ಇನ್ನು ಮುಂದೆ ಚೆನ್ನೈ ಯಿಂದ ಬೆಂಗಳೂರಿಗೆ ಅರ್ಧ ಗಂಟೆಯಲ್ಲೇ ತಲುಪಬಹುದು…!

ಸುಮಾರು 345 ಕಿಲೋ ಮೀಟರ್… ರಸ್ತೆಯ ಮಾರ್ಗದಲ್ಲಿ ಹೋದರೆ ಚೆನ್ನೈಯಿಂದ ಬೆಂಗಳೂರು ನಡುವೆ ಇರುವ ದೂರವಿದು. ರೈಲು ಮಾರ್ಗದಲ್ಲಾದರೆ 341 ಕಿಲೋ ಮೀಟರ್.  ಅದು ಸರಿ ವ್ಯತ್ಯಾಸ ಸ್ವಲ್ಪವಾದರೂ ಚೆನ್ನೈಯಿಂದ ಬೆಂಗಳೂರಿಗೆ ಹೋಗಬೇಕಾದರೆ ಯಾರಾದರೂ ಸರಿ 340 ಕಿ.ಮೀ. ಹೋಗಲೇಬೇಕು.ಇದಕ್ಕಾಗಿ ರಸ್ತೆ/ರೈಲು ಮಾರ್ಗವಾಗಿ 7 ಗಂಟೆ ಸಮಯ ಹಿಡಿಯುತ್ತದೆ. ಆದರೆ ಇನ್ನು ಮುಂದೆ ಆ ಪ್ರದೇಶದ ಜನರು ಕೇವಲ 7 ಗಂಟೆ ಬೇಕಾಗುತ್ತದೆ.  ಇನ್ನು ಮುಂದೆ ಆ ಪ್ರದೇಶಗಳ ಜನರು ಕೇವಲ 30 ನಿಮಿಷಗಳಲ್ಲಿ ಆ ಎರಡು ಊರುಗಳ ನಡುವೆ ಪ್ರಯಾಣಿಸಬಹುದು. ಇಷ್ಟಕ್ಕೂ ಅದು ಹೇಗೆ ಸಾಧ್ಯ. ‘ಹೈಪರ್ ಲೂಪ್’ ಎಂಬ ಒಂದು ಪ್ರತ್ಯೇಕ ಸಾರಿಗೆ ವ್ಯವಸ್ಥೆಯ ಮೂಲಕ ಈರೀತಿ ಪ್ರಯಾಣಿಸಬಹುದಂತೆ. ಇಷ್ಟರಲ್ಲೇ ಈ ಸಾರಿಗೆ ವ್ಯವಸ್ಥೆ ಪ್ರಾರಂಭವಾಗಲಿದೆಯಂತೆ.

hyper-loop-1

‘ಹೈಪರ್ ಲೂಪ್’ ಸಾರಿಗೆ ವ್ಯವಸ್ಥೆಯು ನೋಡಲು ರೈಲಿನಂತಿರುತ್ತದೆ. ಬುಲೆಟ್ ಟ್ರೈನ್ ಗಿಂತಲು ನೂರು ಪಟ್ಟು ಹೆಚ್ಚು ವೇಗವಾಗಿ ಚಲಿಸುತ್ತದೆ. ಹೆಚ್ಚು ಕಡಿಮೆ 1200 ಕಿ.ಮೀ.ವೇಗದಲ್ಲಿ ಚಲಿಸಬಹುದು. ಟ್ರ್ಯಾಕ್ ನೋಡಲು ಒಂದು ದೊಡ್ಡ ಕೊಳವೆಯ ರೂಪದಲ್ಲಿರುತ್ತದೆ. ಮೆಟ್ರೋ ರೈಲಿನಂತೆ ಈ ಕೊಳವೆಯನ್ನು ಪಿಲ್ಲರ್ ಗಳ ಮೇಲೆ ಅಳವಡಿಸುತ್ತಾರೆ. ಈ ಕೊಳವೆಯೊಳಗಿನಿಂದಲೇ ಗರಿಷ್ಟ 1200 ಕಿ.ಮೀ ವೇಗದಲ್ಲಿ ‘ಹೈಪರ್ ಲೂಪ್ ‘ರೈಲು ಚಲಿಸುತ್ತದೆ. ಈ ವ್ಯವಸ್ಥೆಯು ಅತಿ ಬೇಗನೆ ಚೆನ್ನೈ-ಬೆಂಗಳೂರು ನಡುವೆ ಪ್ರಾರಂಭವಾಗಲಿದೆಯಂತೆ.hyper-loop-3

ಅಮೆರಿಕದ ಒಂದು ಕಂಪೆನಿ ‘ಹೈಪರ್ ಲೂಪ್’ ವ್ಯವಸ್ಥೆಯನ್ನು ನಿರ್ಮಾಣಮಾಡಲು ಮುಂದೆ ಬಂದಿದ್ದು ಅದಕ್ಕೆ ಸಂಬಂಧಿಸಿದ ಮಾತು ಕತೆಗಳು ನಡೆಯುತ್ತಿವೆ. ಪ್ರಾರಂಭದಲ್ಲಿ ಚೆನ್ನೈ-ಬೆಂಗಳೂರು ಮಾರ್ಗ ಸರಿಯಾದಮೇಲೆ ,ಚೆನ್ನೈ-ಮುಂಬೈ, ಬೆಂಗಳೂರು-ತಿರುವನಂತಪುರಂ, ಮುಂಬೈ-ದಿಲ್ಲಿ ನಗರಗಳ ನಡುವೆ ‘ಹೈಪರ್ ಲೂಪ್’  ರೈಲು ಬರಲಿದೆಯಂತೆ. ಇದರಿಂದಾಗಿ ಪ್ರಯಾಣಿಸುವ ಸಮಯವನ್ನು ಹಲವು ಗಂಟೆಗಳ ಕಾಲ ಉಳಿಸುವ ಸಾದ್ಯತೆಯಿದೆ. ಇನ್ನು 38 ತಿಂಗಳುಗಳಲ್ಲಿ ಈ ಸೇವೆ ಎಲ್ಲರಿಗೂ ದೊರೆಯುವಂತೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಕೇವಲ ಪವನ, ಸೋಲಾರ್ ಪವರ್ ನಿಂದಲೇ ಈ ವ್ಯವಸ್ಥೆ ಕೆಲಸಮಾಡಲಿದ್ದು ಇಂಧನ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಲಿದೆ. ಇನ್ನು ನಾವು ಈ ‘ಹೈಪರ್ ಲೂಪ್ ” ರೈಲಿಗಾಗಿ ಕಾದು ಕುಳಿತುಕೊಳ್ಳೋಣ.

hyper-loop-4


Click Here To Download Kannada AP2TG App From PlayStore!

Share this post

scroll to top