ಹುಡುಗಿಯರನ್ನು ಟೀಸ್ ಮಾಡುವ ಹುಡುಗರು.. ಸ್ವಲ್ಪ ಇದರ ಬಗ್ಗೆ ತಿಳಿದುಕೊಳ್ಳಿ.!! ಹುಡುಗಿಯರು ತುಂಬಾ ಇಂಪಾರ್ಟೆಂಟ್!!

ಸದ್ಯಕ್ಕೆ ನಮ್ಮ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಲೈಂಗಿಕ ಕಿರುಕುಳ. ಮನೆ ಬಳಿ, ಶಾಲೆ, ಕಾಲೇಜು, ಬಹಿರಂಗ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಮಹಿಳೆಯರು ಲೈಂಗಿಕ ಕಿರುಕುಳದಿಂದ ಹೊರಬೀಳಲು ಸಾಧ್ಯವಾಗುತ್ತಿಲ್ಲ. ಆದರೆ ಲೈಂಗಿಕ ಕಿರುಕುಳದಿಂದ ಅವರನ್ನು ರಕ್ಷಿಸಲು, ಲೈಂಗಿಕ ಕಿರುಕುಳ ನೀಡಿದವರನ್ನು ಕಠಿಣವಾಗಿ ಶಿಕ್ಷಿಸಲು ನಮ್ಮ ಸರಕಾರಗಳು, ನ್ಯಾಯಾಲಯಗಳು ಕೆಲವು ಕಾನೂನುಗಳನ್ನು ತಂದಿವೆ. ಇವುಗಳ ಬಗ್ಗೆ ಕಿರುಕುಳ ನೀಡುವವರಿಗೆ, ಅನುಭವಿಸುವವರಿಗೆ ಸಂಪೂರ್ಣ ತಿಳಿವಳಿಕೆ ಇಲ್ಲ… ತಿಳಿವಳಿಕೆ ಇದ್ದರೆ ಕಿರುಕುಳ ನೀಡುವವನಿಗೆ ಭಯ, ಯುವತಿಯರಿಗೆ ಕಿರುಕುಳವನ್ನು ಎದುರಿಸುವ ಧೈರ್ಯ ಎರಡೂ ಬರುತ್ತವೆ. ಹಾಗಾಗಿ ಕಾನೂನು ಬಗ್ಗೆ ತಿಳಿವಳಿಕೆ ನೀಡುವ ನಮ್ಮ ಪ್ರಯತ್ನವಿದು.

1. ಬಹಿರಂಗ ಪ್ರದೇಶಗಳಲ್ಲಾಗಲಿ ಇನ್ನೆಲ್ಲಿಯೇ ಆಗಲಿ ಮಹಿಳೆಯರ ಮುಂದೆ ಅಸಭ್ಯ ಹಾಡುಗಳನ್ನು ಹಾಡಿದರೆ, ಆ ಕ್ರಿಯೆಯನ್ನು ಲೈಂಗಿಕ ಕಿರುಕುಳವಾಗಿ ಪರಿಗಣಿಸಿ ಐಪಿಸಿ ಸೆಕ್ಷನ್ 294 ಪ್ರಕಾರ 3 ತಿಂಗಳು ಜೈಲುಶಿಕ್ಷೆ ಅಥವಾ ದಂಡ ವಿಧಿಸುತ್ತಾರೆ. ಅದೇ ರೀತಿ ಒಮ್ಮೊಮ್ಮೆ 3 ತಿಂಗಳು ಜೈಲುಶಿಕ್ಷೆ, ದಂಡ ಎರಡನ್ನೂ ಭರಿಸಬೇಕಾಗುತ್ತದೆ.

