ಸಾಕು ಬೆಕ್ಕಿಗೆ “ಆಯಾ” ಬೇಕಾಗಿದ್ದಾರಂತೆ…ಸಂಬಳ ರೂ.14 ಲಕ್ಷ!!

ಈ ಜಗತ್ತಿನಲ್ಲಿ ಇನ್ನೂ ಏನೇನು ಕೆಲಸಗಳಿವೆಯೋ ಏನೋ ಅಂದುಕೊಳ್ಳುತ್ತೀರಾ ಈ ಸುದ್ದಿ ಕೇಳಿದರೆ. ಈವತ್ತು ಸಾಫ್ಟ್‌ವೇರ್ ಉದ್ಯೋಗಿಗಳಿಗೂ ಅಷ್ಟೊಂದು ಸಂಬಳ ಸವಲತ್ತುಗಳು ಸಿಗುತ್ತಿಲ್ಲ. ಉದ್ಯೋಗ ಉಳಿಸಿಕೊಳ್ಳುವುದೇ ದೊಡ್ದ ಸವಾಲಾಗಿ ಪರಿಣಮಿಸಿರುವ ದಿನಗಳಿವು. ಇನ್ನು ಲಕ್ಷಗಟ್ಟಲೆ ಸಂಬಳ ಯಾರು ಕೊಡುತ್ತಾರೆ? ಅದೂ ಬೆಕ್ಕಿನ ಆಲನೆಪಾಲನೆ ನೋಡಿಕೊಳ್ಳಲು…ಇಲ್ಲಿದೆ ನೋಡಿ ಅಂತಹ ಒಂದು ಕೆಲಸ…

ಕೆಲಸದ ಒತ್ತಡ ಇರಲ್ಲ. ಏನೇನೂ ಕೆಲಸವನ್ನೂ ಮಾಡಬೇಕಾಗಿಲ್ಲ. ಒಂದು ಬೆಕ್ಕನ್ನು ಒಡಲಲ್ಲಿ ಇಟ್ಟುಕೊಂಡು ಅದರ ಬೆನ್ನನ್ನು ಸವರುತ್ತಾ ಬೆಳಗ್ಗೆಯಿಂದ ಸಂಜೆಯ ತನಕ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದು. ಬೆಕ್ಕಿನ ಮೇಲೆ ಇನ್ನೂ ಪ್ರೀತಿ ಪ್ರೇಮ ಜಾಸ್ತಿಯಾದರೆ ಅದನ್ನು ಎತ್ತಿಕೊಂಡು ಅದರ ಜತೆಗೆ ಆಟವನ್ನೂ ಆಡಿಕೊಳ್ಳಬಹುದು….ಈ ರೀತಿ ಇರುವುದು ನಿಮಗೆ ಇಷ್ಟವೇ…ಹಾಗಿದ್ದರೆ ಇಲ್ಲಿದೆ ನೋಡಿ ಬಂಪರ್ ಆಫರ್..!

ವರ್ಷಕ್ಕೆ ರೂ.14 ಲಕ್ಷ ಸಂಬಳ ಕೊಡಲು ರೆಡಿ ಅಂತಿದ್ದಾರೆ ಐರ್‌ಲ್ಯಾಂಡ್ ಡಬ್ಲಿನ್‌ನ “ಜಸ್ಟ್ ಕ್ಯಾಟ್ಸ್ ವೆಟರ್ನರಿ ಕ್ಲಿನಿಕ್” ಮಾಲೀಕರು. ಇದಕ್ಕೆ ವಿಶೇಷ ವಿದ್ಯಾರ್ಹತೆ ಎಂತದ್ದೂ ಬೇಡ. ಬೆಕ್ಕುಗಳನ್ನು ಪ್ರೀತಿಸುವ ಮನಸ್ಸಿದ್ದರೆ ಸಾಕಂತೆ. ಬೆಕ್ಕು ರೋಗಿಗಳನ್ನು ಆರೈಕೆ ಮಾಡಲು “ಕ್ಯಾಟ್ ಕಡ್ಲರ್ಸ್ ಬೇಕಾಗಿದ್ದಾರೆ” ಎಂದು ಪ್ರಕಟಣೆ ನೀಡಲಾಗಿದೆ. ನೀವು ಕನಸು ಕಾಣುತ್ತಿರುವ ಉದ್ಯೋಗ ಇದೇನಾ…ಇನ್ನು ತಡವೇಕೆ… (miaow@justcats.ie) ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.


Click Here To Download Kannada AP2TG App From PlayStore!