ಜನನೇಂದ್ರಿಯಗಳ ಬಳಿ ಇರುವ ಕೂದಲನ್ನು ಬೋಳಿಸಬಹುದೇ.? ಒಂದು ವೇಳೆ ಬೋಳಿಸಿದರೆ…ಏನಾಗುತ್ತೆ ?

ಪ್ಯೂಬಿಕ್ ಹೇರ್. ಜನನೇಂದ್ರಿಯಗಳ ಬಳಿ ಇರುವ ಕೂದಲು. ಸ್ತ್ರೀ, ಪುರುಷರಿಬ್ಬರಿಗೂ  ಬೆಳೆಯುತ್ತವೆ. ಬಹಳಷ್ಟು ಮಂದಿ ಆಗಿಂದಾಗ್ಗೆ ಈ ಕೂದಲನ್ನು  ಶೇವ್ ಮಾಡಿಕೊಳ್ಳುತ್ತಾರೆ. ಕೆಲವರು ವ್ಯಾಕ್ಸಿಂಗ್, ಹೇರ್ ರಿಮೂವರ್‌ನಂತಹ ಪದ್ಧತಿಗಳಿಂದ ಇವನ್ನು ತೊಲಗಿಸುತ್ತಾರೆ. ಆದರೆ ನಿಮಗೆ ಗೊತ್ತಾ..? ಪ್ಯೂಬಿಕ್ ಹೇರ್ ಅನ್ನು  ಯಾವುದೇ ಕಾರಣಕ್ಕೂ ತೆಗೆಯಬಾರದಂತೆ. ಹಾಗೆಂದು ನಾವು ಹೇಳುತ್ತಿಲ್ಲ, ಕೆಲವು ಅಧ್ಯಯನಗಳು ಇದನ್ನು ದೃಢಪಡಿಸಿವೆ. ಸ್ತ್ರೀ,ಪುರುಷರು ನೀಟಾಗಿರಬೇಕೆಂದು ಪ್ಯೂಬಿಕ್ ಹೇರನ್ನು ತೆಗೆಯುತ್ತಾರೆ. ಆದರೆ ಆ ರೀತಿ ಮಾಡಬಾರದು. ವಿಜ್ಞಾನಿಗಳು ಇದೇ ವಿಚಾರವನ್ನು ದೃಢಪಡಿಸಿದ್ದಾರೆ. ಅವರು ಆ ರೀತಿಯಾಗಿ ಹೇಳಲು ಕಾರಣ ಏನು ಗೊತ್ತಾ ..? ಬನ್ನಿ ಅದರ ಬಗ್ಗೆ ನಾವೀಗ  ತಿಳಿದುಕೊಳ್ಳೋಣ.

1. ಪ್ಯೂಬಿಕ್ ಹೇರ್ ತೆಗೆದರೆ ಆ ಜಾಗದಲ್ಲಿ ಸೋಂಕು ಗಳು, ಚರ್ಮದ ಮೇಲೆ ದದ್ದುಗಳು ಆಗುವ ಸಾಧ್ಯತೆಗಳಿವೆಯಂತೆ. ಆ ಭಾಗದಲ್ಲಿ ಇರುವ ಚರ್ಮ ಕಪ್ಪಾ ಗುತ್ತದೆ. ಆದುದರಿಂದ  ಪ್ಯೂಬಿಕ್ ಹೇರನ್ನು  ತೆಗೆಯಬಾರದು.

2. ಅನೇಕ ವಿಧದ ಬ್ಯಾಕ್ಟೀರಿಯಾಗಳು, ವೈರಸ್‌ಗಳಿಂದ ಪ್ಯೂಬಿಕ್ ಹೇರ್ ನಮಗೆ ರಕ್ಷಣೆ ಕೊಡುತ್ತದೆ. ಆದಕಾರಣ ಯಾರೂ ಇದನ್ನು ತೆಗೆಯಬಾರದು ಎನ್ನುತ್ತಿದ್ದಾರೆ ತಜ್ಞರು. ಒಂದು ವೇಳೆ ತೆಗೆಯಲೇಬೇಕು ಎಂದಾರೆ ಸ್ವಲ್ಪ ಮಟ್ಟಿಗೆ ಕತ್ತರಿಸುವುದು ಉತ್ತಮವಂತೆ .

