ಒಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಯುವಕ ಈಗ ಕೇಂಬ್ರಿಡ್ಜ್ ಯೂನಿವರ್ಸಿಟಿಯ ಪದವೀಧರ…!

ಒಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಯುವಕ ಈಗ ಕೇಂಬ್ರಿಡ್ಜ್ ಯೂನಿವರ್ಸಿಟಿಯ ಪದವೀಧರ. ಯಾವುದೇ ಕಾರ್ಯಕ್ಕೆ ಪ್ರೋತ್ಸಾಹ ನೀಡುವವರು ಇದ್ದು,ಮುನ್ನಡೆಸುವವರು ಇದ್ದರೆ, ಎಂತಹ ಸ್ಥಿತಿಯಲ್ಲಿ ಇದ್ದರೂ ಅದ್ಭುತಗಳನ್ನು ಮಾಡಿ ತೋರಿಸುತ್ತಾರೆ. ಹಾಗೆಯೇ ಸಾಧಿಸಿ ತೋರಿಸಿದ್ದಾನೆ ಈ ಯುವಕ. ಚಿಕ್ಕ ವಯಸ್ಸಿನಲ್ಲಿಯೇ ಭಿಕ್ಷೆ ಬೇಡುತ್ತಿದ್ದನು. ಆತನೆ ಇಂದು ಒಂದು ಅತ್ಯುನ್ನತ ಯುನಿನರ್ಸಿಟಿಯಲ್ಲಿ ಪದವೀದರನಾಗಿ ಎಲ್ಲರನ್ನೂ ಬೆರಗು ಗೊಳಿಸಿದ್ದಾನೆ. ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಇರಬೇಕಾಗಲೀ ತಮ್ಮಂತಹವರು ಪ್ರತಿಭೆ ತೋರಿಸುವವರು ತುಂಬಾ ಜನರು ಇರುತ್ತಾರೆಂದು ತೋರಿಸಿದ್ದಾನೆ ಆ ಯುವಕ.

ಆತನ ಹೆಸರು ಜಯವೇಲು, ಇರುವುದು ಆಂಧ್ರದ ನೆಲ್ಲೂರು ಜಿಲ್ಲೆ, ತಂದೆ ಇಲ್ಲ ತಾಯಿ ಮಾತ್ರ ಇದ್ದಾಳೆ. ಆಗ ಇನ್ನೂ ಜಯವೇಲು ಚಿಕ್ಕ ಹುಡುಗನಾದ್ದರಿಂದ ಆಂಧ್ರಪ್ರದೇಶದ ರಾಜ್ಯದಲ್ಲಿ ಒಮ್ಮೆ ಬಂದ ಬರಗಾಲದ ಕಾರಣ ಅವರಿಗೆ ತಿನ್ನಲು ಆಹಾರವೂ ಇಲ್ಲದಾಯಿತ್ತು. ಇದರಿಂದ ಆ ತಾಯಿ ಮಗ ಇಬ್ಬರೂ ಸಮಿಪದಲ್ಲಿಯೇ ಇದ್ದ ನಗರಕ್ಕೆ ವಲಸೆ ಹೋದರು. ಅಲ್ಲಿ ಏನಾದರೂ ಕೆಲಸ ಸಿಕ್ಕಿದರೆ ಹೊಟ್ಟೆ ತುಂಬಿಸಿಕೊಳ್ಳಬಹುದೆಂದುಕೊಂಡರು. ಅವರ ಆಸೆ ನಿರಾಸೆಯಾಯಿತು. ಯಾವಕೆಲಸವೂ ಸಿಗಲಿಲ್ಲವಾದ್ದರಿಂದ ಅವರ ಜೀವನ ಇನ್ನೂ ಕಷ್ಟವಾಯಿತು. ಇದರಿಂದ ಜಯವೇಲುನನ್ನು ಅವರ ತಾಯಿ ಭಿಕ್ಷೆಬೇಡಲು ಕಳುಹಿಸಿದಳು. ಈ ಹೀಗೆ ಜಯವೇಲು ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತಾ ನಾಲ್ಕಾರು ರೂಪಾಯಿ ತರುತ್ತಿದ್ದನು. ಆದರೆ ಅವುಗಳನ್ನೂ ತಾಯಿ ಮಧ್ಯಪಾನ ಮಾಡುವುದಕ್ಕಾಗಿ ಖರ್ಚು ಮಾಡುತ್ತಿದ್ದಳು. ಇದರಿಂದ ಜಯವೇಲುಗೆ ಊಟವು ಸರಿಯಾಗಿ ದೊರೆಯುತ್ತಿರಲಿಲ್ಲ. ಅವನು ತುಂಬಾ ಅಳುತ್ತಿದ್ದನು.

