ಕೆಲಸದಾಕೆ, ಯಜಮಾನಿ ನಡುವಿನ ಆಸಕ್ತಿಕರ ಸಂಭಾಷಣೆ…ಖಂಡಿತ ಎಲ್ಲರಲ್ಲೂ ಬದಲಾವಣೆ ತರುತ್ತದೆ.

ಆಕೆ ಅವರ ಮನೆಯಲ್ಲಿ ಕೆಲಸದಾಕೆ.. ಬೆಳಗ್ಗೆ ಬಂದು ಮನೆ ಗುಡಿಸುವುದರಿಂದ ಹಿಡಿದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವವರೆಗೆ ತಾನೇ ಮಾಡುತ್ತಾಳೆ. ಮತ್ತೆ ಸಂಜೆ ಬಂದು ಇನ್ನೊಮ್ಮೆ ತನ್ನ ಕೆಲಸ ಮಾಡಿಕೊಳ್ಳುತ್ತಾ ಹೋಗುತ್ತಾಳೆ. ಆದರೆ ಹಬ್ಬಕ್ಕೆ ಹೋಗಿ ಬಂದ ಬಳಿಕ ಆಕೆ ಹೇಳಿದ ಮಾತುಗಳು … ಆ ಮನೆ ಯಜಮಾನಿಗೆ ಹೊಸ ಜಗತ್ತನ್ನು ಪರಿಚಯ ಮಾಡಿದವು.. ಆ ಸಂಭಾಷಣೆಯನ್ನು ನೀವು ಕೂಡ ಕೇಳಿ ನಿಮ್ಮಲ್ಲೂ ಅಸಾಮಾನ್ಯ ಬದಲಾವಣೆ ಬರುತ್ತದೆ.

ಪತ್ನಿ: ರೀ ನಿಮ್ಮ ಬಟ್ಟೆಯನ್ನು ಲಾಂಡ್ರಿಗೆ ಕಡಿಮೆ ಹಾಕಿ.
ಪತ್ನಿ: ಏನು? ಏನಾಯಿತು
ಪತ್ನಿ:ಕೆಲಸದಾಕೆ ಕೆಲವು ದಿನ ಬರಲ್ಲ.
ಪತ್ನಿ:ಯಾಕಂತೆ?
ಪತ್ನಿ: ಗಣೇಶ ಚತುರ್ಥಿ ಎಂದು ಮಗಳನ್ನು, ತನ್ನ ಮೊಮ್ಮಗಳನ್ನು ನೋಡಲು ಊರಿಗೆ ಹೋಗುತ್ತಿದ್ದಾಳೆ.
ಪತ್ನಿ:ಸರಿ..ಸರಿ.
ಪತ್ನಿ:ಮರೆಯದಂತೆ ಆಕೆಗೆ ಹಬ್ಬದ ಕಾಣಿಕೆಯಾಗಿ ರೂ.500 ಕೊಡಿ.
ಪತ್ನಿ: ಹೇಗೂ ಯುಗಾದಿ ಬರುತ್ತದೆ ಅಲ್ಲವೇ, ಆಕೆಗೆ ಆಗಲೇ ಹಣ ಕೊಡಬಹುದಲ್ಲ.
ಪತ್ನಿ: ಆಕೆ ಕೆಲವು ಮನೆಗಳಲ್ಲಿ ಕೆಲಸ ಮಾಡುತ್ತಾಳೆ. ಬಡಮಹಿಳೆ. ತನಗೆ ಬರುವ ಅಲ್ಪಸ್ವಲ್ಪ ಆದಾಯದಲ್ಲಿ ತನ್ನ ಮಗಳು, ಮೊಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ. ನಾವು ಕೊಡುವ ಹಣದಿಂದ ಆಕೆಗೆ ಸ್ವಲ್ಪ ಸಹಾಯವಾಗುತ್ತದೆ.
ಪತ್ನಿ: ಅಯ್ಯೋ ನೀನು ತುಂಬಾ ಸೆಂಟಿಮೆಂಟ್ ಆಗಿ ಮಾತನಾಡಬೇಡ.
ಪತ್ನಿ: ನೀವೇನು ಹಣದ ಬಗ್ಗೆ ಆಲೋಚಿಸಬೇಡಿ. ಒಂದು ಹೊತ್ತಿಗೆ ನಾವು ಟೈಮ್ ಪಾಸ್‌ಗೆ ತಿನ್ನುವ ಪಿಜ್ಜಾ ಬಿಟ್ಟರೆ ಸಾಕು ಆ ಹಣ ಕವರ್ ಆಗುತ್ತದೆ.
ಪತ್ನಿ: ಚೆನ್ನಾಗಿದೆ ನಿನ್ನ ಆಲೋಚನೆ. ಸರಿಬಿಡು ಎಂದು ಆಕೆಗೆ 500 ರೂಪಾಯಿ ಕೊಟ್ಟರು ಆ ದಂಪತಿಗಳು.
ಆ ಕೆಲಸದಾಕೆ ಮೂರು ದಿನಗಳ ಬಳಿಕ ತನ್ನ ಮಗಳು, ಮೊಮ್ಮಗಳನ್ನು ನೋಡಿ ಮತ್ತೆ ಕೆಲಸಕ್ಕೆ ಹಾಜರಾದಳು.