3.ಪ್ಯೂಬಿಕ್ ಹೇರ್ ತೆಗೆದಾಗ ಅದು ಮತ್ತೆ ಬೆಳೆಯುತ್ತದೆ ಅಲ್ಲವೇ?  ಆ ರೀತಿ ಬೆಳೆಯುವಾಗ ತುಂಬಾ ತುರಿಕೆ  ಉಂಟಾಗುವಂತೆ ಮಾಡುತ್ತದೆ. ಇದರ ಜೊತೆಗೆ ಆ ಭಾಗದಲ್ಲಿ ಸೆನ್ಸಿಟೀವ್ ಆಗಿರುವ ಚರ್ಮ ಅಲರ್ಜಿಗೆ ಗುರಿಯಾಗುವ ಸಾಧ್ಯತೆ ಇದೆ.

4. ನಿತ್ಯ ಪ್ಯೂಬಿಕ್ ಹೇರನ್ನು ತೆಗೆಯುತ್ತಿದ್ದರೆ ಸ್ವಲ್ಪ ಸಮಯಕ್ಕೆ ಆ ಭಾಗದಲ್ಲಿ ಇರುವ ಕೆಲವು ಕೂದಲು ಸರಿಯಾಗಿ ಬೆಳೆಯುವುದಿಲ್ಲ. ಇದರಿಂದ ಅಲ್ಲಿ ಬ್ಲಾಕ್ ಹೆಡ್ಸ್, ಮಚ್ಚೆಗಳಂತಹ ಸಮಸ್ಯೆಗಳು ಕಂಡು  ಬರುವ ಅವಕಾಶ ಇರುತ್ತದಂತೆ. ಈ ರೀತಿಯಾದರೆ ಇನ್ನೂ ಕಿರಿಕಿರಿಯನ್ನು  ಅನುಭವಿಸಬೇಕಾಗುತ್ತದೆ.

5. ಜನನೇಂದ್ರಿಯಗಳ ಬಳಿ ಉಷ್ಣತೆಯನ್ನು ಯಾವಾಗಲೂ ಅಲ್ಲಿನ ಕೂದಲು ನಿಯಂತ್ರಿಸುತ್ತದೆ. ಒಂದು ವೇಳೆ ಕೂದಲು ಇಲ್ಲದಿದ್ದರೆ ಆ ಭಾಗದ ಮೇಲೆ ಉಷ್ಣತೆಯ ಪ್ರಭಾವ ಹೆಚ್ಚಾಗುತ್ತದೆ. ಇದು ಜನನೇಂದ್ರಿಯಗಳಿಗೆ ಅಷ್ಟು ಒಳ್ಳೆಯದಲ್ಲ . ಹಾಗಾಗಿ ಪ್ಯೂಬಿಕ್ ಹೇರ್ ತೆಗೆಯದೆ ಹಾಗೆಯೇ  ಉಳಿಸಿಕೊಳ್ಳಬೇಕಂತೆ.

6. ಪ್ಯೂಬಿಕ್ ಹೇರ್ ಇರುವುದರಿಂದ ಲೈಂಗಿಕ ರೋಗಗಳು ಬರುವ ಅವಕಾಶಗಳು  ಕಡಿಮೆ ಇರುತ್ತವಂತೆ. ಹಲವು ಅಧ್ಯಯನಗಳು ಈ ವಿಷಯವನ್ನು ದೃಢಪಡಿಸಿವೆ. ಹಾಗಾಗಿ ಪ್ಯೂಬಿಕ್ ಹೇರ್ ಇರುವುದು ಒಳ್ಳೆಯದು   ಎಂದು ತಜ್ಞರು ಹೇಳುತ್ತಾರೆ.


Click Here To Download Kannada AP2TG App From PlayStore!