ಒಂದು ದೊಡ್ಡ ಕಂಪನಿಯ ಮೇನೆಜರ್ ಸಮೊಸ ಮಾರುವ ವ್ಯಕ್ತಿ ಮಧ್ಯೆ ನಡೆದ ಕುತೂಹಲಕಾರಿ ಸಂಭಾಷಣೆ…

ಅದು ದೆಹಲಿಯ ಒಂದು ದೊಡ್ಡ ಕಾರ್ಪೊರೇಟ್ ಕಂಪನಿ. ಅದರ ಎದುರು ಒಂದು ಪುಟ್ಟ ಹೊಟೇಲ್ ಅದರಲ್ಲಿ ಒಬ್ಬ ಒಬ್ಬ ವ್ಯಕ್ತಿ ಸಮೊಸ ಮಾರುತ್ತಿರುತ್ತಾನೆ. ನೋಡಲು ಪುಟ್ಟ ಹೋಟೆಲ್ ಆದರೂ ಆತ ಮಾರುವ ಸಮೊಸಗಳ ರುಚಿ ಅದ್ಭುತವಾಗಿರುತ್ತದೆ. ಸಮೊಸ ತಿನ್ನಲು ಆ ಕಾರ್ಪೋರೇಟ್ ಕಂಪನಿಯ ಉದ್ಯೋಗಿಗಳು ನಿತ್ಯ ಬರುತ್ತಾರೆ. ಹೀಗೆ ಆ ವ್ಯಕ್ತಿಯ ಹೊಟೇಲ್ ರುಚಿಕರವಾದ ಸಮೊಸಗಳು ಸಿಗುವ ಹೊಟೇಲ್ ಎಂದು ಸುತ್ತಮುತ್ತ ಹೆಸರು ಮಾಡಿದೆ. ಒಂದು ದಿನ ಆ ಕಾರ್ಪೋರೇಟ್ ಕಂಪನಿಯ ಮೇನೆಜರ್ ಬಂದು ಆ ಹೊಟೇಲ್’ನಲ್ಲಿ ಸಮೊಸ ತಿನ್ನುತ್ತಾ ಹಾಗೆ ಅವುಗಳನ್ನು ಮಾರುವ ಆ ವ್ಯಕ್ತಿಯ ಜೊತೆ ಮಾತಿಗಿಳಿದ. ಅವರಿಬ್ಬರ ನಡುವಿನ ಸಂಭಾಷಣೆ ಹೀಗಿದೆ.

ಮೇನೆಜರ್: ನೀನು ಸಮೊಸ ತುಂಬಾ ಚೆನ್ನಾಗಿ ಮಾಡುತ್ತಿಯಾ… ಒಳ್ಳೆಯ ನೈಪುಣ್ಯತೆ ಇದೆ. ಅವುಗಳನ್ನು ಮಾರುವುದರಲ್ಲೂ ನಿನಗೆ ಒಳ್ಳೆಯ ಟ್ಯಾಲೆಂಟ್ ಇದೆ‌. ಇಷ್ಟೊಂದು ಬುದ್ಧಿವಂತಿಕೆ ಇದ್ದು ನಿನ್ನ ಟ್ಯಾಲೆಂಟ್ ವ್ಯರ್ಥ ಮಾಡಿಕೊಳ್ಳುತ್ತಿದ್ದಿಯಾ! ನನ್ನ ಹಾಗೆ ಕೆಲಸ ಮಾಡಿದ್ದರೆ ದೊಡ್ಡ ಕಂಪನಿಗೆ ಮೇನೆಜರ್ ಆಗಬಹುದಿತ್ತು ಅಲ್ವಾ…?

ಸಮೊಸ ಮಾರುವ ವ್ಯಕ್ತಿ: ನೀವು ಸು.10 ವರ್ಷಗಳ ಕೆಳಗೆ ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದೀರಾ. ಆಗಲೇ ನಾನು ಈ ಹೊಟೇಲ್ ಇಟ್ಟಿದ್ದು. ಆಗ ನನ್ನ ಸಂಪಾದನೆ ಒಂದು ಸಾವಿರ ರೂಪಾಯಿ. ನಿಮ್ಮ ಸಂಬಳ 10 ಸಾವಿರ ಇತ್ತು. ಅದೇ ಈಗ ಒಂದು ಲಕ್ಷ ಆಗಿದೆ. ಹೆಚ್ಚು ಕಡಿಮೆ ನಾನು ನಿಮ್ಮಷ್ಟೇ ಸಂಪಾದಿಸುತ್ತಿದ್ದೇನೆ. ಆದರೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ.

(ಆಶ್ಚರ್ಯದಿಂದ) ಮೇನೆಜರ್: ನಾನು ದೊಡ್ಡ ಕಂಪನಿಯಲ್ಲಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದಿಸುತ್ತೇನೆ. ಆದರೆ ನೀನು ಇನ್ನೂ ಚಿಕ್ಕ ಹೋಟೆಲ್’ನಲ್ಲೇ ಇದ್ದೀಯಾ. ನಿನಗಿಂತ ನಾನೇ ಒಳ್ಳೆಯ ಸ್ಥಾನದಲ್ಲಿದ್ದೇನೆ. ಮತ್ತೆ ನಾನು ಹೇಗೆ ಸಮಯ ವ್ಯರ್ಥ ಮಾಡಿದೆ..? ನಿನ್ನದೇ ಸಮಯ ವ್ಯರ್ಥವಾಗಿದೆ‌.

