ನಿಮಗೆ ರಾತ್ರಿ ವೇಳೆ ಯಾವ ಸಮಯದಲ್ಲಿ ಎಚ್ಚರವಾಗುತ್ತದೆ? ಆ ಸಮಯಕ್ಕನುಗುಣವಾಗಿ ನಿಮ್ಮ ನಿಜವಾದ ಸಮಸ್ಯೆಯನ್ನು ತಿಳಿಯಬಹುದು…!

ನಾವು ಆರೋಗ್ಯದಿಂದಿರಲು ಪ್ರತಿ ದಿನ ಸಾಕಷ್ಟು ಪೌಷ್ಟಿಕ ಆಹಾರವನ್ನು ಸೇವಿಸುವುದು,ವ್ಯಾಯಾಮ ಮಾಡುವುದು,ನಿರ್ದಿಷ್ಟ ವೇಳೆಯಲ್ಲಿ ನಿದ್ರೆ ಮಾಡುವುದು ಅತ್ಯಗತ್ಯ. ನಿದ್ದೆ ಮಾಡುವುದರಿಂದ ಶರೀರ ಶಕ್ತಿಪಡೆದುಕೊಂಡು ಮರುದಿನ ಪೂರ್ತಿ ಉಲ್ಲಾಸವಾಗಿರುತ್ತದೆ. ಆದರೆ, ಇಂದಿನ ಒತ್ತಡದ ಜೀವನದಲ್ಲಿ ಪ್ರತಿ ದಿನ ಎದುರಾಗುತ್ತಿರುವ ಅನೇಕ ಸಮಸ್ಯೆಗಳಿಂದಾಗಿ ನಿದ್ರಾಹೀನತೆಗೆ ಗುರಿಯಾಗುತ್ತಿದ್ದೇವೆ. ಅನೇಕ ಮಂದಿ ನಿದ್ರೆಯಲ್ಲಿ ಬೆಚ್ಚಿ ಬೀಳುವುದು ಅನಾರೋಗ್ಯದ ಸೂಚನೆಯೆಂದು ‘ಚೈನೀಸ್ ಆರ್ಗನ್ ಬಾಡೀ ಕ್ಲಾಕ್’ಹೇಳುತ್ತದೆ. ರಾತ್ರಿಯವೇಳೆ ಸರಿಯಾಗಿನಿದ್ರೆ ಬಾರದಿರುವುದು,ಮಧ್ಯದಲ್ಲಿ ಎಚ್ಚರವಾಗುವುದು ಮುಂತಾದವುಗಳಿಗೆ ಪರಿಷ್ಕಾರ ಕಂಡುಕೊಳ್ಳ ಬಯಸುವವರು, ಈರೀತಿ ಏಕಾಗುತ್ತದೆ, ಅಂತಹವರು ಯಾವ ವಿಧವಾದ ಅನಾರೋಗ್ಯ ಪೀಡಿತರಾಗಿರುತ್ತಾರೆ ಎಂಬ ವಿಷಯವನ್ನು ಈ ಕ್ಲಾಕ್ ಕರಾರುವಾಕ್ಕಾಗಿ ತಿಳಿಸುತ್ತದಂತೆ. ಅದು ಹೇಗೆಂಬುದನ್ನು ಈಗ ತಿಳಿದುಕೊಳ್ಳೋಣ.

ರಾತ್ರಿ 9 ರಿಂದ 11 ಗಂಟೆಯ ನಡುವೆ ನಿಮಗೆ ನಿದ್ರೆ ಬರುತ್ತಿಲ್ಲವೇ?ನಿದ್ರಿಸಲು ಕಷ್ಟಪಡುತ್ತಿದ್ದೀರಾ?
ಹಾಗಾದರೆ ನಿಮ್ಮ ಶರೀರದ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುತ್ತದೆ,ಅಡ್ರಿನಲ್, ಥೈರಾಯಿಡ್ ಗ್ರಂಥಿಗಳು ಅನಾರೋಗ್ಯ ಪೀಡಿತವಾಗಿರುತ್ತವೆ. ಒತ್ತಡ, ಚಿಂತೆ ಮೊದಲಾದ ಲಕ್ಷಣಗಳು ನಿಮ್ಮಲ್ಲಿ ಅಧಿಕವಾಗಿವೆ. ಆದರೆ,’ಚೈನೀಸ್ ಆರ್ಗನ್ ಬಾಡೀ ಕ್ಲಾಕ್’ ಪ್ರಕಾರ ಈ ಸಮಯದಲ್ಲಿ ರಕ್ತನಾಳಗಳು, ಕವಾಟಗಳು ಉತ್ತೇಜಿತ ಗೊಂಡಿರುತ್ತವೆ.

