ಹಣ ಕೇಳೋಣ ಎಂದು ಕಾರಿನ ಒಳಕ್ಕೆ ಬಗ್ಗಿ ನೋಡಿದ.. ಒಳಗೆ ನಡೆಯುವುದನ್ನು ನೋಡಿ ಶಾಕ್…!

ಎಲ್ಲಿ ಯಾವ ಕೆಲಸ ಮಾಡಬೇಕೋ ಆ ಕೆಲಸವನ್ನು ಅಲ್ಲೇ ಮಾಡಬೇಕು ಎಂದು ಹಿರಿಯರು ಹೇಳುತ್ತಿರುತ್ತಾರೆ. ಇಲ್ಲದಿದ್ದರೆ ತುಂಬಾ ಸಮಸ್ಯೆಗಳು ಬರುತ್ತಿರುತ್ತವೆ ಎಂದು ನಮ್ಮ ಹಿರಿಯರು ಎಚ್ಚರಿಸುತ್ತಿರುತ್ತಾರೆ. ಅವರ ಮಾತಿನಲ್ಲೂ ನಿಜ ಇದೆ. ಮುಖ್ಯವಾಗಿ ಕಾಮಕ್ರೀಡೆ ಮತ್ತು ಇತರೆ ಖಾಸಗಿ ಕೆಲಸಗಳನ್ನು ಒಂಟಿಯಾಗಿ ಸುತ್ತ ಮುತ್ತ ಯಾರೂ ಇಲ್ಲದಿದ್ದಾಗ ಮಾಡಬೇಕು. ಆದರೆ ಈ ಕಾಲದ ಯುವ ಜನಾಂಗ ಚುಂಬಿಸಿಕೊಳ್ಳುವುದು ಶೃಂಗಾರ ಕೇಳಿಯಲ್ಲಿ ತೊಡಗುವಂತಹವನ್ನು ರಸ್ತೆ ನಡುವೆಯೇ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈ ನಗರದಲ್ಲಿ ರಸ್ತೆ ನಡುವೆ ಶೃಂಗಾರ ಮಾಡುತ್ತಾ ಸಿಕ್ಕಿಬಿದ್ದ ಒಂದು ಜೋಡಿಯನ್ನು ನೋಡಿದ್ದೇವೆ. ಈಗ ಮತ್ತೆ ಅಂತಹ ಘಟನೆಯೊಂದು ನಡೆದಿದೆ. ಆದರೆ ಇವರು ಮಾತ್ರ ಕಾರಿನಲ್ಲಿ ಹೋಗುತ್ತಾ ಶೃಂಗಾರ ಮಾಡಿದರು. ಕೊನೆಗೆ ಇವರ ಶೃಂಗಾರ ಹೇಗೆ ಬಹಿರಂಗವಾಯಿತು ಎಂದರೆ… ಈಗ ಹೇಳುತ್ತೇವೆ ಓದಿ.

ಮಾಸ್ಕೋದಲ್ಲಿ ಗುರುವಾರ ಮಧ್ಯಾಹ್ನ ಒಂದು ಜೋಡಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗುತ್ತಿತ್ತು. ಕಾರಿನಲ್ಲಿ ಒಳ್ಳೆಯ ಸಂಗೀತ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. ವಾತಾವರಣ ಸಹ ತಣ್ಣಗಿತ್ತು. ಇನ್ನೇನು ಒಳ್ಳೆಯ ರೊಮ್ಯಾಂಟಿಕ್ ಮೂಡ್‌ಗೆ ಹೊರಟರು. ಕಾರಿನಲ್ಲಿ ಹೋಗುತ್ತಲೇ ಶೃಂಗಾರವನ್ನು ಆಸ್ವಾದಿಸಿದರು. ಒಂದು ಕಡೆ ಕಾರನ್ನು ನಿಯಂತ್ರಿಸುತ್ತಾ ಶೃಂಗಾರದ ಅನುಭವವನ್ನು ಆಸ್ವಾದಿಸಿದರು. ಅವರು ಕೆಳಗಿನ ಬಟ್ಟೆ ಮಾತ್ರ ಬಿಚ್ಚಿ ಶೃಂಗಾರದಲ್ಲಿ ಪಾಲ್ಗೊಂಡರು. ಇವರ ಮೇಲಿನ ಬಟ್ಟೆ ಹಾಗೆಯೇ ಇತ್ತು. ಆದರೆ ಈ ಸಂಗತಿ ಹೊರಗೆ ಹೇಗೆ ಗೊತ್ತಾಯಿತು ಎಂದು ಗೊತ್ತಾ..?

