ಬೆಳಿಗ್ಗೆ 5 ರಿಂದ 7 ಗಂಟೆಗಳ ನಡುವೆ -ಎಡಗಣ್ಣು ಅದುರಿದರೆ ಏನಾಗುತ್ತೋ ಗೊತ್ತಾ..?

ಹಲ್ಲಿ ಶಾಸ್ತ್ರ, ಹುಟ್ಟಿ ಮಚ್ಚೆ ಶಾಸ್ತ್ರ ಮೊದಲಾದುವುಗಳ ಬಗ್ಗೆ ನಿಮಗೆ ಗೊತ್ತೇ ಇದೆ..! ಇದೇ ರೀತಿ ಮತ್ತೊಂದು ಶಾಸ್ತ್ರವೂ ಸಹ ನಮ್ಮಲ್ಲಿ ಬಳಕೆಯಲ್ಲಿದೆ. ಅದುವೇ ಕಣ್ಣು ಶಾಸ್ತ್ರ. ಒಮ್ಮೊಮ್ಮೆ ನಮ್ಮ ಕಣ್ಣುಗಳು ಅದುರುತ್ತವೆ. ಕೆಲವರು ಇದನ್ನು ಕಣ್ಣುಗಳು ಹಾರುವುದು ಎಂತಲೂ ಕರೆಯತ್ತಾರೆ.ಗಂಡಸರಿಗೆ ಬಲಗಣ್ಣು ಅದುರಿದರೆ ,ಹಾಗೂ ಹೆಂಗಸರಿಗೆ ಎಡಗಣ್ಣು ಅದುರಿದರೆ ಒಳ್ಳೆಯದಾಗುತ್ತದೆಂದು ಹೇಳುತ್ತಾರೆ. ಇದರಲ್ಲಿ ಸತ್ಯ ಎಷ್ಟಿದೆಯೆಂದು ಗೊತ್ತಿಲ್ಲದಿದ್ದರೂ ವಿದೇಶಿಯರೂ ಸಹ ಇದನ್ನು ನಂಬಿ ಆಚರಿಸುತ್ತಾರೆ.
ಅಮೆರಿಕದ ಹವಾಯಿ ರಾಜ್ಯದಲ್ಲಿ ಎಡಗಣ್ಣು ಅದುರಿದರೆ, ಅಪರಿಚಿತ ವ್ಯಕ್ತಿಗಳು ಮನೆಗೆ ಬರುತ್ತಾರೆಂದು ಹೇಳುತ್ತಾರೆ. ಅದೇ ರೀತಿ ಬಲಗಣ್ಣು ಅದುರಿದರೆ, ಆ ಮನೆಯಲ್ಲಿ ಗಂಡು ಮಗು ಜನಿಸುತ್ತದಂತೆ. ಚೀನಾದಲ್ಲಾದರೆ, ಗಂಡಸರಿಗೆ ಎಡಗಣ್ಣು ಅದುರಿದರೆ ,ಹಾಗೂ ಹೆಂಗಸರಿಗೆ ಬಲಗಣ್ಣು ಅದುರಿದರೆ ಒಳ್ಳೆಯದೆಂದು ಹೇಳುತ್ತಾರೆ. ಕಣ್ಣು ಶಾಸ್ತ್ರದಲ್ಲಿ ಚೀನೀಯರು ಒಂದು ಹೆಜ್ಜೆ ಮುಂದಿದ್ದಾರೆ. ಹೇಗೆಂದರೆ…

eye_twitch

ಮೇಲಿನ ಚಾರ್ಟ್ ನೋಡಿದಿರಲ್ಲವೇ. ಬಲ ಹಾಗೂ ಎಡಗಣ್ಣು ಯಾವ ಸಮಯದಲ್ಲಿ ಅದುರಿದರೆ ಏನು ಫಲಿತಾಂಶ ದೊರೆಯುತ್ತದೆಂದು ವಿವರಿಸಿ ಒಂದು ಚಾರ್ಟನ್ನು ರೂಪಿಸಿದ್ದಾರೆ. ಅವುಗಳಲ್ಲಿನ ಅಂಶಗಳು ಹೀಗಿವೆ…

