ಹಾಗಿದ್ದ ಮಗು…ಹೀಗಾಯ್ತು. ಎಲ್ಲಾ ಅಮ್ಮ ಮಾಡಿದ ಜಾದೂ.! ಆ ಜಾದೂ ಏನೆಂದು ಗೊತ್ತಾ?

ಚೆಲುವು, ಆತ್ಮವಿಶ್ವಾಸ ಅವಳಿ ಮಕ್ಕಳೆಂದೇ ಹೇಳಬಹುದು. ಅಂದವಾಗಿರುವವರೆಲ್ಲರಿಗೂ ಆತ್ಮವಿಶ್ವಾಸ ಇರಲೇಬೇಕೆಂದೇನಿಲ್ಲ. ಅಂದವಾಗಿಲ್ಲವೆಂದೋ, ಕಪ್ಪಾಗಿದ್ದೀವೆಂದು ಕೊರಗುತ್ತಿರುವವರನ್ನು ನಾವು ನೋಡುತ್ತಿರುತ್ತೇವೆ. ಅಂದವಾಗಿ ಕಾಣಲು ಹಲವು ರೀತಿಯ ಸೌಂದರ್ಯವರ್ಧಕಗಳನ್ನು ಉಪಯೋಗಿಸುತ್ತಾ, ಬ್ಯೂಟೀ ಪಾರ್ಲರ್ ಗಳಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ವೆಚ್ಚಮಾಡುತ್ತಿರುತ್ತಾರೆ. ಇದಕ್ಕೆ ಮಕ್ಕಳೂ ಹೊರತಾಗಿಲ್ಲ. ಮಕ್ಕಳಿಗೂ ಸಹ ಅನೇಕ ರೀತಿಯ ಸೋಪುಗಳು, ಪೌಡರ್ ಗಳು,ಕ್ರೀಂಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ರಾಸಾಯನಿಕ ಪದಾರ್ಥಗಳಿಂದ ತಯಾರಿಸಲಾದ ಕ್ರೀಂಗಳನ್ನು ಉಪಯೋಗಿಸುವುದರಿಂದ, ಮಕ್ಕಳ ಸೂಕ್ಷ್ಮ ಚರ್ಮ ಹಾಳಾಗುವ ಸಂಭವವಿದೆ. ಕೇವಲ ನಮ್ಮ ಮನೆಗಳಲ್ಲೇ ಬಹಳ ಸುಲಭವಾಗಿ ತಯಾರಿಸಬಹುದಾದ ಚರ್ಮದ ಬಣ್ಣವನ್ನು ತಿಳಿಗೊಳಿಸುವ ಸಲಹೆ ನಮ್ಮಲ್ಲಿದೆ. ಆ ಸಲಹೆಯಾವುದು, ತಯಾರಿಸುವ ವಿಧಾನ, ಬೇಕಾದ ವಸ್ತುಗಳು ಹಾಗೂ ಹೇಗೆ ಉಪಯೋಗಿಸಬೇಕೆನ್ನುವ ವಿವರಗಳನ್ನು ತಿಳಿಯೋಣ ಬನ್ನಿ…

ಹೆಸರು ಕಾಳು,ಅರಶಿನ, ಹಾಲಿನ ಕೆನೆ…
ಹೆಸರು ಕಾಳುಗಳನ್ನು ಹಿಟ್ಟುಮಾಡಿಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಚಮಚ ಹೆಸರು ಹಿಟ್ಟು, ಸ್ವಲ್ಪ ಅರಶಿನ ,ಬೇಕಾಗುವಷ್ಟು ಹಾಲಿನ ಕೆನೆ ಈ ಮೂರನ್ನೂ ಚೆನ್ನಾಗಿ ಕಲೆಸಿಕೊಳ್ಳಬೇಕು. ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವುದಕ್ಕೆ ಮೊದಲು ಈ ಮಿಶ್ರಣವನ್ನು ಹಚ್ಚಿ ಸ್ನಾನ ಮಾಡಿಸಬೇಕು… ಇದು ಚರ್ಮದ ಬಣ್ಣದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಇದರಲ್ಲಿ ಯಾವುದೇ ರಾಸಾಯನಿಕಗಳು ಇಲ್ಲದಿರುವುದರಿಂದ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ನಮ್ಮ ಮಕ್ಕಳಿಗೆ ನಾವೇ ತಯಾರಿಸಿದ್ದೇವೆಂಬ ತೃಪ್ತಿ ನಮ್ಮದಾಗುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ. ಪರಿಣಾಮ ನೋಡಿ ನೀವೇ ಅಚ್ಚರಿಗೊಳ್ಳುತ್ತೀರ.
ನಾನು ನನ್ನ ಮಗುವಿನ ಮೇಲೆ ಇದನ್ನು ಪ್ರಯೋಗಿಸಿದ್ದೇನೆ. ಕೆಲಸ ಮಾಡುತ್ತದೆ. ವ್ಯತ್ಯಾಸವನ್ನು ಈ ಫೋಟೊಗಳಲ್ಲಿ ಕಾಣಬಹುದು.


Click Here To Download Kannada AP2TG App From PlayStore!