ರಷ್ಯನ್ ಅಧಿಕಾರಿ ಮನೋಡಿ ಪ್ರೇಮದಲ್ಲಿ ಸಿಲುಕಿದ್ದಾರೆ.ಆ ಜೋಡಿಯನ್ನು ನೋಡಿದ ಆ ಊರಿನ ಜನರೆಲ್ಲರಿಗೂ ಆಘಾತ !!!

ನರೇಂದ್ರ. . . ಮಧ್ಯಪ್ರದೇಶ ದ ಒಂದು ಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಒಬ್ಬ ವ್ಯಕ್ತಿ. ಹಳ್ಳಿಯಲ್ಲಿ ಕೆಲಸ ದೊರೆಯದ ಕಾರಣ ಹೊಟ್ಟೆಪಾಡಿಗಾಗಿ ‘ಗೋವಾ’ ಗೆ ಹೊರಟ. ಅಲ್ಲಿಯ ಬಾರ್ ಒಂದರಲ್ಲಿ ಬೇರರ್ ಆಗಿ ಕೆಲಸ ಗಿಟ್ಟಿಸಿಕೊಂಡ. ಬಾರ್ ಗಳಿಗೆ,ಹುಡುಗಿಯರು,ಮಹಿಳೆಯರೂ ಬರುವುದು ಗೋವಾದಲ್ಲಿ ಸಹಜ. ನರೇಂದ್ರ ಎಂದಿನಂತೆ ತನ್ನ ಕೆಲಸ ಮಾಡುತ್ತಿರುವಾಗ. . .ರಷ್ಯನ್ ಯುವತಿಯೊಬ್ಬಳು ಆತನ್ನು ಕರೆದು ಒಂದು ‘ಬೀರ್’ಆರ್ಡರ್ ಮಾಡಿದಳು. ನರೇಂದ್ರ ಬೀರ್ ತಂದು,ಗ್ಲಾಸಿಗೆ ಸುರಿದು ಆ ಯುವತಿಯ ಕೈಗಿತ್ತ. . .ಆ ಕ್ಷಣದಲ್ಲಿ ಏನಾಯಿತೋ ಏನೋ ಗೊತ್ತಿಲ್ಲ. ನರೇಂದ್ರ ನನ್ನು ಇಷ್ಟಪಡಲು ಪ್ರಾರಂಭಿಸಿದಳು ಆ ರಷ್ಯನ್ ಯುವತಿ.

Watch Video:

ಕೆಲವು ದಿನಗಳನಂತರ ಇಬ್ಬರೂ ಒಟ್ಟಿಗೆ ಗೋವಾದಲ್ಲಿರುವ ಪಾರ್ಕ್ ಗಳಲ್ಲಿ,ಬೀಚ್ ಗಳಲ್ಲಿ ವಿಹರಿಸಿದರು.ಅಷ್ಟೊತ್ತಿಗಾಗಲೇ ಅವರಿಬ್ಬರೂ ಪ್ರೀತಿಯಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದರು. ಇಷ್ಟೆಲ್ಲಾನಡೆದಮೇಲೆ ,ಆ ಯುವತಿಯ ಹೆಸರು ‘ಅನಸ್ತತ’ . . . ರಷ್ಯನ್ ಪಾರ್ಲಿಮೆಂಟ್ ಹೌಸ್ ನಲ್ಲಿ ಉದ್ಯೋಗಿನಿ ಎಂದು ತಿಳಿಯಿತು. ನರೇಂದ್ರ,ತನ್ನ ಪ್ರಿತಮೆಯನ್ನು ನೋಡಲು ಎರಡು ಸಲ ರಷ್ಯಾದಲ್ಲಿರುವ ಮಾಸ್ಕೋ ಗೆ ಹೋಗಿದ್ದನಂತೆ.ಇಬ್ಬರಿಗೂ ಇಷ್ಟವಾದುದರಿಂದ, ‘ಅನಸ್ತತ’ಭಾರತ ದೇಶಕ್ಕೆ ಬಂದು ನರೇಂದ್ರ ನನ್ನು ಮದುವೆಯಾದಳಂತೆ.
ನರೇಂದ್ರ ತನ್ನ ಹೆಂಡತಿಯನ್ನು ಊರಿಗೆ ಕರೆದುಕೊಂಡು ಬಂದಾಗ ಊರವರೆಲ್ಲರೂ ಅಚ್ಚರಿಗೊಳಗಾದರಂತೆ.ಒಂದಕ್ಷರವನ್ನೂ ಕಲಿಯದ ನರೇಂದ್ರನನ್ನು ,ವಿದ್ಯಾವಂತಳಾದ ಆ ಯುವತಿ ಮದುವೆ ಮಾಡಿಕೊಂಡದ್ದು ದೊಡ್ಡ ವಿಷಯ.ಇವರ ದಾಂಪತ್ಯ ಬಹಳ ಕಾಲ ಉಳಿಯುವುದಿಲ್ಲ ಎಂದರಂತೆ.ಎರಡು ವರ್ಷ ಕಳೆದರೂ ಅವರು ಅನ್ಯೋನ್ಯವಾಗಿದ್ದಾರೆ.ನರೇಂದ್ರ ಈಗ ರಷ್ಯಾದಲ್ಲಿ ನೆಲೆಯೂರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾನಂತೆ. ದೇಶದ ಗಡಿ ದಾಟಿದ ನರೇಂದ್ರನ ಪ್ರೀತಿಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ.


Click Here To Download Kannada AP2TG App From PlayStore!

Share this post

scroll to top