ಯಾವ ಬಣ್ಣದಿಂದ ಏನು ಲಾಭ ಆಗುತ್ತದೆ ಗೊತ್ತಾ?

ಬಣ್ಣಗಳಿಲ್ಲದ ಈ ಜಗತ್ತನ್ನು ಊಹಿಸಲು ಸಾಧ್ಯವೆ.. ಒಮ್ಮೆ ಊಹಿಸಿಕೊಂಡು ನೋಡಿ.. ಊಹಿಸಿಕೊಳ್ಳಲು ತುಂಬಾ ಕಷ್ಟ ಅಲ್ಲವೇ… ಅಷ್ಟೆಲ್ಲಾ ನಮ್ಮ ಜೀವನದಲ್ಲಿ ಬಣ್ಣಗಳು ಬೆರೆತುಬಿಟ್ಟಿವೆ. ವ್ಯಕ್ತಿಯೊಬ್ಬರ ಮನೋಭಾವನೆಗಳು ಮತ್ತು ನಡವಳಿಕೆ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲ, ನಮ್ಮ ನಿತ್ಯ ಕೆಲಸಗಳನ್ನೂ ಮತ್ತು ಪ್ರತಿಕ್ರಿಯೆಯನ್ನೂ ಸಹ ಇದು ಪ್ರಭಾವಿಸುತ್ತವೆ. ಹಳದಿ ಬಣ್ಣ ಸಂತೋಷಕರವಾದ ಮೂಡ್‌ಗೆ ಕಾರಣವಾದರೆ…ಕೆಂಪುಬಣ್ಣ ಹೃದಯ ಸ್ಪಂದನೆ ಮತ್ತು ಶ್ವಾಸವನ್ನು ಪ್ರೇರೇಪಿಸುತ್ತದೆ. ಅದೇ ರೀತಿ ಇತರೆ ಬಣ್ಣಗಳು ಯಾವ ವಿಧವಾದ ಪ್ರಭಾವ ತೋರುತ್ತವೆ ಎಂಬುದನ್ನು ತಿಳಿದುಕೊಳ್ಳಿ..

ಪಿಂಕ್
ಪಿಂಕ್.. ಹೆಣ್ಣುಮಕ್ಕಳಿಗೆ ತುಂಬಾ ಇಷ್ಟವಾದ ಬಣ್ಣ… ಪಿಂಕ್ ಬಣ್ಣಕ್ಕೆ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇದೆ…ಯಾರ ಮೇಲೆ ಆಗಲಿ ಕೋಪ ಇದ್ದಾಗ…ಅಥವಾ ಕೋಪವನ್ನು ತಡೆದುಕೊಳ್ಳದ ಹಂತಕ್ಕೆ ಹೋದಾಗ ಪಿಂಕ್ ಕಲರ್‌ನ್ನು ಧರಿಸಿ ನಿಮ್ಮ ಮೂಡ್ ಬದಲಾಯಿಸಿಕೊಳ್ಳಬಹುದು.

ಆರೆಂಜ್
ನೀವು ಯಾವುದಾದರೂ ಪರೀಕ್ಷೆ ಅಥವಾ ಸಂದರ್ಶನಕ್ಕೆ ಹೋಗುತ್ತಿದ್ದೀರಾ… ನರ್ವಸ್ ಆಗಿ ಫೀಲ್ ಆಗುತ್ತಿದ್ದೀರಾ…ಆದರೆ ಖಂಡಿತವಾಗಿ ನಿಮಗೆ ಆರೇಂಜ್ ಸಹಾಯ ಮಾಡುತ್ತದೆ. ಆರೆಂಜ್ ಬಣ್ಣ ನಮ್ಮಲ್ಲಿರುವ ಮೆಂಟಲ್ ಎಬಿಲಿಟಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ನಮ್ಮ ಮೈಂಡ್ ಶಾರ್ಪ್ ಆಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಆರೆಂಜ್ ಕಲರ್ ಡ್ರೆಸ್ ಹಾಕಿಕೊಳ್ಳುವುದರಿಂದ ಡಿಸ್ಟರ್ಬ್ ಆಗಿರುವ ನಿಮ್ಮ ಮೂಡ್‌ನ್ನು ಬದಲಾಯಿಸುತ್ತದೆ.

ಹಸಿರು ಬಣ್ಣ
ಆಫೀಸಿನಲ್ಲಿ ಕೆಲಸದ ಒತ್ತಡ ಇದೆಯಾ… ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೇ… ಆದರೆ ನಿಮ್ಮ ಸುತ್ತಮುತ್ತ ಎಲೆಹಸಿರು ಬಣ್ಣ ಇರುವಂತೆ ನೋಡಿಕೊಳ್ಳಿ.. ಯಾವತ್ತಾದದ್ರೂ ಗಮನಿಸಿದ್ದೀರಾ ಪ್ರಕೃತಿಯನ್ನು ನೋಡಿದ ಕೂಡಲೆ ನಮ್ಮ ಮನಸು ಪರವಶದಿಂದ ತುಂಬಿಬರುತ್ತದೆ.. ಮೈಂಡ್‌ನಲ್ಲಿರುವ ಟೆನ್ಷನ್ ಎಲ್ಲಾ ಕರಗಿಹೋಗುವ ಫೀಲಿಂಗ್ ಆಗುತ್ತದೆ..ಇದೂ ಅಷ್ಟೇ.

