ಈ 13 ಕೆಲಸಗಳಲ್ಲಿ ನೀವು ಯಾವುದನ್ನಾದರೂ ಮಾಡುತ್ತಿದ್ದೀರಾ..? ಆದರೆ ನಿಮ್ಮ “ಲೈಫ್”ನ್ನು ನೀವು ವೇಸ್ಟ್ ಮಾಡುತ್ತಿದ್ದೀರೆಂದರ್ಥ.!

ಮನುಷ್ಯ ಎಂದ ಬಳಿಕ ಯಾವುದೋ ಒಂದು ಕೆಲಸ ಮಾಡಬೇಕು. ಏನಾದರೂ ಮಾಡುತ್ತಿರು ತಮ್ಮ ಸುಮ್ಮನಿರಬೇಡ ಎನ್ನುತ್ತಾರೆ. ಸುಮ್ಮನೆ ತಿಂದು ಮಲಗುತ್ತಿದ್ದರೆ ಯಾರೇ ಆಗಲಿ ಬೈಯ್ಯುತ್ತಾರೆ. ಕೊನೆಗೆ ಯಾರು ಯಾರ ಮೂಲಕನೋ ಏನೋ ಒಂದು ಮಾತು ಅನ್ನಿಸಿಕೊಳ್ಳಬೇಕಾಗುತ್ತದೆ. ಸುಮ್ಮನೆ ಯಾಕಿದ್ದೀಯಾ, ಏನೋ ಒಂದು ಕೆಲಸ ಮಾಡಬಹುದಲ್ಲಾ, ನನಗೆ ಗೊತ್ತಿರುವವರಿದ್ದಾರೆ, ಅವರಿಗೆ ಹೇಳಿ ಕೆಲಸ ಕೊಡಿಸುತ್ತೇನೆ ಎನ್ನುತ್ತಾ ಕೆಲವರು ಸಿಕ್ಕಿದಾಗಲೆಲ್ಲಾ ಹೇಳುತ್ತಿರುತ್ತಾರೆ. ಸುಮ್ಮನೆ ಇರುವವರಿಗೆ ಇಂತಹ ಘಟನೆಗಳು ಸದಾ ಎದುರಾಗುತ್ತಿರುತ್ತವೆ. ಇದರ ಜತೆಗೆ ಕೆಲಸ ಮಾಡುವವರು ಸಹ ನನ್ನ ಜೀವನ ವೇಸ್ಟ್ ಆಗುತ್ತಿದೆ ಎಂದು ಹೇಳುತ್ತಿರುತ್ತಾರೆ. ಅವರ ಲೈಫ್ ಅಷ್ಟೇ ವೇಸ್ಟ್ ಅಲ್ಲ.. ಆ ರೀತಿ ಲೈಫ್ ವೇಸ್ಟ್ ಆಗಿದೆಯೆಂದು ಭಾವಿಸುವವರಲ್ಲಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ಅವೇನೆಂದರೆ..

1. ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಯಾವುದರ ಬಗ್ಗೆಯೂ ಆಲೋಚಿಸದೆ ಬೆಡ್‌ ಮೇಲೇ ಇದ್ದು ಫೋನ್ ತೆಗೆದುಕೊಂಡು ಕಾಲಕ್ಷೇಪ ಮಾಡುತ್ತಿದ್ದರೆ.. ಅಂತಹವರ ಜೀವ ವ್ಯರ್ಥವಾಗುತ್ತಿದೆ ಎಂದರ್ಥ.

2. ಯಾರು ಏನು ಕೇಳಿದರೂ ಅಲ್ಲ, ಇಲ್ಲ ಎನ್ನದೆ ಎಲ್ಲದಕ್ಕೂ ಹೌದು ಎಂದು ಉತ್ತರ ನೀಡುತ್ತಿದ್ದರೆ..ಅಂತಹವರ ಲೈಫ್ ಸಹ ವ್ಯರ್ಥವಾಗುತ್ತಿದೆ ಎಂದು ಗ್ರಹಿಸಬೇಕು.

3. ಫೇಸ್‌ಬುಕ್‌ನಲ್ಲಿ ಯಾರ ಫ್ರೆಂಡ್‌ದಾದರೂ ಬರ್ತ್‍ಡೇ ನೋಟಿಫಿಕೇಷನ್ ನೋಡಿದ ಕೂಡಲೆ ಬರ್ತ್‌ಡೇ ವಿಶ್ ಹೇಳದೆ ಬಳಿಕ ಹೇಳೋಣ ಬಿಡು ಎಂದು ಭಾವಿಸುವವರು ಅವರ ಜೀವನವನ್ನು ವ್ಯರ್ಥ ಮಾಡಿದಂತೆ ಲೆಕ್ಕ.