 • ರಾತ್ರಿ 11 ರಿಂದ ಮಧ್ಯರಾತ್ರಿ 1 ಗಂಟೆಯ ವರೆಗೆ- ಎಡಗಣ್ಣು ಅದುರಿದರೆ…ಗಣ್ಯ ವ್ಯಕ್ತಿಯೊಬ್ಬರು ಮನೆಗೆ ಬರುತ್ತಾರೆ. ಬಲಗಣ್ಣು ಅದುರಿದರೆ…ಪಾರ್ಟೀಗೆ ಆಹ್ವಾನ ಬರುತ್ತದಂತೆ.
 • ಮಧ್ಯರಾತ್ರಿ 1 ರಿಂದ ಬೆಳಿಗ್ಗೆ 3 ಗಂಟೆಯ ಒಳಗೆ: ಎಡಗಣ್ಣು ಅದುರಿದರೆ…ಗೊಂದಲವನ್ನು ಉಂಟು ಮಾಡುವ ಘಟನೆ ನಡೆಯುತ್ತದಂತೆ.ಬಲಗಣ್ಣು ಅದುರಿದರೆ…ನಿಮ್ಮ ಬಗ್ಗೆ ಯಾರೋ ಆಲೋಚಿಸುತ್ತಿರುತ್ತಾರೆ.
 • ಬೆಳಿಗ್ಗೆ 3 ರಿಂದ 5 ಗಂಟೆಯ ನಡುವೆ: ಎಡಗಣ್ಣು ಅದುರಿದರೆ…ಹತ್ತಿರದ ಗೆಳೆಯನೊಬ್ಬ ಮನೆಗೆ ಬರುತ್ತಾನೆ. ಬಲಗಣ್ಣು ಅದುರಿದರೆ…ಸಂತೋಷಕರವಾದ ಸಂದರ್ಭಕ್ಕಾಗಿ ಕಾಯುತ್ತಿರುತ್ತೀರ.

eye

 • ಬೆಳಿಗ್ಗೆ 5 ರಿಂದ 7 ಗಂಟೆಯ ನಡುವೆ : ಎಡಗಣ್ಣು ಅದುರಿದರೆ…ಒಬ್ಬ ಮುಖ್ಯವಾದ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಬಲಗಣ್ಣು ಅದುರಿದರೆ…ನೀವು ಅಂದುಕೊಂಡದ್ದು ಅಂದುಕೊಂಡ ಹಾಗೆ ಜರುಗುತ್ತದೆ.
 • ಬೆಳಿಗ್ಗೆ 7 ರಿಂದ 9 ಗಂಟೆಯ ನಡುವೆ : ಎಡಗಣ್ಣು ಅದುರಿದರೆ… ದೂರದ ಮಿತ್ರನೊಬ್ಬ ನಿಮ್ಮನ್ನು ಭೇಟಿಯಾಗಲು ಬರುತ್ತಾನೆ. ಬಲಗಣ್ಣು ಅದುರಿದರೆ… ಯಾವುದೋ ಒಂದು ರೀತಿಯಲ್ಲಿ ನಿಮ್ಮ ದೇಹಕ್ಕೆ ಗಾಯವಾಗುತ್ತದೆ.
 • ಬೆಳಿಗ್ಗೆ 9 ರಿಂದ 11 ಗಂಟೆ ನಡುವೆ :ಎಡಗಣ್ಣು ಅದುರಿದರೆ…ಪಾರ್ಟಿಯಲ್ಲಿ ಭಾಗವಹಿಸುತ್ತೀರಿ. ಬಲಗಣ್ಣು ಅದುರಿದರೆ… ಯರೊಂದಿಗಾದರೂ ಜಗಳವಾಡುತ್ತೀರಿ.
 • ಬೆಳಿಗ್ಗೆ 11 ರಿಂದ 1 ಗಂಟೆ ನಡುವೆ : ಎಡಗಣ್ಣು ಅದುರಿದರೆ…ಒಳ್ಳೆಯ ಪಾರ್ಟಿಯಲ್ಲಿ ಮಜವನ್ನು ಅನುಭವಿಸುತ್ತೀರಿ. ಬಲಗಣ್ಣು ಅದುರಿದರೆ…ಯಾವುದಾದರೂ ಒಂದು ತೊಂದರೆ ಉಂಟಾಗುತ್ತದೆ.
 • ಮಧ್ಯಾನ್ಹ 1 ರಿಂದ 3 ಗಂಟೆ ನಡುವೆ: ಎಡಗಣ್ಣು ಅದುರಿದರೆ… ನೀವು ಅಂದುಕೊಂಡ ಪ್ರಕಾರ ನಿಮ್ಮ ಯೋಜನೆಗಳು ನೆರವೇರುತ್ತವೆ. ಬಲಗಣ್ಣು ಅದುರಿದರೆ…ನಿಮ್ಮ ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ ಉಂಟಾಗುತ್ತದೆ.