ಬಿಳಿ ಬಣ್ಣ
ಶಾಂತಿಗೆ ಚಿನ್ಹೆ ಬಿಳಿ ಬಣ್ಣ… ಬೇಸಿಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.. ಬಿಸಿಲ ಬೇಗೆಯಿಂದ ನಮ್ಮನ್ನು ರಕ್ಷಿಸಲು ಬಿಳಿ ಬಣ್ಣದ ವಸ್ತ್ರಗಳು ನಮಗೆಷ್ಟೋ ಸಹಾಯ ಮಾಡುತ್ತವೆ, ಅಷ್ಟೇ ಅಲ್ಲ ನಮ್ಮ ಮನಸ್ಸನ್ನು ಶಾಂತವಾಗಿ ಇಡುವಲ್ಲಿ ಸಹ ಬಿಳಿ ಬಣ್ಣ ಸಹಾಯ ಮಾಡುತ್ತದೆ.

ಕಪ್ಪು
ಕಪ್ಪು ಬಣ್ಣವನ್ನು ಅಶುಭ ಎಂದು ಭಾವಿಸುತ್ತಾರೆ…ಹಬ್ಬಗಳು, ಸಂಭ್ರಮದಂತಹ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣ ಬಳಸದವರು ಇದ್ದಾರೆ.. ಆದರೆ ಕಪ್ಪು ನಿಮ್ಮಲ್ಲಿನ ಹುಮ್ಮಸ್ಸನ್ನು, ಆತ್ಮವಿಶ್ವಾಸದ ಲೆವೆಲ್ಸ್ ಹೆಚ್ಚಿಸುತ್ತದೆ. ನಾವು ಅಶುಭವಾಗಿ ಭಾವಿಸುವ ಕಪ್ಪು ಬಣ್ಣ ಫ್ಯಾಶನ್ ಜಗತ್ತಿನಲ್ಲಿ ರಾಜನಿದ್ದಂತೆ.

ನೀಲಿ
ಬ್ಲೂ ಬಣ್ಣಕ್ಕೆ ಹಸಿವನ್ನು ಕಡಿಮೆ ಮಾಡುವ ಶಕ್ತಿ ಇದೆ..ಇದಕ್ಕೆ ಕಾರಣ ನೀಲಿ ಬಣ್ಣವನ್ನು ನೋಡಿದ ಕೂಡಲೆ ನಮ್ಮ ಮಿದುಳು ಬಿಡುಗಡೆ ಮಾಡುವ ರಸಾಯನಿಕಗಳು…ಆದಕಾರಣ ತೂಕ ಹೆಚ್ಚಾಗುತ್ತಿದ್ದೇವೆ ಎಂದು ಕೊರಗುವವರು ನಿಮ್ಮ ಡೈನಿಂಗ್ ಹಾಲನ್ನು ಬ್ಲೂ ಕಲರ್‌ ಬದಲಾಯಿಸಿಕೊಳ್ಳಿ.

ಹಳದಿ
ಮಿದುಳು ಸೆರಟೋನಿನ್ ಎಂಬ ರಾಸಾಯನಿಕ ಬಿಡುಗಡೆ ಮಾಡುವಲ್ಲಿ ಸಹಾಯ ಮಾಡುತ್ತದೆ ಈ ಹಳದಿ ಬಣ್ಣ…ಇದರಿಂದ ಸಂತೋಷಕರವಾದ ಮೂಡ್ ಬರುವುದಷ್ಟೇ ಅಲ್ಲ…ನಾಡಿ ವ್ಯವಸ್ಥೆಯನ್ನೂ ಚುರುಕಾಗಿಸುತ್ತದೆ. ಅನೇಕ ಆಹಾರ ಉತ್ಪಾದನೆ ಸಂಸ್ಥೆಗಳು ಬಳಕೆದಾರರನ್ನು ಆಕರ್ಷಿಸಲು ಹಳದಿ ಬಣ್ಣವನ್ನು ಉಪಯೋಗಿಸುತ್ತವೆ.

ಕೆಂಪು
ಕೆಂಪು ಬಣ್ಣ ಅತ್ಯಂತ ಶಕ್ತಿಯುವಾದದ್ದು, ಅಡ್ರಿನಲ್ ಗ್ರಂಥಿ ಮತ್ತು ನ್ಯೂರಾನ್ಸ್ ಪ್ರೇರೇಪಿಸುತ್ತದೆ. ನಿಮ್ಮ ರೆಗ್ಯುಲರ್ ಆಕ್ಟಿವಿಟಿಯನ್ನು ಪ್ರಭಾವಿಸುತ್ತದೆ. ನೀವು ಯಾವುದನ್ನೇ ಆಗಲಿ ಸಮರ್ಥವಾಗಿ ಎದುರಿಸುವಂತೆ ಮಾಡುತ್ತದೆ.


Click Here To Download Kannada AP2TG App From PlayStore!