ಆಗಸ್ಟ್ 21…ಸೋಮವಾರ ಅಮಾವಾಸ್ಯೆ ಅದ್ಭುತವಾದ ದಿನ. ಹೀಗೆ ಮಾಡಿದರೆ , ಅದೃಷ್ಟ ನಿಮ್ಮದಾಗುತ್ತೆ!!

ಈ ತಿಂಗಳ 21…ಅತ್ಯಂತ ವಿಶೇಷವಾದ ದಿನವೆಂದು ಪಂಡಿತರು ಹೇಳುತ್ತಾರೆ. ಅಂದು ಸೋಮವಾರ…ಸೂರ್ಯ ಗ್ರಹಣ ಹಾಗೂ ಅಮಾವಾಸ್ಯೆ…ಈ ದಿನವನ್ನು ಸೋಮಾವತಿ ಅಮಾವಾಸ್ಯೆ ಎನ್ನುತ್ತಾರೆ. ಇದು ಮಹಾಶಿವರಾತ್ರಿಗಿಂತಲೂ ಮಹತ್ತರವಾದ ದಿನವೆಂದು ಗ್ರಂಥಗಳಲ್ಲಿ ಹೇಳಲಾಗಿದೆ. ಮುಕ್ಕೋಟಿ ದೇವತೆಗಳು, ನವಗ್ರಹಗಳು, ಸಪ್ತ ಋಷಿಗಳೂ ಎಲ್ಲರೂ ಎದುರು ನೋಡುವ ದಿನ…ಎಂದು ತಾಳೆ ಗ್ರಂಥಗಳಲ್ಲಿಯೂ ಸಹ ತಿಳಿಸಲಾಗಿದೆ. ಶ್ರಾವಣ ಮಾಸದಿಂದ ಕೂಡಿರುವ ಈ ಸೋಮವತಿ ಅಮಾವಾಸ್ಯೆಯ ಸೂರ್ಯ ಗ್ರಹಣ ಅತ್ಯಂತ ಪವಿತ್ರವಾದದ್ದು. ಅಂದು ಶಿವನಿಗೆ ಅಭಿಷೇಕ, ಲಿಂಗಾರ್ಚನೆ ಮಾಡುತ್ತಾರೆ. ಏಕೆಂದರೆ, ಪ್ರತಿ ದಿನವೂ ಸಕಲ ಶಕ್ತಿಗಳು,ಅಷ್ಟ ದಿಕ್ಪಾಲಕರು, ಸಕಲ ಭೂತ ಶಕ್ತಿಗಳು ಆ ಲಿಂಗರೂಪಿ ಶಿವನಲ್ಲಿ ನೆಲೆ ನಿಂತಿರುತ್ತಾರಂತೆ.

ಆದುದರಿಂದ ನಾವು ತಿಳಿಯೋ, ತಿಳಿಯದೆಯೋ ತಪ್ಪುಗಳನ್ನು, ಪಾಪಗಳನ್ನು ಮಾಡಿದ್ದರೆ…ಆ ದಿನದಿಂದು ಪರಿಹಾರ ವಾಗುತ್ತವಂತೆ. ಆ ದಿನ ಮಹಾ ಲಿಂಗಾರ್ಚನೆ ಮಾಡಿದರೆ ಲಭಿಸುವ ಪುಣ್ಯ ಫಿಕ್ಸೆಡ್ ಡಿಪಾಸಿಟ್ ಮಾಡಿದಂತೆ ಎಂದು ಪಂಡಿತರು ಹೇಳಿತ್ತಾರೆ. ಪೂಜೆ ಪೂರ್ತಿಯಾದ ನಂತರ, ಅಕ್ಷತೆ ಗೆ ಸ್ವಲ್ಪ ನೀರು ಹಾಕಿ…” ಮಯಾ ಕೃತೇನ ಸಮಸ್ಥ ಪೂಜಾ ಫಲಂ ಶ್ರೀ ಗಣಪತಿ ದೇವತಾರ್ಪಣಮಸ್ತು” ಎಂದು ದೇವರ ಪಾದಗಳಲ್ಲಿ ಬಿಡಬೇಕು. ಹೀಗೆ ಮಾಡುವುದರಿಂದ ನಾವು ಮಾಡಿದ ಪುಣ್ಯದ ಫಲ ನಿರಖು ಠೇವಣಿ (ಫಿಕ್ಸೆಡ್ ಡಿಪಾಸಿಟ್)ಇರಿಸಿದಂತಾಗುತ್ತದೆ. ಸೋಮಾವತಿ ಅಮಾವಸ್ಯೆಯ ಬಗ್ಗೆ ಒಂದು ಕತೆಯೂ ಪ್ರಚಲಿತದಲ್ಲಿದೆ. ಅದೇನೆಂದರೆ…
ಒಂದು ಊರಿನಲ್ಲಿ ಒಬ್ಬ ಸಾಧು, ಒಬ್ಬ ವ್ಯಾಪಾರಿಯ ಮನೆಗೆ ಬರುತ್ತಿದ್ದನಂತೆ. ಹಾಗೆ ಸಾಧು ಒಮ್ಮೆ ವ್ಯಾಪಾರಿಯ ಮನೆಗೆ ಹೋಗಿದ್ದಾಗ ಆ ಮನೆಯಲ್ಲಿದ್ದ ಮದುವೆಯಾಗದ ಕನ್ಯೆಯ ಮುಖವನ್ನು ನೋಡಿಯೂ ಸಹ ಆಶೀರ್ವದಿಸದೆ ಹೋದರಂತೆ. ಇದರ ಕಾರಣ ತಿಳಿಯದೆ ಆ ಕುಟುಂಬ ಚಿಂತೆಗೀಡಾಯಿತು. ಕೊನೆಯೆ ಜ್ಯೋತಿಷಿಯನ್ನು ಕರೆಯಿಸಿ, ಕಾರಣ ಕೇಳಿದಾಗ. ಜಾತಕ ನೋಡಿದ ಆ ಜ್ಯೋತಿಷಿ ‘ಈಕೆಗೆ ವಿವಾಹವಾದರೆ, ಅಲ್ಪ ಕಾಲದಲ್ಲಿಯೇ ಈಕೆಯ ಗಂಡ ನಿಧನ ಹೊಂದುತ್ತಾನೆ.’ ಎಂದು ಹೇಳಿದರು. ಇದರಿಂದ ಚಿಂತೆಗೀಡಾಗ ಆ ಕುಟುಂಬ ದವರು ಪರಿಷ್ಕಾರ ಮಾರ್ಗವನ್ನು ತಿಳಿಸೆಂದು ಕೇಳಿಕೊಂಡಾಗ. ‘ಸಿಂಘಾಲ್’ ಪ್ರದೇಶದ ರಜಕ ಸ್ತ್ರೀ ಯ ಬಳಿ ಕುಂಕುಮ ಪಡೆದುಕೊಂಡು , ಹಣೆಗೆ ಹಚ್ಚಿಕೊಂಡರೆ, ದೋಷ ಪರಿಹಾರ ವಾಗುತ್ತದೆಂದರು.