ಹೀಗೆ ಒಂದು ಸಂದರ್ಭದಲ್ಲಿ ಚೆನೈನಲ್ಲಿ ನಿವಾಸಿಗಳಾದಂತಹ ಮುತ್ತುರಾಮನ್ ಎಂಬ ದಂಪತಿಗಳು ಭಿಕ್ಷೆ ಬೇಡುವವರ ಜೀವನದ ಮೇಲೆ ಡಾಕ್ಯುಮೆಂಟರಿ ಮಾಡಬೇಕೆಂದು ಹೊರಟು ಚೆನೈ ನಗರದ ರಸ್ತೆಗಳಲ್ಲಿ ಭಿಕ್ಷುಕರನು ಹುಡುಕುತ್ತಾ ಸಾಗಿದರು. ಆಗ ಜಯವೇಲು ಅವರ ಕಣ್ಣಗೆ ಬಿದ್ದನು. ಊಟ ಸರಿಯಾಗಿ ದೊರೆಯದೆ ಅಳುತ್ತಿದ್ದ ಜಯವೇಲನನ್ನು ಅವರು ಹತ್ತಿರ ಕರೆದುಕೊಂಡು ಆದರಿಸಿದರು. ತಾವು ನಿರ್ವಹಿಸುತ್ತಿದ್ದ ಸೆಲ್ಫ ‍ಟ್ರಸ್ಟ್ ಎಂಬ ಸ್ವಯಂಸೇವ ಸಂಸ್ಥೆಯ ಆಶ್ರಯದಲ್ಲಿ ಜಯವೇಲನನ್ನು ರಕ್ಷಿಸಿ ಆತನಿಗೆ ವಿಧ್ಯೆಬುದ್ದಿ ಕಲಿಸಿದರು. ಒಳ್ಳೆಯ ಶಾಲೆಗೆ ಸೇರಿಸಿದರು. ಒಳ್ಳೆಯ ಊಟವೂ ಸಹಾ ಕೊಡುತ್ತಿದ್ದರು. ಇದರಿಂದ ಜಯವೇಲು ಚೆನೈನಲ್ಲಿ ಹತ್ತನೇ ತರಗತಿಯವರೆಗೂ ಓದಿದನು. ಯಾವಾಗಲೂ ಓದಿನಲ್ಲಿ ಮುಂದೆ ಇರುತ್ತಿದ್ದನು. ಅಲ್ಲದೆ ಆತನ ಪ್ರತಿಭೆಯನ್ನು ಗುರ್ತಿಸಿದ ಮುತ್ತುರಾಮನ್ ದಂಪತಿಗಳು ಆತನನ್ನು ಪ್ರಖ್ಯಾತ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಸೇರಿಸಿದರು. ಇದರಿಂದ ಆತನು ಅಲ್ಲೇ ತನ್ನ ಡಿಗ್ರಿ ಯಶಸ್ವಿಯಾಗಿ ಪೂರ್ತಿ ಮಾಡಿದನು. ನಂತರ ಮತ್ತೊಂದು ಪ್ರಮುಖ ಯೂನಿವರ್ಸಿಟಿಯಲ್ಲಿ ಈಗ ಪಿ.ಜಿ. ಓದುತ್ತಿದ್ದಾನೆ.

ಇದೆಲ್ಲಾ ಉಮಾ ಮುತ್ತುರಾಮನ್ ದಂಪತಿಗಳು ನೀಡಿದ ಕೃಪೆ ಹಿಂದೆಜ್ಜೆ ಕಷ್ಟವನ್ನು, ಪ್ರೋತ್ಸಾಹವನ್ನು ಜಯವೇಲು ಸರಿಯಾಗಿ ಬಳಸಿಕೊಂಡನು. ಬಡತನದಿಂದ ನರಳುತ್ತಿರುವವರೂ ಪ್ರತಿಭೆಯನ್ನು ವ್ಯಕ್ತಪಡಿಸವ ಸಾಮರ್ಥ್ಯ ಇರುತ್ತದೆಂದು ನಿರೂಪಿಸಿದ್ದಾನೆ. ಪ್ರೋತ್ಸಾಹ ಕೊಟ್ಟರೆ ಇನ್ನೂ ಉನ್ನತವಾದ ವಿದ್ಯಾಭ್ಯಾಸವನ್ನು ಮಾಡಲು ಹಿಂದೆಜ್ಜೆ ಹಾಕುವುದಿಲ್ಲವೆಂದು ಹೇಳುತ್ತಿದ್ದಾನೆ. ಆದರೆ ಒಬ್ಬ ಜಯವೇಲು ಮಾತ್ರವಲ್ಲ, ಇನ್ನೂ ಇಂತಹ ಅನೇಕ ವಿದ್ಯಾ ಕುಸುಮಗಳು ನಮ್ಮ ಸಮಾಜದಲ್ಲಿ ಜನರಿದ್ದಾರೆ. ಅವರೆಲ್ಲರನ್ನೂ, ಗುರುತಿಸಿ ಪ್ರೋತ್ಸಾಹಿಸಿದರೆ ಆಗ ದೇಶ ಇನ್ನೂ ಪ್ರಗತಿ ಪಥದಲ್ಲಿ ಮುಂದೆ ಸಾಗುತ್ತದೆ ಅಲ್ವಾ…?!


Click Here To Download Kannada AP2TG App From PlayStore!

Share this post

scroll to top