ಅಯ್ಯಪ್ಪ ಭಕ್ತನ ಜೊತೆ 600 ಕಿ.ಮೀ ನಡೆದ ಬೀದಿನಾಯಿ!

ಅಯ್ಯಪ್ಪ ಸ್ವಾಮಿ ಪ್ರತಿಯೊಬ್ಬರಿಗೂ ಗೊತ್ತಿರುವ ದೇವರು. ಆ ಸ್ವಾಮಿಯ ಮಾಲೆ ಧರಿಸಿ 41 ದಿನಗಳ ಕಾಲ ನಿಷ್ಠೆಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಇರುಮುಡಿ ಜೊತೆಗೆ ಶಬರಿಮಲೆಗೆ ಹೋಗಿ ಸ್ವಾಮಿಯನ್ನು ದರ್ಶನ ಮಾಡಿಕೊಂಡು ಪುಳಕಿತರಾಗುತ್ತಾರೆ. ಅನೇಕರು ವಾಹನಗಳ ಮೂಲಕ ಶಬರಿಮಲೆಗೆ ಬಂದರೆ, ಕೆಲವರು ಕಾಲ್ನಡಿಗೆ ಮೂಲಕ ಬರುತ್ತಾರೆ. ಅವರಲ್ಲಿ ಒಬ್ಬರು ಕೇರಳದ ನವೀನ್ ಸ್ವಾಮಿ.

ಇರುಮುಡಿಯನ್ನು ತಲೆಯ ಮೇಲಿಟ್ಟುಕೊಂಡು 600 ದೂರದ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೋಗಬೇಂಕೆಂದು ನಿರ್ಧಾರಿಸಿದ. ಮೊದಲ ದಿನ ಒಬ್ಬರೇ ಕಾಲ್ನಡಿಗೆಯನ್ನು ಆರಂಭಿಸಿದರು. ಎರಡನೇ ದಿನ ಒಂದು ಬೀದಿನಾಯಿ ಆತನಿಗೆ ಜೊತೆಯಾಗಿ ಬಂತು. ಅದು ತನ್ನನ್ನು ಹಿಂಬಲಿಸುವುದನ್ನು ನೋಡಿದ ನವೀನ್ ಓಡಿಸಲು ಎಷ್ಟೇ ಪ್ರಯತ್ನಿಸಿದರೂ ಮತ್ತೆ ಮತ್ತೆ ಹಿಂದೆಯೇ ಬರುತ್ತಿತ್ತು. ಇದರಿಂದ ಆತ ಅದನ್ನು ಜೊತೆಗೆ ಕರೆದುಕೊಂಡ. ಅದಕ್ಕೆ ಮಾಲು ಎಂದು ಹೆಸರಿಟ್ಟ. ನೂರಾರು ಕಿ.ಮೀ. ಮಾಲು ಆತನ ಹಿಂದೆ ಬರುವುದರ ಜೊತೆಗೆ ಆತನ ವಸ್ತುಗಳಗೆ ಕಾವಲು ಕಾಯುತ್ತದೆ. ಫೋನ್ ಕೆಲಸ ಮಾಡದ ಸಮಯದಲ್ಲಿ ಆತನನ್ನು ನಿದ್ರೆಯಿಂದ ಎಳೆಸುತ್ತದೆ. ಶಬರಿಮಲೆ ತಲುಪಿದ ನಂತರ ಮಾಲು ಕಳೆದುಹೋಯಿತು. ಇದರಿಂದ ಇಷ್ಟು ದೂರ ಜೊತೆಗೆ ಬಂದ ಜೊತೆಗಾರ ಮಿಸ್ ಆಗಿದ್ದಕ್ಕೆ ನೊಂದುಕೊಂಡ. ಅಲ್ಲಿನ ಸ್ವಾಮಿಗಳನ್ನು ಕೇಳಿದಾಗ…

ಎರಡು ದಿನದಿಂದ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಬಳಿ ಒಂದು ನಾಯಿ ಯಾರಿಗೂ ಎದುರು ನೋಡುತ್ತಾ ಕಾಣಿಸಿತ್ತೆಂದು, ಪ್ರತಿಯೊಬ್ಬ ಸ್ವಾಮಿಯನ್ನು ಮೂಸಿ ವಾಸನೆ ನೋಡುತ್ತಿತ್ತು ಎಂದು ಹೇಳಿದರು. ತಕ್ಷಣ ನವೀನ ಅಲ್ಲಿಗೆ ಓಡಿ ಬಂದ… ಮಾಲು ಸಂತೋಷದಿಂದ ತನ್ನ ಮುಂಗಾಲುಗಳಿಂದ ನವೀನ್’ನನ್ನು ಅಪ್ಪಿಕೊಂಡಿತು. ಮಾಲುವಿಗೆ ಮುತ್ತುಕೊಟ್ಟು ನವೀನ್ ಜೊತೆಗೆ ಮನೆಗೆ ಕರೆದುಕೊಂಡು ಬಂದ.

ಈಗ ಮಾಲು ನವೀನ್ ಜೊತೆಗಿದೆ. ಇದಕ್ಕಾಗಿ ಪ್ರತ್ಯೇಕವಾದ ಗೂಡನ್ನು ನಿರ್ಮಿಸಿದ್ದಾನೆ. ಇದನ್ನು ಓದಿದ ನಿಮಗೆ ಏನು ಅನಿಸುತ್ತದೆ. ಆ ಅಯ್ಯಪ್ಪ ಸ್ವಾಮಿಯೇ ಮಾಲುವನ್ನು ನವೀನ್ ಬಳಿಗೆ ಕಳಿಸಿರಬೇಕು ಅಲ್ವಾ…?!


Click Here To Download Kannada AP2TG App From PlayStore!

Share this post

scroll to top