ಬಂಪರ್ ಕೊಡುಗೆ: ಸಾಲರೂಪದಲ್ಲಿ ರೈಲ್ವೇ ಟಿಕೆಟ್ ಗಳು…ದೇಶದಲ್ಲಿ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು!!!

ರೈಲು ಪ್ರಯಾಣಿಕರಿಗಾಗಿ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(IRCTC) ಒಂದು ಹೊಸ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯ ಪ್ರಕಾರ IRCTC ವೆಬ್ ಸೈಟ್ ನಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡಿರುವ ಪ್ರಯಾಣಿಕರು, ತಮ್ಮ ಪ್ರಯಾಣದ 5 ದಿನಗಳ ಮುಂಚೆ ಟಿಕೆಟ್ ಬುಕ್ ಮಾಡಿ, ಹಣ ಪಾವತಿಸದೆಯೇ ಟಿಕೆಟ್ ಪಡೆದುಕೊಂಡ 14 ದಿನಗಳ ನಂತರ ಹಣ ಪಾವತಿಸುವ ಹೊಸ ವಿಧಾನವನ್ನು ಬಿಡುಗಡೆಗೊಳಿಸಿದೆ. ಈ ಹೊಸ ವಿಧಾನವು ಎಲ್ಲಾ ರೈಲುಗಳಿಗೂ ಅನ್ವಯಿಸುತ್ತದೆಂದು ಐಆರ್ಸಿಟಿಸಿ ಪ್ರತಿನಿಧಿ ಸಂದೀಪ್ ದತ್ತಾ ತಿಳಿಸಿರುತ್ತಾರೆ. ಆದರೆ, ಹೀಗೆ ಸಾಲವಾಗಿ ಟಿಕೆಟ್ ಪಡೆದುಕೊಂಡ ಪ್ರಯಾಣಿಕರು 3.5 % ಸರ್ವೀಸ್ ಚಾರ್ಜ್ ಸಲ್ಲಿಸಬೇಕಾಗುತ್ತದೆ. ಈ ಹೊಸ ವಿಧಾನವು ಪ್ರಯಾಣಿಕರಿಗೆ ಉಪಯೋಗವಾಗುತ್ತದೆಂದು ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ಎಲ್ಲಿಗಾದರೂ ಇಂತಹ ಟಿಕೆಟ್ ಗಳನ್ನು ಪಡೆದುಕೊಂಡು ಪ್ರಯಾಣಿಸಬಹುದು.

ಟಿಕೆಟ್ ಗಳನ್ನು ಪಡೆದುಕೊಳ್ಳುವ ವಿಧಾನ :

*’epay later’ ಮೂಲಕ IRCTC ಇಂತಹ ಅವಕಾಶವನ್ನು ಕಲ್ಪಿಸಿದೆ.
*ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇಮೇಲ್ ಐಡಿ. ಮೊಬೈಲ್ ನಂಬರ್ ಗಳನ್ನು ನೀಡಬೇಕಾಗಿರುತ್ತದೆ.
* ಕೇವಲ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ.
* 14 ದಿನಗಳ ನಂತರ ಕ್ರೆಡಿಟ್ ಕಾರ್ಡ್ ನಿಂದ ಟಿಕೆಟ್ ನ ಮೊತ್ತ ಆಟೋಮೆಟಿಕ್ ಆಗಿ ಕಡಿತಗೊಳ್ಳುತ್ತದೆ.

 


Click Here To Download Kannada AP2TG App From PlayStore!