Related image

4. ಯೂಟ್ಯೂಬ್‍ನಲ್ಲಿ ಒಂದು ನಿರ್ದಿಷ್ಟ ಹಾಡು ಅಥವಾ ವಿಡಿಯೋಗಳನ್ನು ಕಂಟಿನ್ಯೂ ಆಗಿ ನೋಡದೆ ಅವನ್ನು ಪದೇಪದೇ ಬಲಾಯಿಸಿ ನೋಡುವವರು ಜೀವನವನ್ನು ವ್ಯರ್ಥ ಮಾಡುತ್ತಿದ್ದಂತೆ ತಿಳಿದುಕೊಳ್ಳಬೇಕು.

5. ಅಗತ್ಯ ಇರಲಿ ಬಿಡಲಿ ಫೋನನ್ನು ಪದೇಪದೇ ಚೆಕ್ ಮಾಡುತ್ತಾ ಇರುವವರ ಲೈಫ್ ವೇಸ್ಟ್ ಆಗುತ್ತಿದೆ ಎಂದು ಗುರುತಿಸಬೇಕು.

6. ಲೈಫ್ ವೇಸ್ಟ್ ಮಾಡುವವರಿಗೆ, ಆ ರೀತಿ ಆಗುತ್ತಿದೆ ಎಂದು ಭಾವಿಸುವವರಿಗೆ ಸಂಡೆ ಬಂದರೂ, ಇತರೆ ಯಾವುದೇ ಹಾಲಿಡೇ ಬಂದರೂ, ಸಾಮಾನ್ಯ ದಿನಗಳಾದರೂ ಒಂದೇ ಅನ್ನಿಸುತ್ತದೆ. ದೊಡ್ಡ ವ್ಯತ್ಯಾಸ ಇರಲ್ಲ.

7. ವಾಟ್ಸಾಪ್‌ನಲ್ಲಿ ಹೊಸದಾಗಿ ಬರುವ ಮೆಸೇಜ್‌ಗಳನ್ನು ಓದಲ್ಲ. ಆದರೆ ಅವನ್ನು ಓಪನ್ ಮಾಡಿ ಕ್ಲೋಸ್ ಮಾಡುತ್ತಾರೆ. ಈ ರೀತಿ ಮಾಡುತ್ತಿದ್ದರೂ ಅಂತಹವರು ತಮ್ಮ ಲೈಫನ್ನು ವೇಸ್ಟ್ ಮಾಡುತ್ತಿದ್ದಂತೆ ತಿಳಿದುಕೊಳ್ಳಬೇಕು.

8. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಫೀಡ್‌ಗಳನ್ನು ಅದೇ ಕೆಲಸವಾಗಿ ಫಾಲೋ ಆಗುವವರ ಜೀವನ ವ್ಯರ್ಥ ಆಗುತ್ತಿದ್ದಂತೆ ಲೆಕ್ಕ.

9. ಹಗಲು ಹೊತ್ತಿನಲ್ಲಿ ನಿದ್ರಿಸುವುದು, ರಾತ್ರಿ ಹೊತ್ತು ಲೇಟ್ ಆಗಿ ಮಲಗುವುವಂತಹ ಲಕ್ಷಣಗಳು ಇದ್ದರೆ ಅವರ ಜೀವನ ವ್ಯರ್ಥ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು.

10. ಅಗತ್ಯ ಇರುವವರಿಗಿಂತ ಹೆಚ್ಚು ಮಂದಿಯ ಜತೆ ಮಾತನಾಡುವುದು, ಹೆಚ್ಚು ಮಂದಿಯನ್ನು ಕೇಳಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಲಕ್ಷಣಗಳು ಇದ್ದರೆ ಅವರ ಲೈಫ್ ವೇಸ್ಟ್ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು.

11. ಇಂಟರ್‌ನೆಟ್‌ನಲ್ಲಿ ಹಾಕುವ ಪೋಸ್ಟ್‌ಗಳಿಗೆ ಪದೇಪದೇ ಕಾಮೆಂಟ್‍ಗಳನ್ನು ಹಾಕುವವರು, ಅವುಗಳ ಬಗ್ಗೆ ವಾದ ಮಾಡುವವರು ತಮ್ಮ ತಮ್ಮ ಲೈಫ್ ವೇಸ್ಟ್ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು.

12. ಬಳಿಕ ಏನು ಮಾಡಬೇಕು ಎಂಬ ಪ್ರಶ್ನೆಗೆ ಖಚಿತವಾದ ಉತ್ತರ ಇಲ್ಲದವರ ಜೀವನ ವ್ಯರ್ಥ ಆದಂತೆ ಲೆಕ್ಕ.

13. ರಾತ್ರಿ ಹೊತ್ತು ನಿದ್ರಿಸುವಾಗ ಈ ದಿನ ಒಟ್ಟಾರೆ ವೇಸ್ಟ್ ಆಗಿದೆ ಎಂದುಕೊಳ್ಳುವವರ ಜೀವನ ಸಹ ವ್ಯರ್ಥ ಆಗಿದೆ ಎಂದು ತಿಳಿದುಕೊಳ್ಳಬೇಕು.


Click Here To Download Kannada AP2TG App From PlayStore!