ಭವಿಷ್ಯತ್ತಿನಲ್ಲಿ ಬೆಂಗಳೂರು ನೀರಿಲ್ಲದೆ ಬರಡಾಗುತ್ತದಾ? ಬೆಚ್ಚಿಬೀಳಿಸುತ್ತಿರುವ ವರದಿ!!

ಇತ್ತೀಚೆಗಿನ ಒಂದು ವರದಿ ಬೆಂಗಳೂರಿನ ಭವಿಷ್ಯದ ಬಗ್ಗೆ ಬೆಚ್ಚಿಬೀಳುವಂತೆ ಮಾಡಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ರೀತಿಯಲ್ಲೇ ನೀರಿಲ್ಲದಂತೆ ಆಗುವ ಮೊಟ್ಟ ಮೊದಲ ಭಾರತದ ಪ್ರಮುಖ ನಗರವಾಗಿ ಬದಲಾಗುತ್ತದೆ ಎಂದಿದೆ. ಆದರೆ ಅದು ನಿಜವಾಗಿಯೂ ನಡೆಯುತ್ತದಾ? ಜಲ ಸಂಪನ್ಮೂಲ ಕಡಿಮೆಯಾಗುವ ಪರಿಸ್ಥಿತಿಯನ್ನು ’ನೀರಿನ ಒತ್ತಡ’ ಎನ್ನುತ್ತಾರೆ. ಬೆಂಗಳೂರಿನಲ್ಲಿ ತೀವ್ರ ನೀರಿನ ಒತ್ತಡ ಇರುವುದು ನಿಜ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಂಡಿರುವ ಬೆಂಗಳೂರು ನಗರ ಈಗಾಗಲೆ ಸುತ್ತಮುತ್ತಲಿನ 100ಕ್ಕೂ ಹೆಚ್ಚು ಗ್ರಾಮಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡಿದೆ. ಇದರಿಂದ ನಗರದಲ್ಲಿನ ಜಲಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು ಮತ್ತು ತಜ್ಞರು.

ನಗರಲ್ಲಿ ನೀರಿಗಾಗಿ ದಿನದಿಂದ ದಿನಕ್ಕೆ ಇನ್ನಷ್ಟು ಆಳಕ್ಕೆ ಬೋರು ಕೊರೆಯಬೇಕಾಗಿದೆ. ಬೆಂಗಳೂರಿನಲ್ಲಿ ಅಂತರ್ಜಲದ ಮಟ್ಟ ಪಾತಾಳಕ್ಕಿಳಿಯುತ್ತಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2014ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. 2013ರಲ್ಲಿ ಒಂದು ಮುಖ್ಯವಾದ ನಿರ್ಧಾರದಿಂದ ಬೆಂಗಳೂರಿಗೆ ತಾತ್ಕಾಲಿಕವಾಗಿ ದೊಡ್ಡ ಗಂಡಾಂತರ ತಪ್ಪಿತು.

ಆ ವರ್ಷ ಕರ್ನಾಟಕ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ 10 ಸಾವಿರ ಮಿಲಿಯನ್ ಘನ ಅಡಿಗಳಷ್ಟು ನೀರನ್ನು ಕಾವೇರಿಯಿಂದ ಬೆಂಗಳೂರಿಗೆ ತರಲು ನಿರ್ಧರಿಸಲಾಯಿತು. ಕಾವೇರಿ ಕೇವಲ ಬೆಂಗಳೂರು ನಗರದ ಪ್ರಮುಖ ಜಲಸಂಪನ್ಮೂಲವಷ್ಟೇ ಅಲ್ಲ, ಕರ್ನಾಟಕ ನೀರಿನ ಅಗತ್ಯಗಳನ್ನು ಪೂರೈಸುವ ನದಿ ಸಹ.