v04juixdmgmiwte4e6x8

ರಾತ್ರಿ 11 ರಿಂದ 1 ಗಂಟೆ ನಡುವೆ ಎಚ್ಚರವಾಗುತ್ತಿದೆಯೇ ?
ಹಾಗಾದರೆ ನೀವು ಆರೋಗ್ಯಕರವಾದ ಕೊಬ್ಬನ್ನು ಸೇವಿಸಬೇಕಂತೆ. ಇತರರ ಬಗ್ಗೆ ಹೆಚ್ಚಾಗಿ ಆಲೋಚಿಸುತ್ತಿದ್ದರೆ, ಈ ಸಮಯದಲ್ಲಿ ಎಚ್ಚರ ವಾಗುತ್ತದಂತೆ. ಈ ಸಮಯದಲ್ಲಿ ನಮ್ಮ ಪಿತ್ತಕೋಶ (Gall Bladder)ಸಕ್ರಿಯವಾಗಿದ್ದು,ನೀವು ಸೇವಿಸಿದ ಕೊಬ್ಬನ್ನು ಕರಗಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ.

 4m5m2189myqftfr566i6

ಮಧ್ಯರಾತ್ರಿ 1 ರಿಂದ 3 ಗಂಟೆ ನಡುವೆ ಏಳುತ್ತಿದ್ದೀರಾ?
ಲಿವರ್ ಮೇಲೆ ಅಧಿಕ ಒತ್ತಡ ಬೀಳುತ್ತಿದೆಯೆಂದರ್ಥ. ಮಧ್ಯಪಾನ ಮಾಡುವುದನ್ನು ಕಡಿಮೆ ಮಾಡಬೇಕು. ಆದರೆ, ಅತಿಯಾದ ಕೋಪ,ತಪ್ಪು ಮಾಡಿದ್ದೇವೆಂಬ ಭಾವನೆಯುಳ್ಳವರಿಗೂ ಈ ಸಮಯದಲ್ಲಿ ಎಚ್ಚರವಾಗುತ್ತದಂತೆ. ಈ ಸಮಯದಲ್ಲಿ ನಮ್ಮ ಲಿವರ್ ಸಕ್ರಿಯವಾಗಿರುತ್ತದೆ.

 6dvm7txhe2olarsuadog

ಬೆಳಿಗ್ಗೆ 3 ರಿಂದ 5 ಗಂಟೆ ನಡುವೆ ನಿದ್ದೆಯಿಂದ ಎದ್ದರೆ?
ಈ ಸಮಯದಲ್ಲಿ ನಮ್ಮ ಶ್ವಾಸಕೋಶಗಳು, ಶರೀರದಲ್ಲಿರುವ ಎಲ್ಲಾ ಅವಯವಗಳಿಗೂ ಆಮ್ಲಜನಕವನ್ನು ಸರಬರಾಜು ಮಾಡುತ್ತಿರುತ್ತವೆ. ಖಿನತೆಯಿಂದ ನರಳುತ್ತಿರುವವರು,ಯೋಚಿಸುತ್ತಿರುವವರಿಗೆ ಈ ಸಮಯದಲ್ಲಿ ಎಚ್ಚರವಾಗುತ್ತದೆ.ಇವರು ಶುದ್ಧವಾದ ಗಾಳಿಯನ್ನು ಸೇವಿಸುವುದು, ಪ್ರಕೃತಿಯಲ್ಲಿ ಹೆಚ್ಚಿನ ಸಮಯ ಕಳೆದು ಆರೋಗ್ಯಕರವಾದ ಆಹಾರ ಸೇವಿಸಿದರೆ ಈಸಮಸ್ಯೆಗಳಿಂದ ಪಾರಾಗಬಹುದು.

ಬೆಳಿಗ್ಗೆ 5 ರಿಂದ 7 ಗಂಟೆಗಳ ನಡುವೆ ಎಚ್ಚರವಾಗುತ್ತಿದ್ದರೆ ?
ಈ ಸಮಯದಲ್ಲಿ ನಮ್ಮ ದೊಡ್ಡ ಕರುಳು ಸಕ್ರಿಯವಾಗಿರುತ್ತದೆ.ಶರೀರದಲ್ಲಿರುವ ಅನಗತ್ಯ ಪದಾರ್ಥಗಳನ್ನು ಹೊರಹಾಕುವುದಕ್ಕೆ ಸಿದ್ಧವಾಗಿರುತ್ತದೆ.ಈ ಸಮಯದಲ್ಲಿ ಸ್ವಲ್ಪವೇ ನೀರು ಸೇವಿಸಿದರೂ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ.ಆದರೆ,ಇಂತಹ ಪರಿಸ್ಥಿತಿಯಲ್ಲಿರುವವರು,ಜೀವನದ ಏಳಿಗೆಯ ಬಗ್ಗೆ ಚಿಂತಿಸುತ್ತಿರುತ್ತಾರೆಂದು ಅರ್ಥಮಾಡಿಕೊಳ್ಳಬೇಕು.

n5gjyhh6yhx2zqo4g3tc


Click Here To Download Kannada AP2TG App From PlayStore!

Share this post

scroll to top