ನೀವು ಹಾಕಿಕೊಳ್ಳುವ ಕ್ಯಾಪ್ಸೂಲ್‌ಗಳು ಮಾಂಸಾಹಾರವೇ? ಶಾಕಾಹಾರವೇ?

ನಮಗೆ ಏನೇ ಕಾಯಿಲೆ ಕಸಾಲೆ ಬಂದರೂ ವೈದ್ಯರನ್ನು ಕಾಣುತ್ತೇವೆ. ಆ ಡಾಕ್ಟರ್ ನಮ್ಮನ್ನು ಪರೀಕ್ಷಿಸಿ, ಕೆಲವು ಟ್ಯಾಬ್ಲೆಟ್‌ಗಳನ್ನು, ಟಾನಿಕ್ ಅಥವಾ ಕ್ಯಾಪ್ಸೂಲ್‌ಗಳನ್ನು ಬರೆದು ಬಳಸಲು ಹೇಳುತ್ತಾರೆ. ನಾವು ಬಳಸಿ ಬಿಸಾಡುತ್ತೇವೆ. ನಾವೆಲ್ಲರೂ ಇಷ್ಟು ದಿನಗಳ ಕಾಲ ಅದೆಷ್ಟೋ ಕ್ಯಾಪ್ಸೂಲ್‌ಗಳನ್ನು ಗುಳುಂ ಮಾಡಿರುತ್ತೇವೆ. ಸಾಮಾನ್ಯವಾಗಿ ಅಲೋಪತಿ, ಆಯುರ್ವೇದದಲ್ಲಿ ಈ ರೀತಿಯ ಟ್ಯಾಬ್ಲೆಟ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕ್ಯಾಪ್ಸೂಲ್ ಒಳಗೆ ನಿಜವಾದ ಔಷಧಿ ಮಿಶ್ರಣ ತುಂಬುತ್ತಾರೆ. ಆದರೆ ಆ ಕ್ಯಾಪ್ಸೂಲ್ ಹೊರಗಿನ ಭಾಗ ಮಾತ್ರ ಮಾಂಸಾಹಾರವಂತೆ. ಈ ಕ್ಯಾಪ್ಸೂಲ್‌ನ್ನು ಗೆಲಾಟಿನ್‌ನಿಂದ ತಯಾರಿಸುತ್ತಾರಂತೆ. ಪ್ರಾಣಿಗಳ ಮೂಳೆಗಳು, ಕೀಲು ಇತರೆ ಭಾಗಗಳನ್ನು ಚೆನ್ನಾಗಿ ಬೇಯಿಸುವ ಮೂಲಕ ಗೆಲಾಟಿನ್ ತಯಾರಾಗುತ್ತದೆ. ಹಾಗಾಗಿ ಇದನ್ನು ಮಾಂಸಾಹಾರ ಎಂದು ಹೇಳಬಹುದು. ಇದು ಮಾಂಸಾಹಾರವಾದ ಕಾರಣ ಕ್ಯಾಪ್ಸೂಲ್‌ನಲ್ಲಿ ವೈರಸ್‌ಗಳು ಇರುವ ಸಾಧ್ಯತೆಗಳೂ ಇವೆ ಎನ್ನುತ್ತಿದ್ದಾರೆ ವೈದ್ಯರು. ಇವನ್ನು ಹೆಚ್ಚಾಗಿ ಬಳಸಿದರೆ ಹೊಟ್ಟೆ ನೋವು, ಬೇಧಿ ಆಗುವ ಕಾರಣಗಳೂ ಇಲ್ಲದಿಲ್ಲ. ಹಾಗಾಗಿ ಈ ಕ್ಯಾಪ್ಸೂಲ್‌ಗಳನ್ನು ಯಾವುದೇ ವಿಧದಲ್ಲೂ ಹಾನಿಯಾಗದ ಪದಾರ್ಥಗಳಿಂದ ತಯಾರಿಸಬೇಕೆಂದು ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಧಾರ್ಮಿಕ ಸೂಕ್ಷ್ಮಗಳು ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಂಪೂರ್ಣ ವೆಜ್ ಕ್ಯಾಪ್ಸೂಲ್‌ನ್ನು ತಯಾರಿಸಬೇಕೆಂದು ಕೇಂದ್ರ ಸರಕಾರ ಭಾವಿಸುತ್ತಿದೆ.

ಗಿಡಗಳು, ಸಸ್ಯಗಳಿಂದ ತೆಗೆದ ಪದಾರ್ಥಗಳಾದ ಸೆಲ್ಯುಲೋಸ್ ಮೂಲಕ ಈ ಕ್ಯಾಪ್ಸೂಲ್ ತಯಾರಿ ಮಾಡುವ ವಿಧಿ ವಿಧಾನಗಳನ್ನೂ, ನಿಯಮಗಳನ್ನು ಕೇಂದ್ರ ಸರಕಾರದ ಔಷಧಿ ಕ್ಷೇತ್ರದ ತಜ್ಞರು ಸೂಚಿಸುತ್ತಿದ್ದರೆ. ಈ ಹಿನ್ನೆಲೆಯಲ್ಲಿ ಔಷಧ ಇಲಾಖೆ ಈಗಾಗಲೆ ಒಂದು ಸಮಿತಿಯನ್ನು ಸಹ ರಚಿಸಿದೆಯಂತೆ. ಆದರೆ ಹೆಚ್ಚಾಗಿ ಸೌಂದರ್ಯ ಸಾಧನಗಳಲ್ಲಿ ಬಳಸುವ ಈ ಗೆಲಾಟಿನ್ ಬಹಳ ಕಡಿಮೆ ಬೆಲೆಗೆ ಸಿಗುತ್ತದಂತೆ. ಆದರೆ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳಷ್ಟೇ ಅಲ್ಲದೆ ಜನರ ಆರೋಗ್ಯವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಇನ್ನು ಮುಂದೆ ವೆಜ್ ಕ್ಯಾಪ್ಸೂಲ್‌ಗಳ ತಯಾರಿಕೆಗೆ ಕೇಂದ್ರ ಆಸಕ್ತಿ ತೋರುತ್ತಿದೆ.

 


Click Here To Download Kannada AP2TG App From PlayStore!