ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುವುದರಿಂದಾಗುವ ಉಪಯೋಗಗಳು ತಿಳಿದರೆ ಬ್ರಷ್ ಬಳಸುವುದನ್ನು ನಿಲ್ಲಿಸುತ್ತೀರ…!

ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುವುದು ಇಂದಿನ ದಿನಗಳಲ್ಲಿ ಆಗದ ಕೆಲಸ. ಆದರೆ ಇದನ್ನು ತಿಳಿದುಕೊಂಡರೆ ನೀವು ಹೇಗಾದರೂ ಮಾಡಿ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜಲು ಪ್ರಾರಂಭಿಸುವಿರಿ. ಆದರೆ ಇಂದು ಪಟ್ಟಣ ಪ್ರದೇಶಗಳಲ್ಲಿ ಬೇವಿ ಕಡ್ಡಿ ದೊರಕುವುದು ಕಷ್ಟ ‌. ಹಾಗಾಗಿ ತಿಂಗಳಿಗೆ ಕನಿಷ್ಠ ಒಮ್ಮೆಯಾದರೂ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುವುದು ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಬೇವಿನಲ್ಲಿ ಸೂಕ್ಷ್ಮ ಜೀವಿಗಳನ್ನು ಕೊಲ್ಲುವ ಯಾಂಟಿ ಬ್ಯಾಕ್ಟೀರಿಯ, ಯಾಂಟಿ ವೈರಸ್ ಗುಣಗಳು ಅಧಿಕ ಪ್ರಮಾಣದಲ್ಲಿವೆ. ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜಿದರೆ ಬಾಯಿಯಲ್ಲಿರುವ ಕ್ರಿಮಿಗಳು ನಿರ್ಮೂಲನೆಗೊಳ್ಳುತ್ತವೆ. ಹಲ್ಲುಗಳು ದೃಢವಾಗುಂತೆ ಮಾಡುವ ಶಕ್ತಿ ಬೇವಿನ ಕಡ್ಡಿಗಿದೆ. ದಂತ ಸಮಸ್ಯೆಗಳು ಕಡಿಮೆ ಮಾಡುತ್ತದೆ.

ಬೇವಿನ ಕಡ್ಡಿಯನ್ನು ಕಚ್ಚುವಾಗ ಅದರಿಂದ ಬರುವ ದ್ರವಪದಾರ್ಥ ದಂತ ಕ್ಷಯವನ್ನು ನಿವಾರಿಸುತ್ತದೆ. ಭವಿಷ್ಯದಲ್ಲಿ ಸಹ ದಂತಕ್ಷಯ ಸಮಸ್ಯೆಯಿರುವುದಿಲ್ಲ. ಬಾಯಿಯಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಬಾಯಿ ದುರ್ವಾಸನೆ ಬರುತ್ತದೆ. ಇದನ್ನು ನಿವಾರಿಸುವಲ್ಲಿ ಬೇವು ಅದ್ಭುತವಾಗಿ ಕೆಲಸ ಮಾಡುತ್ತದೆ. ಹಾಗಾಗ ಬೇವಿನ ಕಡ್ಡಿಯಲ್ಲಿ ಹುಲ್ಲುಜ್ಜಿದರೆ ಬಾಯಿ ದುರ್ವಾಸನೆ ಬರುವುದಿಲ್ಲ.

ಹಿಂದಿನ ಕಾಲದಲ್ಲಿ ಎಲ್ಲರೂ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುತ್ತಿದ್ದರು. ಹಳ್ಳಿಗಳಲ್ಲಿ ಇಂದಿಗೂ ಕೆಲವರು ಇಂದಿಗೂ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುವುದನ್ನು ನೀವು ಗಮನಿಸಿರಬಹುದು. ಪಟ್ಟಣಗಳಲ್ಲಿ ಕೆಲವುಕಡೆ ಬೇವಿನ ಕಡ್ಡಿ ಸಿಕ್ಕರೂ ಅವುಗಳನ್ನು ತೆಗೆದುಕೊಂಡು ಬಂದು ಹಲ್ಲುಜ್ಜುವ ತಾಳ್ಮೆ ನಮ್ಮ ಜನರಲ್ಲಿ ಇಲ್ಲ. ಒಮ್ಮೊಮ್ಮೆ ಬೇವಿನ ಕಡ್ಡಿಗೆ ಪೇಸ್ಟ್ ಹಾಕಿಕೊಂಡು ಹಲ್ಲು ಉಜ್ಜುವ ಮಹಾನ್ ವ್ಯಕ್ತಿಗಳು ಸಹ ಇದ್ದಾರೆ. ಹಾಗಾಗಿ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜಲು ತಜ್ಞರು ಸೂಚಿಸುತ್ತಾರೆ. ಕಳೆದುಕೊಳ್ಳುವುದು ಏನಿದೆ..? ಗಟ್ಟಿಯಾದ ಹಲ್ಲುಗಳಿಗಾಗಿ ಟ್ರೈ ಮಾಡೋಣವೇ…


Click Here To Download Kannada AP2TG App From PlayStore!

Share this post

scroll to top