ಗಂಡ ಹೆಂಡತಿ ಸಂಬಂಧ ಚಿರಕಾಲ ಹಾಯಾಗಿ ಇರಬೇಕಾದರೆ ಈ 11 ನಿಯಮಗಳನ್ನು ಪಾಲಿಸಿದರೆ ಸಾಕು!

 

ಹೆಣ್ಣಾಗಲಿ, ಗಂಡಾಗಲಿ ಮದುವೆಯಾಗದೆ ಸಿಂಗಲ್ ಆಗಿ ಇರುವವರೆಗೂ ಎಲ್ಲವೂ ಸಂತೋಷವಾಗಿ ಇರುತ್ತದೆ. ಜೀವನವನ್ನು ಎಂಜಾಯ್ ಮಾಡುತ್ತಾರೆ ಕೂಡ. ಫ್ರೆಂಡ್ಸ್ ಜತೆ ಓಡಾಡುವುದು, ಪಾರ್ಟಿ, ಪಬ್, ಟೂರ್‌ಗಳನ್ನು ಹಾಕುವುದು… ಹೀಗೆ ಬಹಳಷ್ಟು ಮಂದಿ ನಾನಾ ರೀತಿಯಲ್ಲಿ ಆ ಸಮಯದಲ್ಲಿ ಎಂಜಾಯ್ ಮಾಡುತ್ತಾರೆ. ಆದರೆ ಒಮ್ಮೆ ಮದುವೆಯಾದರೆ ಮಾತ್ರ ಇನ್ನು ಯಾರು ಏನೇ ಅಂದುಕೊಂಡರೂ, ಅಂದುಕೊಳ್ಳದಿದ್ದರೂ ಈ ರೀತಿಯ ಆಟಗಳೆಲ್ಲಾ ಬಂದ್ ಆಗುತ್ತವೆ. ಜತೆಗೆ ಕೆಲಸದ ಒತ್ತಡವೂ ಬೆಳೆಯುತ್ತದೆ. ಇದರಿಂದಾಗಿ ನಿತ್ಯ ಆಫೀಸಲ್ಲಿ ಕೆಲಸ ಮಾಡಿ ಮನೆಗೆ ಬಂದ ಮೇಲೆ ಸಂಗಾತಿ ಜತೆ ಕಳೆಯಲು ಸಮಯ ಸಹ ಸಿಗಲ್ಲ. ಕೆಲವು ಸಂದರ್ಭಗಳಲ್ಲಾದರೆ ಒಬ್ಬರನ್ನೊಬ್ಬರು ಹಿಡಿಸಿಕೊಳ್ಳುವುದೂ ಇಲ್ಲ. ಆದರೆ ದಂಪತಿಗಳು ಈ ರೀತಿ ಇರುವುದು ಒಳ್ಳೆಯದಲ್ಲ. ಅವರ ಜೀವನ ಸುಖವಾಗಿ ಇರಬೇಕೆಂದರೂ, ಯಾವುದೇ ರೀತಿಯ ತೊಂದರೆ ಇಲ್ಲದಂತೆ ಆರಾಮವಾಗಿ ಲೈಫ್ ಕಳೆಯಬೇಕೆಂದರೂ ಕೆಲವು ಸೂಚನೆಗಳನ್ನು ಪಾಲಿಸಬೇಕು ಎನ್ನುತ್ತಿದ್ದಾರೆ ವೈದ್ಯರು. ಆ ಸೂಚನೆಗಳು ಯಾವುದೆಂದರೆ…

happy-marriage-life

1. ದಂಪತಿಗಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಜಾಬ್ ಮಾಡಿದರೂ ಸಂಜೆ ಮನೆಗೆ ಬಂದ ಕೂಡಲೆ ತಮ್ಮ ಸಂಗಾತಿಯನ್ನು ಆತ್ಮೀಯವಾಗಿ ಒಮ್ಮೆ ಮಾತನಾಡಿಸಬೇಕಂತೆ. ಅಷ್ಟೇ ಹೊರತು ಅವರನ್ನು ಹಿಡಿಸಿಕೊಳ್ಳದೆ ಇರಬಾರದು. ಆ ರೀತಿ ಮಾತನಾಡುವುದರಿಂದ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ. ದಿನವೆಲ್ಲಾ ಆಫೀಸಲ್ಲಿ ಎದುರಾಗುವ ಒತ್ತಡ ಸಹ ದೂರವಾಗುತ್ತದೆ.