ಕಾವೇರಿ ನೀರು ಸರಬರಾಜು ಐದನೇ ಹಂತ ಯೋಜನೆಗೆ ಬೆಂಗಳೂರಿಗೆ ಸದ್ಯಕ್ಕೆ ಸರಬರಾಜಾಗುತ್ತಿರುವ ಶೇ.50 ಹೆಚ್ಚುನ ನೀರು ಸಿಗುತ್ತಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಈ ಪ್ರಾಜೆಕ್ಟ್‌ಗೆ ಜಪಾನ್ ಆರ್ಥಿಕ ಸಹಾಯ ನೀಡುತ್ತಿದೆ. ಕಾವೇರಿ ನದಿ ನೀರಿನ ಜತೆಗೆ ಮುಂದಿನ 18 ತಿಂಗಳಲ್ಲಿ ನೇತ್ರಾವತಿ ನದಿ ನೀರು ಸಹ ಬೆಂಗಳೂರಿಗೆ ಸಿಗಲಿದೆ. ಹಾಗಾಗಿ ಬೆಂಗಳೂರು ನೀರಿನ ವಿಚಾರದಲ್ಲಿ ಸದ್ಯಕ್ಕೆ ಸಂತೃಪ್ತವಾಗಿದೆ.

ಸದ್ಯಕ್ಕೆ ಬೆಂಗಳೂರಿನಲ್ಲಿ ಸರಾಸರಿ ಪ್ರತಿ ವ್ಯಕ್ತಿಗೆ 100 ಲೀಟರ್ ನೀರು ಸಿಗುತ್ತಿದೆ. ಆದರೆ ಭವಿಷ್ಯತ್ ಬೇಡಿಕೆಗಾಗಿ 50ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‍ಗಳು ಜತೆಯಾಗಿ ಚಿಕ್ಕಚಿಕ್ಕ ನೀರಿನ ಟ್ರೀಟ್‌ಮೆಂಟ್ ಪ್ಲಾಂಟ್‌ಗಳನ್ನು ಏರ್ಪಾಟು ಮಾಡಿಕೊಳ್ಳಬೇಕೆಂದು ತಜ್ಞರು ಸೂಚಿಸಿದ್ದಾರೆ.

ನಿತ್ಯ ಪ್ರತಿಯೊಬ್ಬ ಬಳಸುವ 100 ಲೀಟರ್ ನೀರಿನಲ್ಲಿ 20 ಲೀಟರ್ ಕುಡಿಯಲು, ಅಡುಗೆಗೆ, ಸ್ನಾನಕ್ಕೆ ಖರ್ಚಾಗುತ್ತಿದೆ. ಉಳಿದ 80 ಲೀಟರ್ ಟಾಯ್ಲೆಟ್ ಫ್ಲಶಿಂಗ್, ಮನೆ ವರೆಸಲು, ಕಾರು ತೊಳೆಯಲು ಖರ್ಚಾಗುತ್ತಿದೆ. ಜಗತ್ತಿನಾದ್ಯಂತ ನೀರು ತುಂಬಾ ಅಮೂಲ್ಯವಾದ ಸಂಪನ್ಮೂಲ ಎಂದು ಗುರುತಿಸಲಾಗಿದೆ.

ಕೇವಲ ನೀರು ಸರಬರಾಜು ಮಾಡಿದ ಮಾತ್ರಕ್ಕೆ ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಯಲ್ಲ. ಬೆಂಗಳೂರು ವಾಸಿಗಳು ಜಲ ಸಂರಕ್ಷಣೆ ಮಾಡಿದರೆ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಮಳೆ ನೀರು ಸಂಗ್ರಹಕ್ಕಾಗಿ ಸರಕಾರ ತೀವ್ರವಾಗಿ ಪ್ರಯತ್ನಿಸುತ್ತಿದ್ದರೂ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ.

ಬೆಂಗಳೂರಿನಲ್ಲಿ ವಾರ್ಷಿಕ ಮಳೆಯ ಮೂಲಕ ದಿನಕ್ಕೆ 2,740 ಮಿಲಿಯನ್ ಲೀಟರ್ ನೀರು ಸಂಗ್ರಹಿಸಬಹುದು ಎಂದು ಜಲಸಂಪನ್ಮೂಲ ತಜ್ಞ ವಿಶ್ವನಾಥ್ ಶ್ರೀಕಾಂತಯ್ಯ ತಿಳಿಸಿದ್ದಾರೆ. ಸಿಗುತ್ತಿರುವ ನೀರನ್ನು ಸಮರ್ಥವಾಗಿ ಬಳಸಿಕೊಂಡರೆ ಸಮಸ್ಯೆ ಏನೂ ಆಗಲ್ಲ. ಇಲ್ಲದಿದ್ದರೆ ಬೆಂಗಳೂರು ಬರಡಾಗುವುದಂತೂ ಗ್ಯಾರಂಟಿ.


Click Here To Download Kannada AP2TG App From PlayStore!