ಈ ಬಿಕ್ಷುಕ ‘ಲಾ’ ಓದುತ್ತಿದ್ದಾನೆ,ಲಾಯರ್ ಆಗಬೇಕೆನ್ನುವುದೇ ಈತನ ಗುರಿಯಂತೆ!

ಒಬ್ಬ ಬಿಕ್ಷುಕ ತಾನು ಬೇಡಿ ಗಳಿಸಿದ ಹಣದಿಂದ ಏನು ಮಾಡುತ್ತಾನೆ.? ಹೆಚ್ಚೆಂದರೆ ಹೊಟ್ಟೆ ತುಂಬಾ ತಿಂದು ಫುಟ್ ಪಾತ್ ನಲ್ಲಿ ಮಲಗುತ್ತಾನೆ.ಇನ್ನೂ ಹೆಚ್ಚೆಂದರೆ ಸಾರಾಯಿ ಕುಡಿದು ತೂರಾಡುತ್ತಾನೆ.ಆದರೆ ಈ ಶಿವ ಸಿಂಗ್ ಎಲ್ಲರಂತ ಬಿಕ್ಷುಕ ಅಲ್ಲ. ಬಿಕ್ಷೆ ಬೇಡುವುದನ್ನು ತನ್ನ ಗುರಿತಲುಪುವ ಸಾಧನವನ್ನಾಗಿ ಉಪಯೋಗಿಸುತ್ತಿದ್ದಾನೆ. 48 ವರ್ಷದ ಶಿವ ಸಿಂಗ್,ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಗಂಗಾಪೂರ್ ನಲ್ಲಿ ಬೆಳಿಗ್ಗೆ ರಸ್ತೆಗಳನ್ನು ಗುಡಿಸುತ್ತಾ, ಜನರ ಬಳಿ ಬಿಕ್ಷೆ ಬೇಡುತ್ತಾನೆ. ಹೀಗೆ ಬಿಕ್ಷೆ ಬೇಡಿ ಸಂಪಾದಿಸಿದ ಹಣದಿಂದ….ರಾಜಸ್ಥಾನ್ ವಿಶ್ವವಿದ್ಯಾನಿಲಯದಲ್ಲಿ,ತನಗಿಷ್ಟವಾದ,ತನ್ನ ಗುರಿಯಾದ ‘ಲಾ'( ಕಾನೂನು) ಕೋರ್ಸ್ ನಲ್ಲಿ ಸೇರಿದ್ದಾನೆ. ಶತಾಯಗತಾಯ ಲಾಯರ್ ಆಗಬೇಕೆಂದು ಶ್ರಮಿಸುತ್ತಿದ್ದಾನೆ.

ಈತನ ದಿನಚರಿಯೂ ಸಹ ಹಾಕಿಕೊಂಡ ಯೋಜನೆಯಂತೇ ನಡೆಯುತ್ತದೆ. ಬೆಳಿಗ್ಗೆ 3 ಗಂಟೆಗೆ ನಿದ್ರೆಯಿಂದೆದ್ದು ರಸ್ತೆ ಗುಡಿಸುತ್ತಾ, ಜಂಕ್ಷನ್ ಗಳಲ್ಲಿ ನಿಲ್ಲುವ ಕಾರುಗಳ ಗಾಜುಗಳನ್ನು ಒರೆಸುತ್ತಾ ಬಿಕ್ಷೆ ಬೇಡುತ್ತಾನೆ.ಮಧ್ಯಾನ್ಹ3 ಗಂಟೆಗೆ ‘ಲಾ'(ಕಾನೂನು) ಕಾಲೇಜಿಗೆ ಹೋಗಿ. ಪ್ರೊಫೆಸರ್ ಹೇಳಿದ್ದನ್ನು ಬರೆದುಕೊಳ್ಳುತ್ತಾನೆ.ಮನೆಗೆ ಬಂದನಂತರ ಪ್ರೊಫೆಸರ್ ಹೇಳಿದ ಪಾಟಗಳನ್ನು ಓದುತ್ತಾನೆ. ಮತ್ತೊಂದು ವಿಷಯವೇನೆಂದರೆ, ಶಿವಸಿಂಗ್ ಒಂದೇ ಒಂದು ದಿನ ಕಾಲೇಜಿಗೆ ಚಕ್ಕರ್ ಹೊಡೆದಿಲ್ಲವಂತೆ. ಕ್ಲಾಸ್ ಇದ್ದರೆ ಕಾಲೇಜಿನಲ್ಲಿ ,ಇಲ್ಲದಿದ್ದರೆ’ಲೈಬ್ರೆರಿ’ಯಲ್ಲಿ ಪುಸ್ತಕಗಳನ್ನು ಓದುವುದರಲ್ಲಿ ಮಗ್ನನಾಗಿರುತ್ತಾನೆ.

ಇಂತಹ ಇಳಿ ವಯಸ್ಸಿನಲ್ಲಿ ವಿದ್ಯೆಕಲಿಯಲು ಹೀಗೆ ಪರಿತಪಿಸುತ್ತಿರುವ ಶಿವ ಸಿಂಗ್ ನ್ಯಾಯ ಶಾಸ್ತ್ರವನ್ನು ಕಲಿತು,ಕೊರ್ಟ್ ನಲ್ಲಿ ಲಾಯರಾಗಿ ಉನ್ನತ ಪದವಿ ಗಳಿಸಿ,ಉನ್ನತ ಸ್ಥಾನದಲ್ಲಿರಬೇಕೆನ್ನುವುದೇ ಈತನ ಗುರಿಯಂತೆ. ಇದಕ್ಕಾಗಿ ಬಿಕ್ಷೆ ಬೇಡುವುದನ್ನೇ ಏಕೆ ಆರಿಸಿಕೊಂಡೆ ಎಂದು ಕೇಳಬೇಕೆನಿಸಿದರೂ, ಗುರಿ ತಲುಪಲು ಆತನಿಗೆ ಗೊತ್ತಿರುವ ಮಾರ್ಗವನ್ನೇ ಆಯ್ಕೆಮಾಡಿಕೊಂಡಿರಬಹುದು ಎನಿಸುತ್ತದೆ. ಯಾಕೆಂದರೆ ಕಳ್ಳತನ ಮಾಡುವುದಕ್ಕಿಂತಲೂ ಬಿಕ್ಷೆ ಬೇಡುವುದು ಉತ್ತಮವಲ್ಲವೇ?.
ಆದಷ್ಟು ಬೇಗ ಶಿವಲಿಂಗ್ ತನ್ನ ಗುರಿ ತಲುಪಲೆಂದು ಹಾರೈಸೋಣ…


Click Here To Download Kannada AP2TG App From PlayStore!

Share this post

scroll to top