2. ಆಫೀಸಿನಿಂದ ಮನೆಗೆ ಬರುವಾಗ ಆಫೀಸು ವಿಷಯಗಳನ್ನು ಬಿಟ್ಟು ಮನೆ ಬಗ್ಗೆ, ಜೀವನ ಸಂಗಾತಿ ಬಗ್ಗೆ ಸ್ವಲ್ಪ ಹೊತ್ತು ಆಲೋಚಿಸಬೇಕಂತೆ. ಇದರಿಂದ ನಿಮ್ಮನ್ನು ಮನೆಯ ಬಳಿ ಇರುವವರು ಎಷ್ಟು ಪ್ರೀತಿಸುತ್ತಿದ್ದಾರೋ, ಅವರು ನಿಮ್ಮನ್ನು ಎಷ್ಟು ಮಿಸ್ ಆಗುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ.

3. ನಿತ್ಯ ಆಫೀಸ್ ಕೆಲಸಗಳಿಂದ ಒದ್ದಾಡುತ್ತಿದ್ದರೂ, ಆಗಾಗ ಜಾಲಿಯಾಗಿ ಹೊರಗೆ ಸುತ್ತಾಡಿ ಬರಬೇಕಂತೆ. ಯಾವುದಾರು ಪಾರ್ಕ್ ಅಥವಾ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗಿ ಎಂಜಾಯ್ ಮಾಡಿ ಬರಬೇಕು.

4. ಬಹಳಷ್ಟು ದಂಪತಿಗಳು ತಮ್ಮ ಜೀವನ ಸಂಗಾತಿಯ ಜತೆ ಲೈಫನ್ನು ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಇತರರು ಯಾರಾದರು ಮನೆಗೆ ಬಂದು ಡಿಸ್ಟರ್ಬ್ ಮಾಡದಂತೆ ರೂಮಿನ ಬಾಗಿಲುಗಳನ್ನು ಹಾಕಿಕೊಂಡು ಲೈಫನ್ನು ಎಂಜಾಯ್ ಮಾಡಬೇಕಂತೆ. ಎಲ್ಲವನ್ನೂ ತೆರೆದಿಡಬಾರದು. ಆ ರೀತಿ ಇದ್ದರೆ ಕೆಲವು ದಂಪತಿಗಳಿಗೆ ಇಷ್ಟವಾಗಲ್ಲವಂತೆ.

5. ದೇಹದಿಂದ ದುರ್ವಾಸನೆ ಬರುವುದು, ಗ್ಯಾಸ್ ಸಮಸ್ಯೆಗಳು ಇವೆಲ್ಲಾ ಪ್ರಕೃತಿ ಸಹಜ ಕ್ರಿಯೆಗಳು. ಇವು ಪ್ರತಿಯೊಬ್ಬರಿಗೂ ಸಹಜ. ಆದರೆ ಅವುಗಳಿಂದ ಬೇಸರ ಮಾಡಿಕೊಳ್ಳಬಾರದಂತೆ. ಇದೇನಿದು ದುರ್ವಾಸನೆ ಎಂದು ಅವರನ್ನು ದೂರ ತಳ್ಳಬಾರದು.

6. ಮನೆಯಲ್ಲಿ ಯಾವುದೇ ಕೆಲಸ ಮಾಡಿದರೂ ಸಾಮಾನ್ಯವಾಗಿ ಮಹಿಳೆಯರೇ ಮಾಡುತ್ತಾರೆ. ಗಂಡಸರು ಮಾಡಲ್ಲ. ತರಕಾರಿ ಹೆಚ್ಚುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಹೆಂಗಸರ ಜತೆ ಹಂಚಿಕೊಂಡರೆ ಆಗ ಆ ದಂಪತಿಗಳ ಜೀವನ ಸಂತೋಷವಾಗಿ ಇರುತ್ತದೆ.