(ನಗುತ್ತಾ) ಸಮೊಸ ಮಾರುವ ವ್ಯಕ್ತಿ: ನಾನು ಹೇಳುತ್ತಿರುವುದು ನಿಮಗೆ ಸರಿಯಾಗಿ ಅರ್ಥವಾಗುತ್ತಿಲ್ಲ. ಸರಿಯಾಗಿ ಹೇಳುತ್ತಾನೆ ಕೇಳಿ, ಕೆಲವು ವರ್ಷಗಳ ಕೆಳಗೆ ನಾನು 0 (ಸೊನ್ನೆ) ಪೊಜಿಷನ್’ನಿಂದ ಹೊಟೇಲ್ ಪ್ರಾರಂಭಿಸಿದೆ. ಈಗ ಹೆಚ್ಚುಕಮ್ಮಿ ನಿಮ್ಮಷ್ಟು ಸಂಪಾದನೆ ಮಾಡುತ್ತಿದ್ದೇನೆ. ಈ ಹತ್ತು ವರ್ಷಗಳಲ್ಲಿ ನಾನು ಈ ಸುತ್ತಲಿನ ಪ್ರದೇಶದಲ್ಲಿ ಒಳ್ಳೆಯ ಸಮೊಸ ಮಾರುವ ವ್ಯಕ್ತಿಯೆಂದು ಹೆಸರು ಗಳಿಸಿದ್ದೇನೆ. ಆದರೆ ನೀವು ಹೀಗೆ ಹೇಳಿಕೊಳ್ಳುವಂತಹದು ಏನು ಸಾಧಿಸಿಲ್ಲ. ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ,
ಇಂದೋ ನಾಳೆ ನಾನು ನಿವೃತ್ತಿ ಹೊಂದಿದರೆ ನನ್ನ ಮಗ ನನ್ನ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಾನೆ. ಆತ ಜೀವನದಲ್ಲಿ ಇನ್ನೂ ಮುಂದೆ ಹೋಗುತ್ತಾನೆ. ಆಗ ದೊಡ್ಡ ಹೊಟೇಲ್ ಪ್ರಾರಂಭಿಸುವ ಸ್ಥಿತಿಯನ್ನು ತಲುಪುತ್ತಾನೆ. ಆದರೆ ನೀವು ಈಗ ಮಾಡುತ್ತಿರುವ ಕೆಲಸವನ್ನು ನಿಮ್ಮ ಮಕ್ಕಳಿಗೆ ಕೊಡಬಲ್ಲಿರಾ? ಇಲ್ಲ… ಅವರು ಮತ್ತೆ 0 (ಸೊನ್ನೆ)ಯಿಂದ ಪ್ರಾರಂಭಿಸಬೇಕು. ಮತ್ತೆ ಎಲ್ಲಾ ನೈಪುಣ್ಯತೆಯನ್ನು ಕಲಿತು 10-15 ವರ್ಷ ಕಷ್ಟಪಡದೇ ಈಗ ನೀವು ಇರುವ ಸ್ಥಿತಿಯನ್ನು ತಲುಪಲಾರರು. ಆದರೆ ನನ್ನ ಮಕ್ಕಳು ಹಾಗಲ್ಲ. ಈಗ ಅವರು ನನ್ನ ವ್ಯಾಪಾರದ ಜವಾಬ್ದಾರಿಯನ್ನು ವಹಿಸಿಕೊಂಡರೆ ಅದೇ 10-15 ವರ್ಷಗಳ ನಂತರ ಯಾವ ಸ್ಥಿತಿಯಲ್ಲಿ ಇರಬಹುದೆಂದು ನಿಮಗೆ ಈಗಾಗಲೇ ಅರ್ಥವಾಗಿರುತ್ತದೆ.

ಸಮೊಸ ಮಾರುವ ವ್ಯಕ್ತಿಯ ಈ ಉತ್ತರಕ್ಕೆ ಆ ಮೇನೆಜರ್’ಗೆ ಮಾತು ಹೊರಬರಲಿಲ್ಲ. ವ್ಯಾಪಾರದಲ್ಲಿ ಮುಂದೆ ಸಾಗುತ್ತಾ ಆ ಕ್ಷೇತ್ರದಲ್ಲಿ ಯಶಸ್ಸುಪಡೆಯಬೇಕೆಂಬ ಹಂಬಲಯಿರುವರಿಗೆ ಸ್ಪೂರ್ತಿ ತುಂಬುವ ಪ್ರೇರಣೆಯ ಕಥೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.


Click Here To Download Kannada AP2TG App From PlayStore!

Share this post

scroll to top