ಒಂದು ಟ್ರಾಫಿಕ್ ಸಿಗ್ನಲ್ ಬಳಿ ಕಾರು ನಿಂತಾಗ ಒಬ್ಬ ಭಿಕ್ಷುಕ ಬಂದು ಅವರ ಬಳಿ ಹಣಕ್ಕಾಗಿ ಕೇಳುತ್ತಿದ್ದ. ಆದರೆ ಎಷ್ಟು ಕೇಳಿದರೂ ಡೋರ್ ತೆಗೆಯಲಿಲ್ಲ. ಹಾಗಾಗಿ ಆ ಯುವಕ ಸ್ವಲ್ಪ ಜೋರಾಗಿ ಕಾರಿನ ಗ್ಲಾಸನ್ನು ತಟ್ಟಿ ಹಣ ಕೇಳಿದ. ಶೃಂಗಾರ ಮಾಡುತ್ತಾ ಒಳ್ಳೆ ಮೂಡ್‌ನಲ್ಲಿ ಇದ್ದ ಆ ಜೋಡಿಗೆ ಕಿರಿಕಿರಿ ಅನ್ನಿಸಿತು. ಆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯ ಬೇಕು ಎಂದು ಕಾರಿನ ಡೋರ್ ತೆಗೆದರು. ಅಷ್ಟೇ ಇನ್ನೇನಿದೆ. ಅವರು ಮಾಡುತ್ತಿದ್ದ ಕೆಲಸ ಹೊರಬಿತ್ತು. ಅವರಿಬ್ಬರನ್ನೂ ಆ ರೀತಿ ನೋಡಿ ಆ ಭಿಕ್ಷುಕ ಶಾಕ್ ಆದ.

ಅದೇ ಸಮಯಕ್ಕೆ ಆ ಕಾರಿನ ಪಕ್ಕ ಇನ್ನೊಂದು ಕಾರು ನಿಂತಿತು. ಇವರಿಬ್ಬರನ್ನೂ ನೋಡಿ ಆ ಕಾರಿನ ವ್ಯಕ್ತಿ ಶಾಕ್ ಆದ. ಇನ್ನು ತಡ ಮಾಡದೆ ತನ್ನ ಕೈಯಲ್ಲಿದ್ದ ಫೋನನ್ನು ತೆಗೆದುಕೊಂಡು ಈ ದೃಶ್ಯವನ್ನು ತನ್ನ ಫೋನ್‌ನಲ್ಲಿ ಸೆರೆಹಿಡಿದ. ವಿಡಿಯೋ ತೆಗೆದವ ಸುಮ್ಮನಿರುತ್ತಾನಾ. ಕ್ಷಣ ಮಾತ್ರ ತಡಮಾಡದೆ ನೆಟ್‌ನಲ್ಲಿ ಹಾಕಿದ. ಹಾಗಾಗಿ ಆ ವಿಡಿಯೋ ವೈರಲ್ ಆಯಿತು.

ಇದರಿಂದ ಪೊಲೀಸರು ಅವರ ಬಗ್ಗೆ ಹುಡುಕಾಡ ತೊಡಗಿದರು. ಕೊನೆಗೆ ಅವರಿಬ್ಬರನ್ನೂ ಹಿಡಿದು ಜೈಲಿಗೆ ಕಳುಹಿಸಿದ್ದಾರೆ. ಡ್ರೈವಿಂಗ್ ಮಾಡುತ್ತಾ ಶೃಂಗಾರದಲ್ಲಿ ಪಾಲ್ಗೊಂಡರೆ ಮಾಸ್ಕೋನಲ್ಲಿ 500 ರೂಬಲ್ಸ್ (532 ರೂಪಾಯಿ) ದಂಡ ವಿಧಿಸುತ್ತಾರೆ. ನೋಡಿದಿರಲ್ಲವೇ ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಿಕ್ಕಿ ಬಿದ್ದ ಈ ಜೋಡಿ ಬಗ್ಗೆ. ಈ ಘಟನೆ ಬಗ್ಗೆ ನೀವೇನಂತೀರ? ಈ ರೀತಿ ಎಲ್ಲೆಂದರಲ್ಲಿ ಶೃಂಗಾರ ಮಾಡುವವರಿಗೆ ಏನು ಶಿಕ್ಷೆ ನೀಡಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ.


Click Here To Download Kannada AP2TG App From PlayStore!

Share this post

scroll to top