ಬೊಕ್ಕತಲೆ ಸಮಸ್ಯೆಗೆ ಇಲ್ಲಿದೆ ಪರಿಹಾರ… ಮತ್ತೆ ಕೂದಲು ಬೆಳೆಯುವಂತೆ ಮಾಡುವ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ವಿಧಾನ…!

ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ಮಾಡಿಯೇ ಇನ್ನಷ್ಟು ಕೂದಲು ಉದುರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ ಎಂಬುದೂ ಸತ್ಯ. ಹೆಚ್ಚಿನ ಪ್ರಮಾಣದಲ್ಲಿ ಟೀ, ಕಾಫಿ, ಆಲ್ಕೋಹಾಲ್, ಮಾಂಸ ಸೇವನೆ, ಸಿಗರೇಟು ಸೇದುವುದು, ಹೆಚ್ಚು ಜಂಕ್ ಫುಡ್ ಆಹಾರ ವ್ಯವಸ್ಥೆಗೇ ಮಾರು ಹೋಗಿರುವುದು ಕೂಡಾ ಕೂದಲುದುರುವಿಕೆಗೆ ಕಾರಣ. ಇದಲ್ಲದೆ ಒತ್ತಡ ಕಡಿಮೆ ಮಾಡಲು ಅನಾವಶ್ಯಕವಾಗಿ ಮಾತ್ರೆ ಸೇವನೆ, ಬಿಪಿ, ಮಾನಸಿಕ ಒತ್ತಡ, ಸುಸ್ತು ಮತ್ತಿತರ ಕಾಯಿಲೆಗಳಿಗಾಗಿ ಹೆಚ್ಚು ಮಾತ್ರೆ ಸೇವಿಸುವುದರಿಂದಲೂ ಕೂದಲು ಉದುರಬಹುದು. ಹಾಗಾದರೆ ಕೂದಲನ್ನು ಹೇಗೆ ಸಂರಕ್ಷಿಸಬಹುದು ಅಥವಾ ಬಕ್ಕ (ಬೋಳು)ತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ ನಿಮ್ಮಲ್ಲೇ ಎದ್ದ ಪ್ರಶ್ನೆಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಪರಿಹಾರ ಇಲ್ಲಿವೆ.

ಈರುಳ್ಳಿ (onion) ರಸ ಒಂದು ಚಮಚ + ಮೂಲಂಗಿ ರಸ ಒಂದು ಚಮಚ ಸೇರಿಸಿ ಮೃದುವಾದ ಬಟ್ಟೆಯಲ್ಲಿ 15 ರಿಂದ 30 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಬೇಕು. ಒಂದು ಗಂಟೆಯ ನಂತರ ಅಂಟುವಾಳದ ರಸದಿಂದ ತೊಳೆಯಬೇಕು. ಹೀಗೆ ಎರಡು ಅಥವಾ ಮೂರು ತಿಂಗಳು ಮಾಡಿದಾಗ ನಿಧಾನವಾಗಿ ಕೂದಲು ಬೆಳೆಯಲಾರಂಭಿಸುತ್ತದೆ. ಆಗ ಗುಂಡು ಮಾಡಿಸಿ ಕೊಳ್ಳಬೇಕು. ಅಥವಾ ಅವುಗಳನ್ನು ಮಾತ್ರ ಶೇವ್ ಮಾಡಿಕೊಳ್ಳಬಹುದು. ನಂತರ ಆ ರಸವನ್ನು ಮತ್ತೆ ಹಚ್ಚಬೇಕು. ಮತ್ತೆ ತೆಗೆಯಬೇಕು. ಹೀಗೆ ಆ ಕೂದಲು ನಿಧಾನವಾಗಿ ಬರುವವರೆಗೆ 5 ಅಥವಾ 6 ಸಾರಿ ಮಾಡಬೇಕು. ಈ ವಿಧಾನದಿಂದ ಕೂದಲು ಬೆಳೆದವರು ದಯವಿಟ್ಟು ಇದೇ ಸಮಸ್ಯೆ ಇರುವವರಿಗೆ ಹೇಳಿ ಸಹಾಯ ಮಾಡಿ.

ಗಮನಿಸಿ: ಮೂಲಂಗಿ ಸಿಗದಿದ್ದರೆ ಈರುಳ್ಳಿ ಒಂದರಿಂದಲೂ ಸಹ ಮೇಲೆ ಹೇಳಿದಂತೆ ಮಾಡಬಹುದು. ರಸವನ್ನು ನಿಧಾನ ಹಚ್ಚಿ ಜೋರಾಗಿ ಹುಜ್ಜಿ ಹಚ್ಚಿದರೆ ಬೊಬ್ಬೆಯಾಗಬಹುದು.


Click Here To Download Kannada AP2TG App From PlayStore!

Share this post

scroll to top