ಆ ಬಾಲಕನಿಗೆ ತೀವ್ರವಾಗಿ ಡೆಂಗ್ಯೂ ಜ್ವರ ಬಂದಿತ್ತು. ಇದರಿಂದ ಆಸ್ಪತ್ರೆಯವರು ದಾಖಲಿಸಿಕೊಂಡರು. ಆ ರೀತಿ ಆ ಬಾಲಕ 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೂ ಆತನಿಗೆ ಜ್ವರ ಕಡಿಮೆಯಾಗಲಿಲ್ಲ. ಕೊನೆಗೆ ಆ ಬಾಲಕ ಸಾವಪ್ಪಿದ. ಆದರೆ ಆಸ್ಪತ್ರೆಯವರು ಮಾತ್ರ ಚಿಕಿತ್ಸೆಗಾಗಿ ಆ ಬಾಲಕನ ಕುಟುಂಬಿಕರಿಂದ ರೂ.15.88 ಲಕ್ಷ ಫೀಸನ್ನು ವಸೂಲಿ ಮಾಡಿದರು.

ಆ ರೀತಿ ಮೇಡಂಟಾ ಆಸ್ಪತ್ರೆಯವರು ರೂ.15.88 ಲಕ್ಷ ಶುಲ್ಕವನ್ನು ಹಾಕಿ ಆ ಕುಟುಂಬಕ್ಕೆ ಶಾಕ್ ನೀಡಿದರು. ಅಷ್ಟೇ ಅಲ್ಲ, ಕೂಡಲೆ ಶುಲ್ಕ ಕಟ್ಟಬೇಕೆಂದು ಬೇಡಿಕೆ ಇಟ್ಟಿದ್ದಾರೆ ಕೂಡ. ಆದರೆ ಇನ್ನೊಂದು ಕಡೆ ತಂದೆತಾಯಿ ಮಾತ್ರ ಆ ಆಸ್ಪತ್ರೆಯವರು ಅನ್ಯಾಯವಾಗಿ ಅಕ್ರಮವಾಗಿ ಶುಲ್ಕ ವಸೂಲಿ ಮಾಡಿದರು ಎಂದು ಆರೋಪಿಸಿದ್ದಾರೆ. ಬಾಲಕ ಬದುಕಲ್ಲ ಎಂದು ಗೊತ್ತಿದ್ದೂ ತಪ್ಪನ್ನು ತಮ್ಮದಲ್ಲ ಎಂದು ಹೇಳಲು ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಬೇಕೆಂದು ಹೇಳಿದರೆಂದು ಬಾಲಕನ ಪೋಷಕರು ಹೇಳುತ್ತಿದ್ದಾರೆ. ಆದರೆ ಈ ವಿಷಯದ ಬಗ್ಗೆ ಸದರಿ ಆಸ್ಪತ್ರೆ ಮಾಲೀಕರು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಈ ರೀತಿ ಇರುವಷ್ಟು ದಿನ ನಮಗೆ ಅನ್ಯಾಯ ನಡೆಯುತ್ತಿರುತ್ತದೆ, ಅದಕ್ಕೆ ಯಾರೇನು ಮಾಡಲು ಸಾಧ್ಯವಿಲ್ಲ…!


Click Here To Download Kannada AP2TG App From PlayStore!