eye

 • ಮಧ್ಯಾನ್ಹ 3 ರಿಂದ ಸಂಜೆ 5 ಗಂಟೆಯ ನಡುವೆ : ಎಡಗಣ್ಣು ಅದುರಿದರೆ…ಸಧ್ಯದಲ್ಲೇ ನೀವು ಹಣವನ್ನು ಕಳೆದುಕೊಳ್ಳುತ್ತೀರಿ. ಬಲಗಣ್ಣು ಆದರೆ…ನಿಮ್ಮನ್ನು ಪ್ರೀತಿಸುತ್ತಿರುವವರ ಬಗ್ಗೆ ಆಲೋಚಿಸುತ್ತೀರಿ.
 • ಸಂಜೆ 5 ರಿಂದ ರಾತ್ರಿ 7 ಗಂಟೆಯ ನಡುವೆ : ಎಡಗಣ್ಣು ಅದುರಿದರೆ…ಯೋರೋ ಒಬ್ಬ ವ್ಯಕ್ತಿ ನಿಮ್ಮನ್ನು ಭೇಟಿಯಾಗಲು ಬರುತ್ತಾರೆ. ಬಲಗಣ್ಣು ಅದುರಿದರೆ…ದೂರದಲ್ಲಿರುವವರನ್ನು ಪರಾಮರ್ಷಿಸಲು ಹೋಗುತ್ತೀರಿ.
 • ರಾತ್ರಿ 9 ರಿಂದ 11 ಗಂಟೆಯ ನಡುವೆ : ಎಡಗಣ್ಣು ಅದುರಿದರೆ..ಯಾರೋ ಒಬ್ಬ ಮಿತ್ರ ನಿಮ್ಮನ್ನು ಭೇಟಿಮಾಡಲು ಬರುತ್ತಾನೆ. ಬಲಗಣ್ಣು ಅದುರಿದರೆ..ಕೋರ್ಟ್ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳುತ್ತೀರಿ.

ಆದರೆ… ಕಣ್ಣು ಶಾಸ್ತ್ರದ ಪ್ರಕಾರ ಯಾರು ಏನೆ ಹೇಳಿದರೂ ಯಾವಾಗಲೂ ಕಣ್ಣುಗಳು ಅದುರುವುದು ಒಳ್ಳೆಯ ಲಕ್ಷಣವಲ್ಲವೆಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ಒಂದೇ ಸಮನೆ ಮೂರುದಿನಗಳ ಕಾಲ ಕಣ್ಣು ಅದುರುತ್ತಿದ್ದರೆ…ವೈದ್ಯಶಾಸ್ತ್ರದ ಪ್ರಕಾರ…’ಮಯೋಕೈಮಿಯ’ ಎಂಬ ರೋಗವಿರುವುದು ಖಚಿತ. ಮೆಗ್ನೀಷಿಯಂ ಮಿನರಲ್ ಲೋಪದಿಂದ ಈ ವ್ಯಾಧಿ ಬರುತ್ತದೆ. ಸರಿಯಾದ ಆಹಾರ ಸೇವಿಸದರೆ ಅದರ ತೀವ್ರತೆ ಕಡಿಮೆಯಾಗುತ್ತದೆ.ಒಮ್ಮೊಮ್ಮೆ ನಿದ್ರಾ ಹೀನತೆ, ಕಲುಷಿತ ವಾತಾವರಣದಿಂದಲೂ ಕಣ್ಣುಗಳು ಅದುರುತ್ತವೆ. ಆದುದರಿಂದ ಒಂದಕ್ಕಿಂತಲೂ ಹೆಚ್ಚಿನ ದಿನಗಳ ಕಾಲ ನಿರಂತರವಾಗಿ ಕಣ್ಣುಗಳು ಅದುರುತ್ತಿದ್ದರೆ ಒಡನೆಯೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದಿದ್ದರೆ ಇತರೇ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ.

 


Click Here To Download Kannada AP2TG App From PlayStore!