ಯಜಮಾನಿ: ಏನಮ್ಮ..ಊರಿಗೆ ಹೋಗಿ ಬಂದಾ? ನಿನ್ನ ಮಗಳು,ಮೊಮ್ಮಗಳು ಹೇಗಿದ್ದಾರೆ?
ಯಜಮಾನಿ:ಹೋಗಿದ್ದಮ್ಮಾ, ತುಂಬಾ ಚೆನ್ನಾಗಿದ್ದಾರೆ. ನೀವು ಕೊಟ್ಟ 500 ರೂಪಾಯಿಂದ ನಮ್ಮ ನಡುವೆ ಇನ್ನಷ್ಟು ಖುಷಿಯಾಯಿತು.
ಯಜಮಾನಿ:ಹೌದು ರೂ.500 ಏನು ಮಾಡಿದೆ?
ಯಜಮಾನಿ: ನನ್ನ ಮೊಮ್ಮಗಳಿಗೆ ರೂ.50ಕ್ಕೆ ಒಂದು ಬಟ್ಟೆ, ರೂ.40ಕ್ಕೆ ಒಂದು ಗೊಂಬೆ ತೆಗೆದುಕೊಂಡೆ. ನನ್ನ ಮಗಳಿಗೆ ಕೆಲವು ಸಿಹಿ ರೂ.50, ದೇವರ ದರ್ಶನಕ್ಕೆ ರೂ.60, ನನ್ನ ಮಗಳ ಕೈಗೆ ರೂ.25 ಕೈಬಳೆ, ನನ್ನ ಅಳಿಯನಿಗೆ ರೂ.50ಕ್ಕೆ ಸುಂದರವಾದ ಬೆಲ್ಟ್ ತೆಗೆದುಕೊಂಡೆ. ಉಳಿದ ಹಣದಲ್ಲಿ ನನ್ನ ಮೊಮ್ಮಗಳಿಗೆ ಬೇಕಾಗಿದ ಬುಕ್ಸ್, ಓದಿಗೆ ಬೇಕಾಗಿದ್ದ ವಸ್ತುಗಳನ್ನು ಕೊಂಡೆ.
ಯಜಮಾನಿ:ಏನು. ಅಷ್ಟೊಂದು ವಸ್ತುಗಳಾ ಆ ರೂ.500ಕ್ಕೆ?
ಒಮ್ಮೆಲೆ ಶಾಕ್‌ಗೆ ಒಳಗಾದ ಆ ಯಜಮಾನಿಗೆ ಪಿಜ್ಜಾ ನೆನಪಾಯಿತು. ತಲೆತುಂಬಾ ಆ ಪಿಜ್ಜಾ ಬಗ್ಗೆಯೇ ಆಲೋಚನೆಗಳಿವೆ. ನಾವು ಒಂದು ಪಿಜ್ಜಾಗೆ ಆಗುವ ಖರ್ಚನಿಂದ ಕೆಲಸದಾಕೆ ಇಷ್ಟೆಲ್ಲಾ ಕೊಂಡಿದ್ದಾಳೆ. ತನ್ನ ಕುಟುಂಬಕ್ಕೆ ಬೇಕಾದ ಅಗತ್ಯಗಳನ್ನು ತೀರಿಸಿಕೊಂಡಿದ್ದಾಳೆ. ತನ್ನ ಮಗಳು, ಅಳಿಯ, ಮೊಮ್ಮಗಳು ಹೀಗೆ ಎಲ್ಲರನ್ನೂ ಖುಷಿಗೊಳಿಸಿ, ಆಕೆ ಸಂತಸದಿಂದ ಕಳೆದಿದ್ದಾಳೆ. .. ಎಂದುಕೊಳ್ಳುತ್ತಾ ತನ್ನಲ್ಲಿ ತಾನ್ನೇ ಆಲೋಚಿಸಿಕೊಂಡಳು… ಆಕೆಯನ್ನು ನೋಡಿ ಕಲಿಯಬೇಕು ನಾವು…ಎಷ್ಟೆಲ್ಲಾ ಹಣವನ್ನು ವ್ಯರ್ಥ ಮಾಡುತ್ತಿದ್ದೇವೋ ಒಮ್ಮೆ ಆಲೋಚಿಸಿ.


Click Here To Download Kannada AP2TG App From PlayStore!