1

2. ಅವರಿಗೆ ಸೆಕ್ಸ್ ಮಾಡಲು ಇಷ್ಟವಿಲ್ಲದಿದ್ದರು ಅವರನ್ನು ಆ ವಿಧವಾಗಿ ಪ್ರೇರೇಪಿಸಿ, ಅಧಿಪತ್ಯ ಚಲಾಯಿಸಿ, ಈ ರೀತಿ ಮಾಡುವುದು ನನ್ನ ಹಕ್ಕು ಎಂದು ಭಾವಿಸುವವರಿಗೆ ಸೆಕ್ಷನ್ 353 (ಎ) ಪ್ರಕಾರ ಒಂದು ವರ್ಷದಿಂದ 3 ವರ್ಷ ಜೈಲುಶಿಕ್ಷೆ ಅಥವಾ ದಂಡ ವಿಧಿಸುತ್ತಾರೆ. ಒಮ್ಮೆ ಜೈಲುಶಿಕ್ಷೆ, ದಂಡ ಎರಡು ತಪ್ಪಿದ್ದಲ್ಲ.

3. ಅವರಿಗೆ ಗೊತ್ತಿಲ್ಲದಂತೆ/ಗೊತ್ತಿದ್ದರೂ ಅವರ ಹಿಂದೆ ಬೀಳುತ್ತಾ ಲೈಂಗಿಕ ಕಿರುಕುಳ ನೀಡಿದರೆ, ಐಪಿಸಿ ಸೆಕ್ಷನ್ 354 (ಡಿ) ಪ್ರಕಾರ 3 ರಿಂದ 5 ವರ್ಷಗಳ ಜೈಲುಶಿಕ್ಷೆ, ದಂಡ ಎದುರಿಸಬೇಕಾಗುತ್ತದೆ.

2

4. ದೈಹಿಕವಾಗಿ ಬೆರೆಯಲು ಇಷ್ಟವಿಲ್ಲದ ಆಕೆ, ಬೇಡ ಎಂದು ವಾದಿಸುತ್ತಿದ್ದರೂ ಆಕೆ ಮೇಲೆ ಅತ್ಯಾಚಾರ ಎಸಗಿದರೆ, ಆ ರೀತಿ ಮಾಡುವುದು ಅಪರಾಧವಾಗಿ ಪರಿಗಣಿಸಿ ಐಪಿಸಿ ಸೆಕ್ಷನ್ 503 ಪ್ರಕಾರ 2 ವರ್ಷ ಜೈಲುಶಿಕ್ಷೆ ಅಥವಾ ದಂಡ, ಕೆಲವು ಸಲ ಎರಡನ್ನೂ ವಿಧಿಸಲಾಗುತ್ತದೆ.

5. ಮಹಿಳೆಯರಿಗೆ ಗೊತ್ತಿಲ್ಲದಂತೆ ಅವರ ಫೋಟೋಗಳು, ವಿಡಿಯೋಗಳನ್ನು ರಹಸ್ಯವಾಗಿ ತಮ್ಮ ಫೋನ್‌ನಲ್ಲಾಗಲಿ ಕ್ಯಾಮೆರಾಗಳಲ್ಲಾಗಲ್ಲಿ ತೆಗೆದು, ಲೈಂಗಿಕ ಕಿರುಕುಳ ನೀಡಿದರೆ ಅವರನ್ನು ಐಪಿಸಿ 354 (ಸಿ) ಸೆಕ್ಷನ್ ಪ್ರಕಾರ 1 ರಿಂದ 3 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವ ಕಾನೂನು ಇದೆ. ಒಮ್ಮೆ ಶಿಕ್ಷೆ ಅನುಭವಿಸಿ ಮತ್ತೆ ಅಂತಹ ಕೃತ್ಯ ಎಸಗಿದರೆ 3 ರಿಂದ 5 ವರ್ಷಗಳ ತನಕ ಜೈಲುಶಿಕ್ಷೆಯಿಂದ ಪಾರಾಗಲ್ಲ.

4

6. ಯಾವುದಾದರೂ ಕಾರ್ಯಕ್ರಮದಲ್ಲಾಗಲಿ, ಸಭೆಯಲ್ಲಾಗಲಿ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅವರ ಮೇಲೆ ಎಫ್‍ಐಆರ್ ದಾಖಲಿಸಬಹುದು.

