ತಂದೆಗೆ ಕೊಟ್ಟ ಮಾತಿಗಾಗಿ ಕಷ್ಟಪಡುತ್ತಿರುವ ಈ ಬಾಲಕಿಗೊಂದು ನಮನ.!

ಆ ಬಾಲಕಿಯ ಹೆಸರು ‘ಸೋಂಬರಿ ಸಬರ್’.ವಯಸ್ಸು 11 ವರ್ಷ. ಜಾರ್ಖಂಡ್ ನಲ್ಲಿರುವ ಒಂದು ಹಳ್ಳಿಯಲ್ಲಿ ವಾಸ. 5 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಸೋಂಬರಿ ಚಿಕ್ಕ ಮಗುವಾಗಿದ್ದಾಗಲೇ ತಾಯಿ ಇಹಲೋಕ ತ್ಯಜಿಸಿದ್ದಾರೆ.  ತಂದೆಯು ಸಹ ಇತ್ತೀಚೆಗೆ ಅನಾರೋಗ್ಯದಿಂದ ಮರಣಿಸಿದ್ದಾರೆ.  ತಂದೆ ತಾಯಿ ಬದುಕಿದ್ದಾಗ ಮನೆಗೆ ಬರುತ್ತಿದ್ದ ಬಂಧುಗಳು ಯಾರೂ ಈಗ ಬರುತ್ತಿಲ್ಲ. ಈ ಪುಟ್ಟ ಬಾಲಕಿಯನ್ನು ಸಂರಕ್ಷಿಸಲು ಯಾವೊಬ್ಬ ಬಂಧುವೂ ಮುಂದೆ ಬರಲಿಲ್ಲ.

ಆದರೂ ಸಹ ಸೋಂಬರಿ ಎದೆಗುಂದಲಿಲ್ಲ. ಒಬ್ಬಳೇ ಮನೆಯಲ್ಲಿರುತ್ತಾಳೆ.  ಕರೆಂಟ್ ಇಲ್ಲ. ಕೊನೇ ಪಕ್ಷ ಸೀಮೆ ಎಣ್ಣೆ ದೀಪ ಉರಿಸಲು ಕೈಯಲ್ಲಿ ಕಾಸಿಲ್ಲ. ಆದರೂ, ತನ್ನ ತಂದೆ ಹೇಳುತ್ತಿದ್ದ ‘ಪುಟ್ಟೀ ನೀನು ಚೆನ್ನಾಗಿ ಓದಬೇಕು.ನನ್ನ ಹೆಸರು ಉಳಿಸಬೇಕು’ ಎಂಬ ಮಾತುಗಳು ಪ್ರತಿಧ್ವನಿಸುತ್ತಿವೆ. ತಂದೆಯ ಮಾತುಗಳನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಮುಂದೆ ಹೆಜ್ಜೆ ಇಟ್ಟಿದ್ದಾಳೆ ಸೋಂಬರಿ. ಆಸ್ತಿಯಿಲ್ಲ, ಸಹಾಯ ಮಾಡಲೂ ಯಾರೂ ಇಲ್ಲ.

ಓದಬೇಕೆಂದರೆ-ಬದುಕಬೇಕು,ಬದುಕಬೇಕೆಂದರೆ- ತಿನ್ನಬೇಕು,ತಿನ್ನಬೇಕೆಂದರೆ-ಹಣಬೇಕು,ಹಣಬೇಕಾದರೆ- ದುಡಿಯಬೇಕು. ಈ ಜೀವನ ಸೂತ್ರವನ್ನು ಅರಿತುಕೊಂಡ ಸೋಂಬರಿ… ಅಂದಿನಿಂದ ಇಂದಿನವರೆಗೂ ಪ್ರತಿ ದಿನವೂ ಬೆಳಿಗ್ಗೆ ಏಳುವುದು,ತನ್ನ ಊರಿನಿಂದ 5 ಕಿಲೋಮೀಟರ್ ದೂರದಲ್ಲಿರುವ ಅಡವಿಗೆ ಹೋಗುವುದು, ಕಟ್ಟಿಗೆ ಶೇಖರಿಸಿ ಅಷ್ಟು ದೂರದಿಂದ ಹೊತ್ತುತಂದು ಊರೂರು ತಿರುಗಿ ಮಾರಾಟ ಮಾಡುವುದು. 9 ಗಂಟೆಗೆ ಶಾಲೆಗೆ ಹೋಗುವುದು ಇದನ್ನೇ ತನ್ನ ದಿನಚರಿಯನ್ನಾಗಿಸಿಕೊಂಡಿದ್ದಾಳೆ. ಹೀಗೆ ಕಷ್ಟಪಟ್ಟು ಗಳಿಸಿದ ಹಣದಿಂದ ತನ್ನನ್ನು ತಾನು ಪೋಷಿಸಿಕೊಳ್ಳುತ್ತಿದ್ದಾಳೆ. ಮತ್ತೊಂದು ವಿಷಯವೇನೆಂದರೆ, ಸೋಂಬರಿ ಯಾವೊತ್ತೂ ಶಾಲೆಗೆ ತಡವಾಗಿ ಬಂದಿಲ್ಲ,ಒಂದು ದಿನವೂ ಗೈರುಹಾಜರಾಗಿಲ್ಲ. ಇದನ್ನು ಅವಳ ಶಾಲೆಯ ಟೀಚರ್ ಹೇಳಿದ್ದಾರೆ.

ಇವಳ ಕಷ್ಟವನ್ನು,ಗುರಿಯನ್ನು ತಿಳಿದುಕೊಂಡ NGOಗಳು ಅವಳನ್ನು ದತ್ತು ಪಡೆಯಲು ಮುಂದೆ ಬಂದಿವೆಯಂತೆ. ಅದೇ ರೀತಿ ಜಂಷೆಡ್ ಪೂರ್ ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯೊಬ್ಬರು,ಫುಟ್ ಸಿಲಾ ದ ಟೀಚರ್ ದಂಪತಿಗಳು ‘ಸೋಂಬರಿ’ಯನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದಾರಂತೆ. ಯಾರಿಗೆ ದತ್ತು ನೀಡಬೇಕೆನ್ನುವುದನ್ನು ದುಮರಿಯಾ ಜಿಲ್ಲೆಯ ಚಿಕ್ಕ ಮಕ್ಕಳ ಸಂರಕ್ಷಣಾಧಿಕಾರಿ ಚಂಚಲ್ ಕುಮಾರಿ ತೀರ್ಮಾನಿಸಲಿದ್ದಾರೆ. ತಾನು ಎಲ್ಲೇ ಇದ್ದರೂ ತನ್ನ ಗುರಿ ಮಾತ್ರ ಚೆನ್ನಾಗಿ ಓದಿ ತಂದೆಗೆ ಒಳ್ಳೆಯ ಹೆಸರು ತರಬೇಕೆನ್ನುವುದೇ ಎಂದು ಹೇಳುತ್ತಾಳೆ ಈ ಪುಟಾಣಿ.


Click Here To Download Kannada AP2TG App From PlayStore!