ಇದೊಂದು ಅಪರೂಪದ ನಾಗಾರಹಾವು, ಮನುಷ್ಯರಂತೆ ಅದಕ್ಕೂ….ಆಂಧ್ರದಲ್ಲಿ ಪತ್ತೆ!!

ಸಾಮಾನ್ಯವಾಗಿ ನಾಗರಹಾವು ಎಂದರೆ ಯಾರೇ ಆಗಲಿ ದೈವ ಸಮಾನ ಕಾಣುತ್ತಾರೆ. ಅದರ ತಂಟೆಗೆ ಹೋಗಲ್ಲ. ಸಾಧ್ಯವಾದರೆ ಹಾವು ಹಿಡಿಯುವರನ್ನು ಕರೆದು ಅದನ್ನು ಸುರಕ್ಷಿತ ತಾಣಗಳಲ್ಲಿ ಬಿಟ್ಟು ಕೈತೊಳೆದುಕೊಳ್ಳುತ್ತಾರೆ. ನಾಗರಹಾವನ್ನು ಸಾಯಿಸಿದರೆ ಅದರ ಪಾಪ ಸುತ್ತಿಕೊಳ್ಳುತ್ತದೆ ಎಂಬ ಭಾವನೆ ಇದೆ. ಹಾಗಾಗಿ ಯಾರೂ ಅದನ್ನು ಸಾಯಿಸಲ್ಲ. ಬದಲಾಗಿ ಅದನ್ನು ಹಿಡಿಸಿ ದೂರ ಬಿಡುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಂದು ಹಾವು ಪತ್ತೆಯಾಗಿದೆ ನೋಡಿ. ಈ ಹಾವಿನ ವಿಶೇಷತೆ ಎಂದರೆ….

ಆಂಧ್ರಪ್ರದೇಶದ ಕೊತ್ತಗೂಡೆಂ ಜಿಲ್ಲೆ ಚುಂಚುಪಲ್ಲಿಯ ರಾಂಪುರ ಎಂಬ ಗ್ರಾಮಯದಲ್ಲಿನ ರಾಮಯ್ಯ ಎಂಬ ರೈತನ ಮನೆಯಲ್ಲಿ ಈ ಹಾವು ಭಾನುವಾರ ಕಾಣಿಸಿಕೊಂಡಿದೆ. ಈ ಹಾವಿನ ವಿಶೇಷತೆ ಎಂದರೆ, ಇದರ ಕೆಳಭಾಗದಲ್ಲಿ ಉಗುರುನಿಂದ ಕೂಡಿದ ಬೆರಳುಗಳಿವೆ. ಇದನ್ನು ನೋಡಿ ಜನ ಚಕಿತರಾಗುತ್ತಿದ್ದಾರೆ. ಇದೇನಿದು ಹಾವಿಗೆ ಬೆರಳುಗಳು ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಈ ಹಾವನ್ನು ಸ್ಥಳೀಯ ಸ್ನೇಕ್ ರೆಸ್ಕ್ಯೂ ಸದಸ್ಯರು ಬಂಧಿಸಿದ್ದಾರೆ. ಅವರು ಪರಿಶೀಲಿಸಿದ ಮೇಲೆ ಈ ರೀತಿ ವಿಶೇಷ ಬೆರಳುಗಳು ಇರುವುದು ಪತ್ತೆಯಾಗಿದೆ.


Click Here To Download Kannada AP2TG App From PlayStore!