7. ನೀವು ಕೆಲಸ ಮಾಡುವ ಕಂಪೆನಿಯಲ್ಲಿ ತನ್ನೊಂದಿಗೆ ದೈಹಿಕವಾಗಿ ಭಾಗಿಯಾಬೇಕೆಂದು, ಇಲ್ಲದಿದ್ದರೆ ಕೆಲಸದ ಒತ್ತಡ ಜಾಸ್ತಿ ಮಾಡುತ್ತೇನೆಂದು, ಸಂಬಳದಲ್ಲಿ ಕಟ್ ಮಾಡುವುದಲ್ಲದೆ, ನಿನ್ನ ಸಂಬಳ ಇನ್ನು ಹೆಚ್ಚಿಸಲ್ಲ ಎಂದು ಲೈಂಗಿಕ ಕಿರುಕುಳ ನೀಡುತ್ತಿರುವ ಬಾಸ್ ಮೇಲೆ, ಪ್ರಕರಣ ದಾಖಲಿಸಬಹುದೆಂದು 2013 ಕಾನೂನು ರೂಪಿಸಲಾಗಿದೆ.

8. ಫೋಟೋಗಳನ್ನು ಬದಲಾಯಿಸಿ, ಅವರ ಮೇಲೆ ಬಯಕೆಯಿಂದ ಅವರನ್ನು ಬೆದರಿಸುತ್ತಾ ಲೈಂಗಿಕ ಕಿರುಕುಳ ನೀಡಿದರೆ ಐಪಿಸಿ ಸೆಕ್ಷನ್ 499 ಪ್ರಕಾರ 2 ವರ್ಷ ಜೈಲುಶಿಕ್ಷೆ, ದಂಡ ವಿಧಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಎರಡನ್ನೂ ಎದುರಿಸಬೇಕಾಗುತ್ತದೆ.

5

9. ಯಾವುದಾದರೂ ಕಂಪೆನಿಯಲ್ಲಿ 10 ಮಂದಿಗಿಂತ ಹೆಚ್ಚು ಉದ್ಯೋಗಿಗಳು ಇರುವ ಕಂಪೆನಿಯಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದಾರೆ ಒಂದು ಕಂಪ್ಲೇಂಟ್ ಬಾಕ್ಸ್ ಇಟ್ಟು ಅಲ್ಲಿ ನಡೆಯುತ್ತಿರುವ ಕಿರುಕುಳನ್ನು ಅದರಲ್ಲಿ ತಿಳಿಸಬೇಕೆಂಮ್ದು 2013ರಲ್ಲಿ ಕಾನು ತರಲಾಗಿದೆ

10. ಇತರರ ಫೋಟೋಗಳನ್ನು ಅವರ ಅನುಮತಿ ಇಲ್ಲದೆ, ಅದೇ ರೀತಿ ಇತರೆ ವ್ಯಕ್ತಿಗಳ ಜತೆ ಇರುವ ಫೋಟೋಗಳನ್ನು ಎಲ್ಲರೂ ನೋಡುವಂತೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿ ಬೆದರಿಸುತ್ತಾ ಲೈಂಗಿಕ ಕಿರುಕುಳ ನಡೆಸಿದರೆ ಐಟಿ ಸೆಕ್ಷನ್ 67ರಡಿ ಆ ಕೃತ್ಯ ಎಸಗಿದವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.

11. ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಯಾರಾದರೂ ಮಹಿಳೆ ದೂರು ನೀಡಿದರೆ, 90 ದಿನಗಳಲ್ಲಿ ಆ ವಿಚಾರಣೆ ನಡೆಸಬೇಕಾಗುತ್ತದೆಂದು ಮಹಿಳಾ ಲೈಂಗಿಕ ಕಿರುಕುಳ ಕಾನೂನುನಲ್ಲಿದೆ.

12. ಲೈಂಗಿಕ ಕಿರುಕುಳನ್ನು ಮೊದಲ ದೂರವಾಗಿ ಪರಿಗಣಿಸಿ, ಅವರ ಮೇಲೆ ಅಪರಾಧ ಎಸಗಿದಂತೆ ಅಧಿಕಾರಿಗಳು ಮುಂದೆ ಸಾಗಬಹುದು.

