ನೀವು ಇಯರ್ ಫೋನ್ಸ್ ಬಳಸುತ್ತಿದ್ದೀರಾ? 4 ನಿಮಿಷಕ್ಕಿಂತ ಹೆಚ್ಚು ಬಳಸಿದರೆ ಇನ್ನು ಸಂಗತಿ ಅಷ್ಟೇ.

ನಿಮಗೆ ಸಂಗೀತ ಎಂದರೆ ಇಷ್ಟಾನಾ? ಮ್ಯೂಸಿಕ್ ಕೇಳಲು ಇಯರ್ ಫೋನ್ಸ್ ಬಳಸುತ್ತಿದ್ದೀರಾ? ಆದರೆ 4 ನಿಮಿಷಗಳಿಗೂ ಮೀರಿ ಇಯರ್ ಫೋನ್‌ನಿಂದ ಸಂಗೀತ ಕೇಳುವುದು ಅಪಾಯಕರ ಎಂಬ ಸಂಗತಿ ನಿಮಗೆ ಗೊತ್ತೇ? ಗೊತ್ತಿದ್ದೂ ಗಂಟೆಗಟ್ಟಲೆ ಇಯರ್ ಫೋನ್ ಬಳಸುತ್ತಿದ್ದೀರಾ? ಆದರೆ ನೀವು ಕಿವುಡು ಸಮಸ್ಯೆಯನ್ನು ಎದುರಿಸುವುದು ತಪ್ಪಿದ್ದಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಓ) ಎಚ್ಚರಿಸಿದೆ.ನಿಲ್ಲಿಸದೆ ಅದೇ ಕೆಲಸವಾಗಿ ಹೆಚ್ಚು ಹೊತ್ತು ಇಯರ್ ಫೋನ್ಸ್ ಹಾಕಿಕೊಂಡು ಸಂಗೀತ ಕೇಳುವವರಿಗೆ ಕಿವುಡುತನ ಬರುವ ಅಪಾಯ ಇದೆ ಎಂದು ತಿಳಿಸಿದೆ. ದೊಡ್ಡ ದೊಡ್ಡ ಶಬ್ದಗಳಿಂದ ಆಗುವ ಕಿವುಡು ಸಮಸ್ಯೆಗೆ ಚಿಕಿತ್ಸೆ ಇಲ್ಲ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಕಿವಿಯಲ್ಲಿನ ಕಣಗಳು ತುಂಬಾ ಸೂಕ್ಷ್ಮವಾಗಿ ಇರುತ್ತವಂತೆ. ಅವು ಹಾಳಾದರೆ ಮತ್ತೆ ಅವನ್ನು ಸರಿಪಡಿಸಲಾಗಲ್ಲ, ಕಿವುಡು ಪರಿಕರಗಳನ್ನು ಬಳಸುವುದು ಬಿಟ್ಟು ಬೇರೆ ಮಾರ್ಗ ಇಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ವಯಸ್ಸು ಹೆಚ್ಚಾಗುವುದರ ಜತೆಗೆ ತಲೆಯೆತ್ತುವ ಕಿವುಡು ಸಮಸ್ಯೆಗಳಿಗಿಂತ ಭಾರಿ ಶಬ್ದಗಳನ್ನು ಕೇಳಿವುದರಿಂದ ಕಿವುಡು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಹೆಚ್ಚಿನ ಮಂದಿ ಎಂದು ಭಾರತದ ಮೂಲಕ ನ್ಯಾಶನಲ್ ಹೆಲ್ತ್ ಸರ್ವೀಸ್ ಸಂಸ್ಥೆ ತಿಳಿಸಿದೆ.ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಿವಿ ಅತ್ಯಂತ ಸೂಕ್ಷ್ಮ ಅಂಗ. ಅದನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಿದೆ. ಕಿವಿ ನೋವಿಗೆ ಕೆಲವು ಮನೆ ಮದ್ದುಗಳು ಇಲ್ಲಿವೆ ನೋಡಿ.

ಕಿವಿ ನೋವು ತುಂಬ ಕಿರಿಕಿರಿ ಮತ್ತು ಅಸಹನೀಯ. ಹಾಗಂತ ಕಿವಿ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದೌಡಾಯಿಸಬೇಕು ಎಂದೇನಿಲ್ಲ. ಪೂರ್ವಜರು ಎಷ್ಟೋ ವರ್ಷಗಳಿಂದ ಸುಲಭ ಮನೆ ಮದ್ದು ಬಳಕೆಯಿಂದ ಕಿವಿ ನೋವಿನಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ಶಮನಗೊಳಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮನೆ ಮದ್ದು ಚಿಕಿತ್ಸೆಯಿಂದ ಕಿವಿ ನೋವು ಹೊರಟು ಹೋಗುತ್ತದೆ. ಆದರೆ ಇದು ಯಾವ ಕಾರಣಕ್ಕೆ ನೋವು ಬಂತು ಎಂಬುದರ ಮೇಲೆ ಅವಲಂಬಿಸಿದೆ. ಕಿವಿಯ ಕುಳಿಯೊಳಗೆ ಸಮಸ್ಯೆ ಕಾಣಿಸಿಕೊಂಡರೆ ತಜ್ಞ ವೈದ್ಯರನ್ನೇ ಸಂಪರ್ಕಿಸಬೇಕು. ಸೋಂಕಿನಿಂದ ಕಿವಿ ನೋವು ಕಾಣಿಸಿಕೊಂಡಿದ್ದರೆ ಈ ಕೆಳಗಿನ ಮನೆ ಮದ್ದುಗಳಿಂದ ಬೇಗನೆ ವಾಸಿ ಮಾಡಿಕೊಳ್ಳಬಹುದು.

*ಉಗುರು ಬೆಚ್ಚಗಿನ 2-4 ಹನಿ ಎಣ್ಣೆಯನ್ನು ಕಿವಿಯೊಳಗೆ ಬಿಡಬೇಕು. ಇದರಿಂದ ನೋವು ನಿವಾರಣೆಯಾಗುತ್ತದೆ. ಆಲಿವ್‌ ಎಣ್ಣೆ ಅಥವಾ ಸಾಸಿವೆ ಎಣ್ಣೆ ಬಳಸಿ.

* ಬೆಳ್ಳುಳ್ಳಿಯಲ್ಲಿ ಇರುವ ನೋವು ನಿವಾರಕ ಮತ್ತು ಪ್ರತಿಜೀವಕ ಗುಣಲಕ್ಷಣಗಳು ಕಿವಿ ನೋವಿಗೆ ಪರಿಹಾರ ನೀಡಬಲ್ಲದು. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಚೆನ್ನಾಗಿ ಕತ್ತರಿಸಿ, ಎಳ್ಳಿನ ಎಣ್ಣೆಯಿಂದ ಬಿಸಿ ಮಾಡಿ. ಬಿಸಿ ಎಣ್ಣೆ ತಣಿದ ನಂತರ 2-3 ಹನಿಯನ್ನು ಕಿವಿಯೊಳಗೆ ಹಾಕಿ.


Click Here To Download Kannada AP2TG App From PlayStore!

Share this post

scroll to top