ಕೃಷ್ಣ ವರ್ಣದವಳೆಂದು ಆ ಯುವತಿಯನ್ನು ಹೀಯಾಳಿಸಿದರು… ಆಕೆ ಈಗ ಸೂಪರ್ ಸ್ಟಾರ್.!

ಕಪ್ಪು ಬಣ್ಣದವರನ್ನು ಜನ ಹೇಗೆ ನೋಡುತ್ತಾರೆಂದು ಎಲ್ಲರಿಗೂ ತಿಳಿದದ್ದೇ. ಅವರ ಎದುರಿಗೆ ಮಾತನಾಡಿಕೊಳ್ಳದಿದ್ದರೂ, ಅವರಿಲ್ಲದಾಗ, ಬಣ್ಣದ ಬಗ್ಗೆ ಹೀಯಾಳಿಸುವುದು,ನಗಾಡುವುದು, ಜೋಕುಗಳನ್ನು ಹೇಳುವುದು ಹೀಗೆ ಸಾಧ್ಯವಾಷ್ಟು ಕೀಳು ಅಭಿರುಚಿ ಪ್ರದರ್ಶಿಸಿ ಆನಂದಿಸುತ್ತಾರೆ. ಕೆಲವು ಸಂದರ್ಭಗಳಲ್ಲಂತೂ, ಎದುರಿಗೇ ಮಾತನಾಡಿ ಹೀಯಾಳಿಸುತ್ತಾರೆ. ಇದರಿಂದಾಗಿ ಹೆಚ್ಚಿನವರು ಮಾನಸಿಕ ಕ್ಷೊಭೆಗೆ ಗುರಿಯಾಗುತ್ತಾರೆ. ತಾವು ಹಾಗೆ ಜನಿಸಿದ್ದಕ್ಕೆ ತಮ್ಮನ್ನು ತಾವೆ ನಿಂದಿಸಿಕೊಳ್ಳುತ್ತಾರೆ. ಆದರೆ, ಆ ಯುವತಿ ಮಾತ್ರ ಹಾಗೆ ಮಾಡಲೇಯಿಲ್ಲ. ತನ್ನ ಬಣ್ಣದ ಬಗ್ಗೆ ಜನರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಪ್ಪಗಿದ್ದಾಳೆಂದು ಹೀಯಾಳಿಸಿದರೂ ವ್ಯಥೆಪಡಲಿಲ್ಲ. ಅಭಿಪ್ರಾಯಗಳನ್ನೇ ತಮಾಷೆಯಾಗಿ ತೆಗೆದುಕೊಂಡು, ನಾನು ಎಲ್ಲರಂತಲ್ಲ ಎಂದು ತನ್ನ ಪ್ರತಿಭೆಯನ್ನು ಸಾಧನೆಗಳ ಮೂಲಕ ತೋರಿಸುತ್ತೇನೆಂದು ಹೇಳಿದಳು. ಇಷ್ಟಕ್ಕೂ ಆಕೆಯ ಸಾಧನೆಯೇನು…?


ಆಕೆಯ ಹೆಸರು ‘ಖೌಡಿಯಾ ಡಿಯೋಪ್’.  ವಯಸ್ಸು 19 ವರ್ಷ, ದಕ್ಷಿಣ ಆಫ್ರಿಕಾದ ಈಕೆ ಪ್ರಸ್ತುತ ಪ್ಯಾರಿಸ್ ನಲ್ಲಿರುತ್ತಾರೆ. ಈಕೆಯ ಕಡುಕಪ್ಪು ಬಣ್ಣದ ದೇಹದಿಂದಾಗಿ ಚಿಕ್ಕಂದಿನಿಂದಲೂ ಅವಮಾಕ್ಕೀಡಾಗಿದ್ದಳು,  ಎಲ್ಲರೂ ಡಿಯೋಪ್ಳ ಬಣ್ಣವನ್ನು ಹೀಯಾಳಿಸುತ್ತಿದ್ದರು. ‘ಡಾಟರ್ ಆಫ್ ನೈಟ್’ ( ರಾತಿಯ ಮಗಳು) ಎಂದು ಹೀಯಾಳಿಸುತ್ತಿದ್ದರು. ಕೆಲವರಂತೂ ಮುಖದಮೇಲೆ ಹೊಡೆದಂಗೆ ಹೇಳುತ್ತಿದ್ದರು. ಆದರೂ ಇವುಗಳನ್ನು ಡಿಯೋಪ್ ಲೆಕ್ಕಿಸುತ್ತಿರಲಿಲ್ಲ.

ಡಿಯೋಪ್ 17 ವರ್ಷದವಳಾಗಿದ್ದಾಗ ಮಾಡೆಲಿಂಗ್ ಕಂಪೆನಿಯೊಂದು ತಮ್ಮ ಕಂಪೆನಿಯ ರೂಪಧರ್ಶಿಯಾಗಿ ಆರಿಸಿಕೊಂಡರು. ಅಂದಿನಿಂದ ಆಕೆಯ ಅದೃಷ್ಟ ಖುಲಾಯಿಸಿತು. ಕೇವಲ ಎರಡು ವರ್ಷಗಳ ಅವಧಿಯಲ್ಲೇ ಡಿಯೋಪ್ ರೂಪಧರ್ಶಿಯಾಗಿ ಒಳ್ಳೆಯ ಹೆಸರು ಗಳಿಸಿದಳು. ಸಾಮಾಜಿಕ ಜಾಲ ತಣಗಳಲ್ಲಿ ಲಕ್ಷಾಂತರ ಹಿಂಬಾಲಕರು ಹುಟ್ಟಿಕೊಂಡರು. ಇನ್ಸ್ಟಾ ಗ್ರಾಮ್ ನಲ್ಲಂತೂ 2.35 ಲಕ್ಷ ಮಂದಿ ಹಿಂಬಾಲಕರಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಡಿಯೋಪ್ ಗಿರುವ ಶಕ್ತಿಯೇನೆಂದು ಇದರಿಂದ ತಿಳಿಯುತ್ತದೆ. ಆಕೆಯ ನಿಜವಾದ ಸೌಂಧರ್ಯ ಯಾವುದೋ…! ಬಹಳಷ್ಟು ಮಂದಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಒಳ್ಳೆಯ ಹೆಸರು ಗಳಿಸಬೇಕೆಂದು ಪ್ರೋತ್ಸಾಹಿಸುತ್ತಿದ್ದಾರೆ. ಅಂದು ಡಿಯೋಪ್ ಳನ್ನು ‘ಡಾಟರ್ ಆಫ್ ನೈಟ್ ‘ ಎಂದು ಕರೆಯುತ್ತಿದ್ದ ಜನವೇ ಈಗ ‘ಮೆಲಾನಿನ್ ಗಾಡೆಸ್’ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಪ್ರತಿಭೆಗೆ ವರ್ಣ,ಮತಗಳ ಭೇದವಿಲ್ಲದೆ ಸ್ವಯಂ ಪ್ರತಿಭೆಯಿಂದಯಾವುದೇ ಕ್ಷೇತ್ರದಲ್ಲಾದರೂ ಉನ್ನತ ಮಟ್ಟಕ್ಕೇರಬಹುದು ಎಂಬುದಕ್ಕೆ ಸಾಕ್ಷಿ ‘ಖೌಡಿಯಾ ಡಿಯೋಪ್’.

‘ಖೌಡಿಯಾ ಡಿಯೋಪ್’ ವೀಡಿಯೋವನ್ನು ಕೆಳಗೆ ವೀಕ್ಷಿಸಿಸಬಹುದು…!


Click Here To Download Kannada AP2TG App From PlayStore!