7. ಬಹಳಷ್ಟು ಮಂದಿ ಸ್ರೀ ಪುರುಷರು ಮದುವೆಯಾದ ಸ್ವಲ್ಪ ದಿನಗಳಿಗೆ ಅಥವಾ ಸ್ವಲ್ಪ ತಿಂಗಳ ಬಳಿಕ ತಮ್ಮ ಹಾಬಿಗಳನ್ನು, ಇಷ್ಟಗಳನ್ನು ಬಿಟ್ಟುಬಿಡುತ್ತಾರಂತೆ. ಆದರೆ ಆ ರೀತಿ ಮಾಡಬೇಕಾದ ಅಗತ್ಯ ಇಲ್ಲವಂತೆ. ಜೀವನ ಸಂಗಾತಿ ಜತೆ ಹೊಂದಿಕೊಂಡು ಹೋಗುತ್ತಾ ತಮ್ಮ ಇಷ್ಟ, ಹಾಬಿಗಳನ್ನು ಮುಂದುವರೆಸಿದರೆ ತೊಂದರೆ ಏನೂ ಇರಲ್ಲ.

8. ದಂಪತಿಗಳು ಎಂದ ಮೇಲೆ ಇಬ್ಬರ ನಡುವೆ ಕಠಿಣ ಸಂದರ್ಭಗಳೂ ಬರುತ್ತಿರುತ್ತವೆ. ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ತೀವ್ರವಾಗಿ ಮನೋಭಾವಗಳನ್ನು ವ್ಯಕ್ತಪಡಿಸುವುದು, ಅಥವಾ ಬೈಯ್ಯುವುದನ್ನು ಮಾಡಬಾರದು. ಆ ರೀತಿ ಮಾಡಿದರೆ ಎದುರಿನವರಿಗೆ ಜೀವನ ಸಂಗಾತಿ ಮೇಲಿನ ಪ್ರೀತಿ ದೂರವಾಗುತ್ತದೆ.

9. ದಂಪತಿಗಳಲ್ಲಿ ಇಬ್ಬರೂ ತಮ್ಮ ಎರಡೂ ಕಡೆಯ ಬಂಧುಗಳು, ಕುಟುಂಬ ಸದಸ್ಯರು, ಸ್ನೇಹಿತರನ್ನು ಸಮಾನ ಗೌರವ ಕೊಡಬೇಕು. ಇದರಿಂದ ಜೀವನ ಸಂಗಾತಿಯ ಮೇಲೆ ಒಳ್ಳೆಯ ಅಭಿಪ್ರಾಯ ಉಂಟಾಗುತ್ತದೆ.

10. ಮನೆಯಲ್ಲಿ ತುಂಬಾ ಕೋಣೆಗಳಿರುವ ದಂಪತಿಗಳು ಯಾವಾಗಲೂ ಒಂದೇ ಕೋಣೆಯಲ್ಲಿ ಅಲ್ಲದೆ ಇಬ್ಬರೂ ಸ್ವಲ್ಪ ಸಮಯ ಬೇರೆ ಬೇರೆ ರೂಮುಗಳಲ್ಲಿ ಕಳೆದರೆ ಇದರಿಂದ ಥ್ರಿಲ್ಲಿಂಗ್ ಆಗಿರುತ್ತದೆ.

11. ದಂಪತಿಗಳಿಬ್ಬರೂ ತಮ್ಮ ಸಂಬಂಧಗಳಲ್ಲಿ ಏನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ, ಏನೆಲ್ಲಾ ಗ್ರಹಿಸುತ್ತಿದ್ದಾರೆ ಎಂದು ಯಾವಾಗಲೂ ತಿಳಿದುಕೊಳ್ಳುತ್ತಾ ಇರಬೇಕು. ಇದರಿಂದ ಜೀವನವನ್ನು ಆನಂದವಾಗಿ ಕಳೆಯಲು ಸಾಧ್ಯವಾಗುತ್ತದೆ.


Click Here To Download Kannada AP2TG App From PlayStore!