ಕೋರ್ಟು ಒಳಗೆ ಮಗಳು ಜಡ್ಜ್, ಹೊರಗೆ ತಂದೆ ಟೀ ಮಾರುತ್ತಾನೆ, ಸಂಜೆ ಇಬ್ಬರು ಜೊತೆಗೆ ಮನೆಗೆ ಹೋಗುತ್ತಾರೆ.

ಆಕೆಯ ಹೆಸರು ಶೃತಿ, ಪಂಜಾಬಿನ ಜಲಾಂದರ್ ನ್ಯಾಯಾಲಯದಲ್ಲಿ ಜಡ್ಜ್. ಅದೇ ಕೋರ್ಟ್ ಹೊರಗೆ ಸುರೇಂಧರ್ ಕುಮಾರ್ ಟೀ ಮಾರುತ್ತಾನೆ. ಈ ಸುರೇಮೂ್ ಕುಮಾರ್ ಶೃತಿಯ ತಂದೆ. ಕೇಳಲು ಅಚ್ಚರಿಯಾದರೂ ಇದು ನಿಜ. ಒಬ್ಬ ಕಷ್ಟ ಜೀವಿ ತಂದೆ, ಸಾಧಿಸುವ ಹಠದ ಮಗಳ ಗೆಲುವಿನ ಕಥೆಯಿದು.ಶೃತಿ ಚಿಕ್ಕಂದಿನಿಂದಲೂ ತುಂಬ ಬುದ್ದಿವಂತ ಹುಡುಗಿ. ಓದಿನಲ್ಲಿ ಯಾವಾಗಲೂ ಫಸ್ಟ್. ಆಕೆಯ ತಂದೆ ಸುರೇಂದ್ರ ಕುಮಾರ್ ಜಲಂಧರ್ ನ್ಯಾಯಾಲಯದ ಮುಂದೆ ಒಂದು ಚಿಕ್ಕ ಪೆಟ್ಟಿಗೆ ಅಂಗಡಿಯಲ್ಲಿ ಟೀ ಮಾರುತ್ತಾ ಕುಟುಂಬ ಸಾಕುತ್ತಿದ್ದಾನೆ. ಟೀ ಮಾರಿ ಬಂದ ಹಣದಲ್ಲೇ ಮಗಳನ್ನು ಓದಿಸಿದ್ದಾನೆ.

ಚಿಕ್ಕಂದಿನಿಂದಲೂ ತಂದೆಯ ಕಷ್ಟವನ್ನು ಕಣ್ಣಾರೆ ನೋಡಿದ ಶೃತಿ, ಚನ್ನಾಗಿ ಓದಿ ತನ್ನ ತಂದೆತಾಯಿಯನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಳು. ಸ್ಟೇಟ್ ಪಬ್ಲಿಕ್ ಸ್ಕೂಲ್ 10th ಪಾಸ್ ಮಾಡಿದ ಶೃತಿ, ಪಾಟಿಯಾಲದಲ್ಲಿನ ಪಂಜಾಬ್ ಯುನಿವರ್ಸಿಟಿಯಲ್ಲಿ LLB ಪೂರೈಸಿದ್ದಾಳೆ. ಮೊದಲ ಬಾರಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದ ಶೃತಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾಳೆ.

ಮತ್ತೊಂದು ಪರೀಕ್ಷೆಯಲ್ಲೂ ಉತ್ತೀರ್ಣಳಾಗಿ ಜಡ್ಜ್ ಆಗಿ ಆಯ್ಕೆಯಾಗಿದಳು. ಜಲಂಧರ್ ಕೋರ್ಟ್ ನಲ್ಲಿ ಜಡ್ಜ್ ಆಗಿ ಪೋಸ್ಟಿಂಗ್ ಕೂಡ ಲಭಿಸಿತು. ಹಾಗಾಗಿ ಪ್ರತಿದಿನ ಬೆಳಿಗ್ಗೆ ತಂದೆ ಮಗಳು ಮನೆಯಿಂದ ಹೊರಟು ಕೋರ್ಟ್ ಗೆ ಬರುತ್ತಾರೆ. ಮಗಳು ಕೋರ್ಟಿನಲ್ಲಿ ಜಡ್ಜ್ ಆದರೂ ಆತ ಯಾವುದೇ ಅಹಂಕಾರವಿಲ್ಲದೆ ಬಂದ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಾ ಟೀ ಮಾಡಿಕೊಡುತ್ತಾನೆ.

ನಿಮ್ಮ ಮಗಳು ಜಡ್ಜ್ ಅಲ್ಲವೇ ಮತ್ತೆ ಟೀ ಮಾರುವ ಕೆಲಸ ಯಾಕೆ ಮಾಡುತ್ತೀರಾ… ಎಂದು ತುಂಬಾ ಜನ ಹೇಳಿದರೂ… ಮಗಳು ಜಡ್ಜ್  ಆಗಲು ಈ ಟೀ ಅಂಗಡಿನೇ ಕಾರಣ ಎಂದು ಹೇಳುತ್ತಾನೆ. ಮಗಳಿಗೂ ಕೂಡ ತಂದೆ ಟೀ ಮಾರುವುದನ್ನು ಯಾವುದೇ ಮುಜುಗರವಿಲ್ಲದೇ ಒಪ್ಪಿಕೊಳ್ಳುತ್ತಾಳೆ. ಸಂಜೆ ಇಬ್ಬರೂ ಜೊತೆಗೆ ಮನೆಗೆ ಹೋಗುತ್ತಾರೆ.

ಶೃತಿ ಸಾಧಿಸಿದ ಗೆಲುವಿನ ಮುಂದೆ ಬಡತನ, ಸೋಲು ಎಂಬ ಪದಗಳು ಆಕೆ ಹತ್ತಿರ  ಕೂಡ ಬರಲಿಲ್ಲಿ. ಛಲದೊಂದಿಗೆ ಪ್ರಯತ್ನಪಟ್ಟರೆ ಎಷ್ಟೇ ತೊಂದರೆಗಳು ಬಂದರೂ ಹುಲ್ಲು ಕಡ್ಡಿಗೆ ಸಮಾನ ಎಂದು ನಿರೂಪಿಸಿದ್ದಾಳೆ ಶೃತಿ, ಇಂದಿನ ಯುವಕ-ಯುವತಿಯರಿಗೆ ಈಕೆ ಆದರ್ಶಪ್ರಯಾಳಾಗಿದ್ದಾಳೆ.


Click Here To Download Kannada AP2TG App From PlayStore!

Share this post

scroll to top