ಕೇಂದ್ರ ಮಂತ್ರಿ ಸ್ಮೃತಿ ಇರಾನಿ, ಚಪ್ಪಲಿ ಹೊಲೆಯುವ ವ್ಯಕ್ತಿ ಮಧ್ಯೆ ನಡೆದ ಸಂಭಾಷಣೆ..!

ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಕೇರಳದ ಕೊಯಂಬತ್ತೂರುನಲ್ಲಿ ನಡೆಯುತ್ತಿರುವ ಇಷಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹಾಜರಾಗಲು ಹೋಗಿದ್ದರು. ಈ ಸಂದರ್ಭದಲ್ಲಿ ಎರ್ ಪೊರ್ಟ್’ನಲ್ಲಿ ಇಳಿದು ಸ್ವಲ್ಪ ದೂರ ನಡೆದ ತಕ್ಷಣ ಸ್ಮೃತಿ ಇರಾನಿ ಚಪ್ಪಲಿ ಕಿತ್ತುಹೋಗಿದೆ. ಅಷ್ಟರಲ್ಲೇ ಕಾರು ಬಂದಿದ್ದರಿಂದ ಕಿತ್ತೊದ ಚಪ್ಪಲಿಯನ್ನು ಹಾಕಿಕೊಂಡೆ ಕಾರು ಹತ್ತಿಕೊಳ್ಳತ್ತಾರೆ. ಚಪ್ಪಲಿ ಹೊಲಿಸಿಕೊಳ್ಳೋಣವೆಂದು…

ಕಾರಿನಲ್ಲಿ ಬರುವಾಗ ಚಪ್ಪಲಿ ಹೊಲಿಯುವವರು ಯಾರಾದರೂ ಇದ್ದರೆಯೇ ಎಂದು ರಸ್ತೆಯ ಅಕ್ಕಪಕ್ಕದಲ್ಲಿ ನೋಡಿಕೊಳ್ಳುತ್ತಾ ಬರುತ್ತಾರೆ. ಎರ್ ಪೊರ್ಟ್’ಗೆ 16 ಕಿ.ಮೀ ದೂರದಲ್ಲಿ ಪೇರೂರು ಎಂದು ಊರಿನಲ್ಲಿ ಒಬ್ಬ ಚಪ್ಪಲಿ ಹೊಲಿಯುವ ವ್ಯಕ್ತಿ ಕಂಡ ಸ್ಮೃತಿ ಇರಾನಿ ಅಲ್ಲಿ ಕಾರು ನಿಲ್ಲಿಸಲು ಹೇಳಿ, ಕಾರಿನಿಂದ ಇಳಿದ ಸ್ಮೃತಿ ಇರಾನಿ ನೇರವಾಗಿ ಆತ ಬಳಿ ಹೋಗಿ ತನ್ನ ಚಪ್ಪಡಿಗಳನ್ನು ಹೊಲೆಸಿಕೊಂಡರು. ಆತ ಚಪ್ಪಲಿಗೆ ಹೊಲೆಯುವವರೆಗೂ ಅಲ್ಲಿಯೇ ಇದ್ದ ಸ್ಟೂಲ್ ಮೇಲೆ ಕುಳಿತು ಆತನ ಜೊತೆ ಮಾತಿಗಿಳಿದರು.

 • ಸ್ಮೃತಿ ಇರಾನಿ: ‘ದಿನಕ್ಕೆ ಎಷ್ಟು ಸಂಪಾದಿಸುತ್ತೀಯಾ’ ಎಂದು ಕೇಳಿದರು.
 • ಚಪ್ಪಲಿ ಹೊಲೆಯುವ ವ್ಯಕ್ತಿ: 200-300 ರೂಪಾಯಿವರೆಗೆ ಎಂದು ಹೇಳಿದ.
 • ಸ್ಮೃತಿ ಇರಾನಿ: ಎಷ್ಟು ಜನ ಮಕ್ಕಳು
 • ಚಪ್ಪಲಿ ಹೊಲೆಯುವ ವ್ಯಕ್ತಿ: ಇಬ್ಬರು.
 • ಸ್ಮೃತಿ ಇರಾನಿ: ಅವರು ಏನು ಮಾಡುತ್ತಿದ್ದಾರೆ.
 • ಚಪ್ಪಲಿ ಹೊಲೆಯುವ ವ್ಯಕ್ತಿ: ಮದುವೆಯಾಗಿದೆ ಮೇಡಂ.
 • ಸ್ಮೃತಿ ಇರಾನಿ: ಇದೇನು..?
 • ಚಪ್ಪಲಿ ಹೊಲೆಯುವ ವ್ಯಕ್ತಿ: ಅವು ಚಪ್ಪಲಿ ಹೊಲಿಯಲು ಬೇಕಾಗುವ ಲೆದರ್ ಕಟ್ ಪೀಸ್’ಗಳು ಮೇಡಂ. (ನೋಡಿ ಮೇಡಂ ನಿಮ್ಮ ಚಪ್ಪಲಿಗಳು)
 • ಸ್ಮೃತಿ ಇರಾನಿ: ಎಷ್ಟಾಯಿತು‌
 • ಚಪ್ಪಲಿ ಹೊಲೆಯುವ ವ್ಯಕ್ತಿ: 10 ರೂಪಾಯಿ.
 • ಸ್ಮೃತಿ ಇರಾನಿ: ತೆಗೆದುಕೊಳ್ಳಿ (100 ರೂಪಾಯಿ ಕೊಡುತ್ತಾ)
 • ಚಪ್ಪಲಿ ಹೊಲೆಯುವ ವ್ಯಕ್ತಿ: ಚಿಲ್ಲರೆಗಾಗಿ ಹುಡುಕುತ್ತಿದ್ದಾನೆ.
 • ಸ್ಮೃತಿ ಇರಾನಿ: ಚಿಲ್ಲರೆ ಬೇಡ… ನೀವೇ ಇಟ್ಟುಕೊಳ್ಳಿ…
 • ಚಪ್ಪಲಿ ಹೊಲೆಯುವ ವ್ಯಕ್ತಿ: ಮೇಡಂ 100/- ಬೇಡ, 10/- ಸಾಕು (ಪ್ರಾಮಾಣಿಕವಾಗಿ)
 • ಸ್ಮೃತಿ ಇರಾನಿ: ಇಲ್ಲ ಇಟ್ಟುಕೊಳ್ಳಿ.. ನನ್ನ ಬಳಿ 10/- ಚಿಲ್ಲರೆ ಇಲ್ಲ.
 • ಸ್ಮೃತಿ ಇರಾನಿ: ಹಣ ಇಲ್ಲದಿರಬಹುದು ಆದರೆ… ಸಿಕ್ಕಿದುತಗೆದುಕೊಳ್ಳಬೇಕು ಎಂಬ ಯೋಚನೆಯನ್ನು ಸಹ ಮಾಡುವುದಿಲ್ಲ ಆ ಕಷ್ಟ ಜೀವಿಗಳು… ಪ್ರಾಮಾಣಿಕತೆಯೇ ಅವರ ದೊಡ್ಡ ಗುಣ. (ಪಕ್ಕದ ವ್ಯಕ್ತಿಯ ಬಳಿ ಸ್ಮೃತಿ ಇರಾನಿ)

Click Here To Download Kannada AP2TG App From PlayStore!

Share this post

scroll to top