13. ಸಾರ್ವಜನಿಕ ಪ್ರದೇಶದಲ್ಲಿ ಲೈಂಗಿಕ ಕಿರುಕುಳ, ಆಕೆ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದೇ ಆದರೆ ಐಪಿಸಿ ಸೆಕ್ಷನ್ 509 ಪ್ರಕಾರ ಮೂರು ವರ್ಷ ಜೈಲು ಶಿಕ್ಷೆ, ದಂಡ ಕಟ್ಟಬೇಕಾಗುತ್ತದೆ.

9

14. ಆಕೆಯ ಜತೆ ಯಾವುದೇ ಪರಿಚಯ ಇಲ್ಲದಿದ್ದರೂ ಆಕೆಯನ್ನು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು, ಐಪಿಸಿ ಸೆಕ್ಷನ್ 354 (ಎ) ನಿಯಮದ ಪ್ರಕಾರ ಜೈಲಿಗೆ ಕಳುಹಿಸುತ್ತಾರೆ. ಆ ಜೈಲು ಶಿಕ್ಷೆ ಮೂರು ವರ್ಷಗಳ ತನಕ ಇರಬಹುದು.

15. ನಿಮ್ಮ ಮನೆಯಲ್ಲಿ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾನೆಂದು ಅವರ ಮೇಲೆ ಲೈಂಗಿಕ ಕೃತ್ಯ ಎಸಗಿದರೆ ಮಹಿಳಾ ಕಿರುಕುಳ ಕಾನೂನಿನ 2013ರ ಅಡಿ ಕ್ರಮಕೈಗೊಳ್ಳಬಹುದು.

16. ಒಂದು ವೇಳೆ ನೀವೇನಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿ, ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದು ನಿರ್ಧರಿಸಿದ್ದೇ ಆದರೆ, ನಿಮಗೆ ಗೊತ್ತಿರುವ ಭಾಷೆಯಲ್ಲಿ ದೂರು ನೀಡಬಹುದು. ನಿಮ್ಮ ದೂರನ್ನು ಅವರು ದಾಖಲಿಸಿಕೊಂಡು, ಇತರೆ ಅಧಿಕಾರಿಗಳ ಜತೆ ಸಮಸ್ಯೆ ಮೇಲೆ ಚರ್ಚಿಸಿ ಆಕ್ಷನ್ ತೆಗೆದುಕೊಳ್ಳುತ್ತಾರೆ.

17. ನೀವು ಮನೆಯಿಂದ ಆಫೀಸಿಗೆ ಪ್ರಯಾಣಿಸುತ್ತಿರುವಾಗ, ಆ ಪ್ರಯಾಣದಲ್ಲಿ ಯಾರಾದರೂ ಲೈಂಗಿಕ ಕಿರುಕುಳ ನೀಡಿದರೆ, 2013ರಲ್ಲಿ ಮಹಿಳೆಯರಿಗಾಗಿ ರೂಪಿಸಿದ ಲೈಂಗಿಕ ಕಿರುಕುಳ ತಡೆ ಕಾನೂನಿನ ಅಡಿ ದೂರು ನೀಡಬಹುದು.

15

18. ಮಹಿಳೆಯೊಬ್ಬರನ್ನು ಇಷ್ಟಬಂದಂತೆ ನಿಂದಿಸುವುದು, ಅವರ ಮೇಲೆ ಅಸಭ್ಯವಾಗಿ ಮಾತನಾಡುವುದು ಸಾಮಾಜಿಕ ಮಾಧ್ಯಮಗಳಲ್ಲಿ (ಫೇಸ್‌ಬುಕ್, ಟ್ವಿಟ್ಟರ್..) ಐಪಿಸಿ ಸೆಕ್ಷನ್ 509ರ ಪ್ರಕಾರ, ಆ ರೀತಿ ಮಾಡಿದವರಿಗೆ 3 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

jeans-banned-at-indian-school-over-eve-teasing-1355159778-4431

19. ಲೈಂಗಿಕ ಕಿರುಕುಳಕ್ಕೆ ಗುರಿಯಾದರೆ, ನೀವು ಕೂಡಲೆ ಹೋಗಿ ಪೊಲೀಸರಿಗೆ ದೂರು ನೀಡಬಹುದು. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ನೀವು ಆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕು ನಿಮಗಿದೆ.


Click Here To Download Kannada AP2TG App From PlayStore!